ಸೋನಿಯಾ ಭೇಟಿಯಾಗದೇ ಕ್ಯಾ. ಅಮರೀಂದರ್‌ ಸಿಂಗ್‌ ದಿಲ್ಲಿಯಿಂದ ವಾಪಸ್‌?

ಎರಡು ದಿನ ದಿಲ್ಲಿಗೆ ತೆರಳಿದ್ದ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡದೆಯೇ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.

ಸೋನಿಯಾ ಭೇಟಿಯಾಗದೇ ಕ್ಯಾ. ಅಮರೀಂದರ್‌ ಸಿಂಗ್‌ ದಿಲ್ಲಿಯಿಂದ ವಾಪಸ್‌?
Linkup
ಹೊಸದಿಲ್ಲಿ: ಪಂಜಾಬ್‌ನಲ್ಲಿಉಂಟಾಗಿರುವ ಕಾಂಗ್ರೆಸ್‌ ಆಂತರಿಕ ಬಿಕ್ಕಟ್ಟು ಬಹಿರಂಗವಾದರೂ, ಶಮನವಾಗುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಎರಡು ದಿನ ದಿಲ್ಲಿಗೆ ತೆರಳಿದ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರು ಪಕ್ಷದ ಅಧ್ಯಕ್ಷೆ ಹಾಗೂ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡದೆಯೇ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹಾಗೂ ಶಾಸಕ ನವಜೋತ್‌ ಸಿಂಗ್‌ ಸಿಧು ನಡುವಿನ ಮುನಿಸು ಮತ್ತಷ್ಟು ಬಿಗಡಾಯಿಸಿದೆ. ಪಕ್ಷದ ಹಲವು ನಾಯಕರು ಕೂಡ ಸಿಎಂ ವಿರುದ್ಧ ತಿರುಗಿಬಿದ್ದಿದ್ದಾರೆ. ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್‌ ತ್ರಿಸದಸ್ಯ ಸಮಿತಿ ರಚಿಸಿದ್ದು, ಸಮಿತಿ ಸದಸ್ಯರನ್ನಷ್ಟೇ ಭೇಟಿಯಾಗಿರುವ ಅಮರೀಂದರ್‌ ಸಿಂಗ್‌, ಸೋನಿಯಾ ಗಾಂಧಿ ಮತ್ತು ದರ್ಶನ ಮಾಡದೇ ವಾಪಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಮುಖ್ಯಮಂತ್ರಿಯವರು ಹೊಸದಿಲ್ಲಿಯಲ್ಲಿಯೇ ಇದ್ದಾರೆ. ಶೀಘ್ರದಲ್ಲೇ ಅವರು ಸೋನಿಯಾ ಅಥವಾ ರಾಹುಲ್‌ರನ್ನು ಭೇಟಿಯಾಗಿ, ಬಿಕ್ಕಟ್ಟು ಶಮನ ಮಾಡಿಕೊಳ್ಳುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಉಭಯ ನಾಯಕರ ನಡುವಿನ ಭಿನ್ನಾಭಿಪ್ರಾಯವು ಪಕ್ಷವನ್ನು ಪೇಚಿಗೆ ಸಿಲುಕಿಸಿದೆ.