NDTV ಸೇಲ್ ವದಂತಿ ತಂದ ಫಜೀತಿ..! ಪರ-ವಿರೋಧ ಸಮರದಲ್ಲಿ ಅದಾನಿ ಟ್ರೆಂಡಿಂಗ್..!

ಎನ್‌ಡಿಟಿವಿ ಸಂಸ್ಥೆ ಮಾತ್ರ ತಮ್ಮ ಸಂಸ್ಥೆ ಮಾರಾಟಕ್ಕಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ. ತಮ್ಮ ಸಂಸ್ಥೆಯನ್ನು ಮಾರಾಟ ಮಾಡುವ ಯಾವುದೇ ಚಿಂತನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಿಗಳ ಸಂಭ್ರಮಾಚರಣೆಗೆ ಯಾವುದೇ ಕುಂದು ಉಂಟಾಗಿಲ್ಲ..!

NDTV ಸೇಲ್ ವದಂತಿ ತಂದ ಫಜೀತಿ..! ಪರ-ವಿರೋಧ ಸಮರದಲ್ಲಿ ಅದಾನಿ ಟ್ರೆಂಡಿಂಗ್..!
Linkup
ಎನ್‌ಡಿ ಟಿವಿಯನ್ನು ಉದ್ಯಮಿ ಖರೀದಿಸುತ್ತಾರಾ..? ಹೀಗೊಂದು ಮಾತು ಕೇಳಿಬಂದಿದ್ದೇ ತಡ, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಚರ್ಚೆ ಶುರುವಾಗಿಬಿಟ್ಟಿದೆ..! ಸಮೂಹ ಸಂಸ್ಥೆಯನ್ನು ನಾವು ಮಾಡಲ್ಲ, ಈ ಬಗ್ಗೆ ಚರ್ಚೆಯನ್ನೂ ನಡೆಸಿಲ್ಲ ಎಂದು ಎನ್‌ಡಿಟಿವಿ ಖುದ್ದಾಗಿ ಸ್ಪಷ್ಟನೆ ನೀಡಿದ್ದರೂ ಸಹ, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ ಹಾವಳಿಗೆ ಬ್ರೇಕ್‌ ಬಿದ್ದಿಲ್ಲ..! ಅದರಲ್ಲೂ ಟ್ವಿಟ್ಟರ್‌ನಲ್ಲಿ ಅದಾನಿ ಟ್ರೆಂಡಿಂಗ್ ಆಗಿದ್ದಾರೆ..! ಎನ್‌ಡಿಟಿವಿಯಲ್ಲಿ ಶೇ. 61.54ರಷ್ಟು ಷೇರುಗಳನ್ನು ಹೊಂದಿರುವ ರಾಧಿಕಾ ರಾಯ್ ಹಾಗೂ ಪ್ರಣಯ್ ರಾಯ್ ಅವರೇ ತಮ್ಮ ಸಂಸ್ಥೆ ಮಾರಾಟಕ್ಕೆ ಇಲ್ಲ ಎಂದಿದ್ದಾರೆ. ಆದ್ರೂ ಕೂಡಾ ಅದಾನಿ ಖರೀದಿಸಲಿದ್ದಾರೆ ಎಂಬ ವಿಚಾರ ಹೊರಬಿದ್ದ ಕೂಡಲೇ ಸಂಸ್ಥೆಯ ಷೇರು ಮೌಲ್ಯವೂ ಹೆಚ್ಚಳ ಕಂಡಿದೆ. ಇನ್ನೊಂದೆಡೆ, ಸೈದ್ಧಾಂತಿಕವಾಗಿ ಅದಾನಿ ಉದ್ಯಮದ ವಿಚಾರವಾಗಿ ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದ ವಾಹಿನಿ, ಇದೀಗ ಅದೇ ಉದ್ಯಮಿಯ ಒಡೆತನಕ್ಕೆ ಒಳಪಡುತ್ತಾ ಎಂಬ ಕುರುಹದ ಮಾತುಗಳೂ ಕೇಳಿ ಬರ್ತಿವೆ..! ಅದಾನಿ ವಿರುದ್ಧ ಬರೋಬ್ಬರಿ 7 ವರ್ಷಗಳ ಕಾಲ ಹಾರಾಡಿದ್ದ ಸಂಸ್ಥೆಯೇ ಇಂದು ಅದಾನಿ ಟಿವಿ ಆಗಲು ಹೊರಟಿದೆಯಾ ಎಂದು ಪ್ರಶ್ನಿಸುತ್ತಿರುವ ನೆಟ್ಟಿಗರು, ಎನ್‌ಡಿಟಿವಿಯ ಖ್ಯಾತ ನಿರೂಪಕ ರವೀಶ್ ಕುಮಾರ್‌ ಅವರು ಯೋಗ ಮಾಡುವ ಪೋಸ್‌ ಹಾಕಿ ತಮಾಷೆ ಮಾಡ್ತಿದ್ದಾರೆ..! ಎನ್‌ಡಿಟಿವಿ ಅಭಿಮಾನಿಗಳೂ ಕೂಡಾ ಕುಹಕದ ರೀತಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಅದಾನಿ ಅವರೇಕೆ ಪಾಕಿಸ್ತಾನಿ ನ್ಯೂಸ್‌ ಚಾನಲ್‌ಗೆ ಹೂಡಿಕೆ ಮಾಡ್ತಿದ್ದಾರೆ ಎಂದು ತಿವಿದಿದ್ದಾರೆ..! ಒಂದು ವೇಳೆ ಎನ್‌ಡಿಟಿವಿ ಮಾರಾಟವಾದ್ರೆ ಹೆಸರು ಬದಲಾಯಿಸಬೇಕೆಂದು ಸಲಹೆಗಳೂ ಕೇಳಿ ಬರ್ತಿವೆ..! ಕೆಲವರಂತೂ ಎನ್‌ಡಿಟಿವಿ ಎಂಬ ಚಾನಲ್‌ ಹೆಸರನ್ನೇ ಬದಲಿಸಿ ನದಾನಿ ಟಿವಿ ಎಂದು ಮಾಡಬೇಕೆಂದು ಲೇವಡಿ ಮಾಡ್ತಿದ್ದಾರೆ. ಇನ್ನೂ ಕೆಲವರು ಈ ವಿಚಾರವಾಗಿ ಆಳವಾಗಿ ಅಧ್ಯಯನವನ್ನೇ ಮಾಡಿದ್ದಾರೆ..! ಒಂದು ವೇಳೆ ಅದಾನಿ ಗ್ರೂಪ್‌ ಎನ್‌ಡಿಟಿವಿಯನ್ನು ಖರೀದಿಸಿದರೆ ಎಡಪಂಥೀಯರು, ಹುಸಿ ಉದಾರವಾದಿಗಳು ಎಲ್ಲಿಗೆ ಹೋಗ್ತಾರೆ ಎಂದು ಊಹಿಸಿದ್ದಾರೆ..! ಎಲ್ಲರೂ ಎನ್‌ಡಿಟಿವಿಯಿಂದ ಸಾಮೂಹಿಕ ವಲಸೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿಯುವ ಜೊತೆಯಲ್ಲೇ ರವೀಶ್‌ ಕುಮಾರ್‌ ಅವರಿಗೆ ಸ್ತ್ರೀ ವೇಷ ಹಾಕಿದ್ದಾರೆ..! ಈ ಸುದ್ದಿ ಹರಡಿದ್ದು ಹೇಗೆ ಎಂದು ಒಂದು ಕಡೆ ಜನರು ತಲೆ ಕೆಡಿಸಿಕೊಳ್ತಿದ್ದರೆ, ಮತ್ತೊಂದೆಡೆ ಎನ್‌ಡಿಟಿವಿ ಷೇರುಗಳ ಮೌಲ್ಯ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಹರಡಿರುವ ಗಾಳಿ ಸುದ್ದಿಗಳಿಂದಾಗಿ ಷೇರುಗಳ ಮೌಲ್ಯ ಈ ಹೊತ್ತಿಗೆ ಹೆಚ್ಚಳ ಕಂಡರೂ ನಂತರದ ದಿನಗಳಲ್ಲಿ ಸಹಜತೆಗೆ ಬರಬಹುದು. ಆದ್ರೆ, ಎನ್‌ಡಿಟಿವಿ ಸಂಸ್ಥೆ ಮಾತ್ರ ತಮ್ಮ ಸಂಸ್ಥೆ ಮಾರಾಟಕ್ಕಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ. ತಮ್ಮ ಸಂಸ್ಥೆಯನ್ನು ಮಾರಾಟ ಮಾಡುವ ಯಾವುದೇ ಚಿಂತನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಿಗಳ ಸಂಭ್ರಮಾಚರಣೆಗೆ ಯಾವುದೇ ಕುಂದು ಉಂಟಾಗಿಲ್ಲ..! ಒಟ್ಟಿನಲ್ಲಿ ವಾರದ ಮೊದಲ ದಿನವನ್ನು ಕಿಕ್ ಸ್ಟಾರ್ಟ್‌ ಮಾಡಲು ನೆಟ್ಟಿಗರಿಗೆ ಒಂದೊಳ್ಳೆ ಸಬ್ಜೆಕ್ಟ್‌ ಸಿಕ್ಕಿದಂತಾಗಿದೆ..!