ಹಸುವಿನ ಸಗಣಿ, ಗೋಮೂತ್ರದಿಂದ ದೇಶದ ಆರ್ಥಿಕತೆ ಸದೃಢ: ಶಿವರಾಜ್‌ ಸಿಂಗ್‌ ಚೌಹಾಣ್‌

ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹಸುವಿನ ಸಗಣಿ ಮತ್ತು ಗೋಮೂತ್ರದಿಂದ ದೇಶದ ಆರ್ಥಿಕತೆ ಸದೃಢ ಆಗುತ್ತದೆ ಎಂದು ಹೇಳಿದ್ದಾರೆ. ಗೋವುಗಳ ಸಂತತಿ ಉಳಿಸಲು ಸರ್ಕಾರದ ಜೊತೆ ಸಮಾಜವೂ ಕೆಲಸ ಮಾಡಬೇಕು ಎಂದು ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಹಸುವಿನ ಸಗಣಿ, ಗೋಮೂತ್ರದಿಂದ ದೇಶದ ಆರ್ಥಿಕತೆ ಸದೃಢ: ಶಿವರಾಜ್‌ ಸಿಂಗ್‌ ಚೌಹಾಣ್‌
Linkup
ಭೋಪಾಲ್‌: ಹಸುವಿನ ಸಗಣಿ ಮತ್ತು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ದೇಶವನ್ನು ಆರ್ಥಿಕವಾಗಿ ಸದೃಢವನ್ನಾಗಸುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ. ಶನಿವಾರ ಭೋಪಾಲ್‌ನಲ್ಲಿ ಭಾರತೀಯ ಪಶು ವೈದ್ಯಕೀಯ ಸಂಘ ಆಯೋಜಿಸಿದ ಮಹಿಳಾ ಪಶುವೈದ್ಯರ ಸಮ್ಮೇಳನ ‘ಶಕ್ತಿ 2021’ರಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಈ ಹೇಳಿಕೆ ನೀಡಿದ್ದಾರೆ. ಸರಕಾರ ಗೋವುಗಳ ರಕ್ಷಣೆಗೆ ಗೋಶಾಲೆಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, ಇದು ಕೇವಲ ಸರ್ಕಾರದಿಂದ ಮಾತ್ರ ಆಗಲ್ಲ. ಸಮಾಜದ ಪ್ರತಿಯೊಬ್ಬರು ಗೋವುಗಳ ರಕ್ಷಣಗೆ ಕೊಡುಗೆ ನೀಡಬೇಕು ಎಂದಿದ್ದಾರೆ. ನಾವು ಮನಸ್ಸು ಮಾಡಿದರೆ ಗೋವುಗಳು, ಗೋವಿನ ಸಗಣಿ ಮತ್ತು ಗೋಮೂತ್ರದಿಂದ ನಮ್ಮ ಸ್ವಂತ ಆರ್ಥಿಕತೆ ಹಾಗೂ ದೇಶವನ್ನು ಆರ್ಥಿಕವಾಗಿ ಸಬಲಗೊಳಿಸಬಹುದು ಎಂದು ಮಧ್ಯಪ್ರದೇಶ ಸಿಎಂ ಹೇಳಿದ್ದಾರೆ. ಇದರ ಜೊತೆಗೆ ಮಧ್ಯಪ್ರದೇಶದ ಶವಾಗಾರಗಳಲ್ಲಿ ಕಟ್ಟಿಗೆ ಬಳಕೆ ಕಡಿಮೆ ಮಾಡಲು ಗೋವಿನ ಸಗಣಿಯಿಂದ ತಯಾರಿಸಿದ ಬೆರಣಿಗಳನ್ನು ಬಳಸಲಾಗಗುತ್ತಿದೆ ಎಂದರು. ಇನ್ನು, ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕ ವ್ಯವಹಾರವಾಗಬಹುದು ಎಂಬುದರ ಕುರಿತು ಪಶುವೈದ್ಯರು ಮತ್ತು ತಜ್ಞರು ಸಂಶೋಧನೆ ನಡೆಸಬೇಕು ಎಂದು ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ. ಇನ್ನು, ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್ ರೂಪಾಲಾ, ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಸು ಸಾಕಣೆ ನಡೆಸುತ್ತಿದ್ದು, ಇದು ಕೂಡ ಹೈನುಗಾರಿಕೆ ಯಶಸ್ಸಿಗೆ ಕಾರಣವಾಗಿದೆ. ಪಶು ವೈದ್ಯಕೀಯ ಪದವೀಧರರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಸಹಾಯ ಮಾಡಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್‌ ರೂಪಾಲಾ ಒತ್ತಾಯಿಸಿದ್ದಾರೆ. ಭೋಪಾಲ್‌ನ ಹಬೀಬ್‌ಗಂಜ್‌ ರೈಲು ನಿಲ್ದಾಣದ ಹೆಸರು ಬದಲು ಆಧುನೀಕರಣಗೊಂಡಿರುವ ಭೋಪಾಲ್‌ನ ಹಬೀಬ್‌ಗಂಜ್‌ ರೈಲು ನಿಲ್ದಾಣದ ಹೆಸರನ್ನು ‘ರಾಣಿ ಕಮಲಾಪತಿ ರೈಲು ನಿಲ್ದಾಣ’ ಎಂದು ಬದಲಿಸಲಾಗಿದೆ. ಶನಿವಾರ ಈ ವಿಷಯ ತಿಳಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ‘‘ರಾಣಿ ಕಮಲಾಪತಿ ಅವರು ಗೊಂಡ ಸಮುದಾಯದ ಹೆಮ್ಮೆ. ಆಕೆ ಭೋಪಾಲ್‌ನ ಕೊನೆಯ ಹಿಂದೂ ರಾಣಿ ಸಹ. ಆಫ್ಘನ್‌ ಕಮಾಂಡರ್‌ ದೋಸ್ತ್‌ ಮೊಹಮದ್‌ ವಂಚನೆಯಿಂದ ಗೊಂಡ ಸಾಮ್ರಾಜ್ಯವನ್ನು ವಶಪಡಿಸಿಕೊಂಡ. ರೈಲು ನಿಲ್ದಾಣಕ್ಕೆ ರಾಣಿ ಕಮಲಾಪತಿ ಹೆಸರು ಇಡುವುದರೊಂದಿಗೆ ಆದಿವಾಸಿಗಳಿಗೆ ಗೌರವ ಸಲ್ಲಿಸಿದಂತಾಗಿದೆ,’’ ಎಂದು ಹೇಳಿದ್ದಾರೆ. ಮೋದಿ ರ‍್ಯಾಲಿಯಲ್ಲಿ ಭಾಗವಹಿಸಲು ಟೋಲ್‌ ವಿನಾಯಿತಿ ಮಧ್ಯಪ್ರದೇಶ ಸರಕಾರವು ನಗರದಲ್ಲಿಸೋಮವಾರ ನಡೆಯುವ ‘ಬುಡಕಟ್ಟು ಗೌರವ ದಿನ’ದ ರಾರ‍ಯಲಿಯಲ್ಲಿಭಾಗವಹಿಸಲು ಜನರನ್ನು ಕರೆತರುವ ವಾಹನಗಳಿಗೆ ಟೋಲ್‌ನಿಂದ ವಿನಾಯಿತಿ ಘೋಷಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಜಾಂಬೂರಿ ಮೈದಾನದಲ್ಲಿ ನಡೆಯುವ ರ‍್ಯಾಲಿ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.