ಮುಂಬೈ: ಎನ್‌ಸಿಪಿ ವಿರೋಧದ ಬಳಿಕ ನರೇಂದ್ರ ಮೋದಿ ದೇಗುಲದಲ್ಲಿದ್ದ ಮೋದಿ ಪುತ್ಥಳಿ ತೆರವು!

‘ಮೋದಿ ಅವರಿಗಾಗಿ ದೇವಾಲಯ ನಿರ್ಮಿಸುತ್ತಲೇ ನಗರದಲ್ಲಿ ಆಶಾವಾದ ಚಿಗುರೊಡೆದಿದೆ. ಪೆಟ್ರೋಲ್‌ ಬೆಲೆ ಇಳಿಕೆಯಾಗಿದೆ, ಹಣದುಬ್ಬರ ಕುಸಿದಿದೆ, ಜನರ ಖಾತೆಗೆ 15 ಲಕ್ಷ ರೂ. ಜಮೆಯಾಗಲಿದೆ. ಹಾಗಾಗಿ ನಾವು ದೇವರನ್ನು ನೋಡಲು ದೇಗುಲಕ್ಕೆ ಬಂದೆವು. ಆದರೆ, ದೇಗುಲದಲ್ಲಿ ದೇವರೇ ಇಲ್ಲ’ ಎಂದು ಎನ್‌ಸಿಪಿ ನಗರ ಘಟಕದ ಅಧ್ಯಕ್ಷ ಪ್ರಶಾಂತ್‌ ಜಗತಾಪ್‌ ವ್ಯಂಗ್ಯವಾಡಿದ್ದಾರೆ.

ಮುಂಬೈ: ಎನ್‌ಸಿಪಿ ವಿರೋಧದ ಬಳಿಕ ನರೇಂದ್ರ ಮೋದಿ ದೇಗುಲದಲ್ಲಿದ್ದ ಮೋದಿ ಪುತ್ಥಳಿ ತೆರವು!
Linkup
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಮಹಾರಾಷ್ಟ್ರದಲ್ಲಿ ದೇಗುಲ ಕಟ್ಟಿದ್ದಕ್ಕೆ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ದೇವಾಲಯದಲ್ಲಿದ್ದ ಮೋದಿ ಪುತ್ಥಳಿ ತೆರವುಗೊಳಿಸಲಾಗಿದೆ. ಮಹಾರಾಷ್ಟ್ರದ ಅನುಧ್‌ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ, ಮೋದಿ ಅಪ್ಪಟ್ಟ ಅಭಿಮಾನಿ ಮಯೂರ್‌ ಮುಂಡೆ ಅವರು ದೇವಾಲಯ ನಿರ್ಮಿಸಿ, ಅದರಲ್ಲಿ ಪ್ರಧಾನಿ ಪುತ್ಥಳಿ ಸ್ಥಾಪಿಸಿದ್ದರು. ಆಗಸ್ಟ್‌ 15ರಂದು ದೇವಾಲಯಕ್ಕೆ ಚಾಲನೆ ನೀಡಿದ್ದರು. ಆದರೆ, ಗುರುವಾರ ಎನ್‌ಸಿಪಿ ಕಾರ್ಯಕರ್ತರು ದೇವಾಲಯದ ಎದುರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಯೂರ್‌ ಮುಂಡೆಯವರೇ ಪುತ್ಥಳಿ ತೆರವುಗೊಳಿಸಿದ್ದಾರೆ. ‘ಮೋದಿ ಅವರಿಗಾಗಿ ದೇವಾಲಯ ನಿರ್ಮಿಸುತ್ತಲೇ ನಗರದಲ್ಲಿ ಆಶಾವಾದ ಚಿಗುರೊಡೆದಿದೆ. ಪೆಟ್ರೋಲ್‌ ಬೆಲೆ ಇಳಿಕೆಯಾಗಿದೆ, ಹಣದುಬ್ಬರ ಕುಸಿದಿದೆ, ಜನರ ಖಾತೆಗೆ 15 ಲಕ್ಷ ರೂ. ಜಮೆಯಾಗಲಿದೆ. ಹಾಗಾಗಿ ನಾವು ದೇವರನ್ನು ನೋಡಲು ದೇಗುಲಕ್ಕೆ ಬಂದೆವು. ಆದರೆ, ದೇಗುಲದಲ್ಲಿ ದೇವರೇ ಇಲ್ಲ’ ಎಂದು ಎನ್‌ಸಿಪಿ ನಗರ ಘಟಕದ ಅಧ್ಯಕ್ಷ ಪ್ರಶಾಂತ್‌ ಜಗತಾಪ್‌ ವ್ಯಂಗ್ಯವಾಡಿದ್ದಾರೆ. ‘ಮೋದಿ ಅವಧಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಾಶ್ಮೀರವನ್ನು 370ನೇ ವಿಧಿಯಿಂದ ಮುಕ್ತಗೊಳಿಸಿರುವುದು ಸೇರಿ ಹಲವು ಕ್ರಮಗಳು ಉತ್ತಮವಾಗಿವೆ. ಹಾಗಾಗಿ ಅವರ ಮೇಲಿನ ಅಭಿಮಾನಕ್ಕಾಗಿ ದೇಗುಲ ನಿರ್ಮಿಸಿದ್ದೇನೆ’ ಎಂದು ಈ ಹಿಂದೆ ಮಯೂರ್‌ ಮುಂಡೆ ಹೇಳಿದ್ದರು. ಆದರೆ, ಪುತ್ಥಳಿ ತೆರವು ಬಳಿಕ ಮುಂಡೆ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.