ಮತಾಂತರ ನಿಷೇಧ ಕಾಯಿದೆಯ ಕೆಲ ಸೆಕ್ಷನ್‌ಗಳಿಗೆ ತಡೆ ನೀಡಿದ ಗುಜರಾತ್‌ ಹೈಕೋರ್ಟ್‌

ಅಂತರ್‌ ಧರ್ಮೀಯ ವಿವಾಹಕ್ಕೆ ಸಂಬಂಧಿಸಿದ ಕೆಲವು ಸೆಕ್ಷನ್‌ಗಳಿಗೆ ತಡೆ ನೀಡಿದೆ. ಹೈಕೋರ್ಟ್‌ನ ಈ ಕ್ರಮದಿಂದಾಗಿ ಕೇವಲ ಅಂತರ್‌ಧರ್ಮೀಯ ವಿವಾಹ ಎಂಬ ಕಾರಣಕ್ಕೆ ಎಫ್‌ಐಆರ್‌ ದಾಖಲಿಸಲು ಇನ್ನುಮುಂದೆ ಸಾಧ್ಯವಾಗುವುದಿಲ್ಲ. ಅಲ್ಲದೆ, ಮತಾಂತರ ನಿಷೇಧ ಕಾಯಿದೆ ಅಡಿಯಲ್ಲಿ ಸದ್ಯಕ್ಕೆ ಶಿಕ್ಷೆ ಹಾಗೂ ದಂಡ ವಿಧಿಸಲು ಸಾಧ್ಯವಿಲ್ಲ.

ಮತಾಂತರ ನಿಷೇಧ ಕಾಯಿದೆಯ ಕೆಲ ಸೆಕ್ಷನ್‌ಗಳಿಗೆ ತಡೆ ನೀಡಿದ ಗುಜರಾತ್‌ ಹೈಕೋರ್ಟ್‌
Linkup
ಅಹಮದಾಬಾದ್‌: ರಾಜ್ಯದಲ್ಲಿ ಜಾರಿಗೆ ತರಲಾಗಿರುವ ಮತಾಂತರ ನಿಷೇಧ ಕಾಯಿದೆಯಲ್ಲಿನ ಅಂತರ್‌ ಧರ್ಮೀಯ ವಿವಾಹಕ್ಕೆ ಸಂಬಂಧಿತ ಕೆಲವು ನಿಯಮಗಳಿಗೆ ಗುಜರಾತ್‌ ಹೈಕೋರ್ಟ್‌ ಗುರುವಾರ ತಡೆ ನೀಡಿದೆ. ಅನಗತ್ಯ ಕಿರುಕುಳದಿಂದ ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ ತಡೆಯ ಆದೇಶವನ್ನು ನೀಡಲಾಗಿದೆ ಎಂದು ಹೈಕೋರ್ಟ್‌ನ ಮುಖ್ಯ ನ್ಯಾ.ವಿಕ್ರಮ್‌ನಾಥ್‌ ಹಾಗೂ ನ್ಯಾ.ಬಿರೇನ್‌ ವೈಷ್ಣವ್‌ ಅವರಿದ್ದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ. ಹೊಸ ಕಾಯಿದೆಯಲ್ಲಿನ ಕೆಲವು ಅನುಚ್ಛೇದಗಳು ಅಸಂವಿಧಾನಿಕ ಎಂದು ಕಳೆದ ತಿಂಗಳು ಜಾಮಿಯತ್‌ ಉಲೇಮಾ-ಇ-ಹಿಂದ್‌ನ ಗುಜರಾತ್‌ ಘಟಕದಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್‌, ಅಂತರ್‌ ಧರ್ಮೀಯ ವಿವಾಹಕ್ಕೆ ಸಂಬಂಧಿಸಿದ ಕೆಲವು ಸೆಕ್ಷನ್‌ಗಳಿಗೆ ತಡೆ ನೀಡಿದೆ. ಹೈಕೋರ್ಟ್‌ನ ಈ ಕ್ರಮದಿಂದಾಗಿ ಕೇವಲ ಎಂಬ ಕಾರಣಕ್ಕೆ ಎಫ್‌ಐಆರ್‌ ದಾಖಲಿಸಲು ಇನ್ನುಮುಂದೆ ಸಾಧ್ಯವಾಗುವುದಿಲ್ಲ. ಅಲ್ಲದೆ, ಮತಾಂತರ ನಿಷೇಧ ಕಾಯಿದೆ ಅಡಿಯಲ್ಲಿ ಸದ್ಯಕ್ಕೆ ಶಿಕ್ಷೆ ಹಾಗೂ ದಂಡ ವಿಧಿಸಲು ಸಾಧ್ಯವಿಲ್ಲ. ಗುಜರಾತ್‌ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆಗೆ ಕಳೆದ ಬಜೆಟ್‌ ಅಧಿವೇಶನದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಅನುಮೋದಿಸಲಾಗಿತ್ತು. ಮೇ 22ರಂದು ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಮಸೂದೆಗೆ ಅಂಕಿತ ಹಾಕಿದ್ದರು. ಜೂನ್‌ 15ರಿಂದ ನೂತನ ಕಾಯಿದೆ ರಾಜ್ಯದಲ್ಲಿ ಜಾರಿಗೆ ಬಂದಿತ್ತು.