ಅಬುಧಾಬಿ: 'ಆಹ್ಲಾನ್ ಮೋದಿ' ಕಾರ್ಯಕ್ರಮ, ದಕ್ಷಿಣ ಭಾರತದ 4 ಭಾಷೆಗಳಲ್ಲಿ ಮಾತನಾಡಿದ ಪ್ರಧಾನಿ ಮೋದಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಿ ನಡೆದ 'ಆಹ್ಲಾನ್ ಮೋದಿ' ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ,  ತಮಿಳು, ತೆಲುಗು, ಮತ್ತು ಮಲಯಾಳಂನಲ್ಲಿ ಮಾತನಾಡಿದ್ದಾರೆ. ಅಬುಧಾಬಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಿ ನಡೆದ 'ಆಹ್ಲಾನ್ ಮೋದಿ' ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ,  ತಮಿಳು, ತೆಲುಗು, ಮತ್ತು ಮಲಯಾಳಂನಲ್ಲಿ ಮಾತನಾಡಿದ್ದಾರೆ. ಈ ಭಾಷಿಕರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಗರಿಷ್ಠ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಯುಎಇಯ ವಿವಿಧ ಪ್ರದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳ ಜನರು ಸ್ಥಳದಲ್ಲಿ ಜಮಾಯಿಸಿದ್ದು,"ಎಲ್ಲರ ಹೃದಯಗಳು ಸಂಪರ್ಕ ಹೊಂದಿವೆ" ಎಂದು ಪ್ರಧಾನಿ ಮೋದಿ ಹೇಳಿದರು. ಕಿಕ್ಕಿರಿದು ತುಂಬಿದ ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ಅಬುಧಾಬಿಯಲ್ಲಿ, ನೀವು ಹೊಸ ಇತಿಹಾಸವನ್ನು ಸೃಷ್ಟಿಸಿದ್ದೀರಿ. ಯುಎಇಯ ಎಲ್ಲಾ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ಪ್ರತಿಯೊಬ್ಬರ ಹೃದಯವು ಸಂಪರ್ಕ ಹೊಂದಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಬಡಿತ, ಪ್ರತಿ ಉಸಿರು, ಪ್ರತಿ ಧ್ವನಿ ಹೇಳುತ್ತದೆ - ಭಾರತ-ಯುಎಇ ಸ್ನೇಹ ಚಿರಾಯುವಾಗಲಿ ಎಂದರು.  #WATCH | Prime Minister Narendra Modi greets people gathered at the Zayed Sports Stadium in Abu Dhabi, UAE #AhlanModi pic.twitter.com/LLd3HYmlL6 — ANI (@ANI) February 13, 2024 ನನ್ನೊಂದಿಗೆ 140 ಕೋಟಿ ಭಾರತೀಯರಿಂದ ಸಂದೇಶವನ್ನು ತಂದಿದ್ದೇನೆ. ಇದು ಸರಳ ಮತ್ತು ಆಳವಾದದ್ದು ನಿಮ್ಮ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ನಿಮ್ಮ ಉತ್ಸಾಹವು 'ಏಕ್ ಭಾರತ್, ಶ್ರೇಷ್ಠ ಭಾರತ'ದ ಸುಂದರವಾದ ಚಿತ್ರವನ್ನು ಚಿತ್ರಿಸುತ್ತದೆ.ಎಂದು ಪ್ರಧಾನಿ ಮೋದಿ ಭಾರತೀಯ ಸಮುದಾಯಕ್ಕೆ ಹೇಳಿದರು. ಸರಿಸುಮಾರು 3.5 ಮಿಲಿಯನ್ ಭಾರತೀಯ ವಲಸಿಗ ಸಮುದಾಯವು ಯುಎಇಯಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿದೆ. ಇದು ದೇಶದ ಜನಸಂಖ್ಯೆಯ ಸರಿಸುಮಾರು ಶೇ. 35ರಷ್ಟು ಜನರನ್ನು ಹೊಂದಿದೆ. ಇಂದು ಭಾರತವು ತನ್ನ ಬೃಹತ್ ಮೂಲಸೌಕರ್ಯ ಯೋಜನೆಗಳಿಗಾಗಿ ಗುರುತಿಸಲ್ಪಟ್ಟಿದ್ದು, ಅತ್ಯುತ್ತಮ ಪ್ರವಾಸೋದ್ಯಮ ತಾಣವಾಗಿ ಗುರುತಿಸಲಾಗುತ್ತಿದೆ. ಭಾರತವನ್ನು ದೊಡ್ಡ ಕ್ರೀಡಾ ಶಕ್ತಿ ಎಂದು ಗುರುತಿಸಲಾಗುತ್ತಿದೆ. ಇದನ್ನು ಕೇಳಿದರೆ ನೀವು ಹೆಮ್ಮೆ ಪಡುತ್ತೀರಿ. ಡಿಜಿಟಲ್ ಇಂಡಿಯಾ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ. ಯುಎಇಯ ಜನರು ಸಹ ಅದರ ಪ್ರಯೋಜನ ಪಡೆಯಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು UAE ಯೊಂದಿಗೆ RuPay ಕಾರ್ಡ್ ಪ್ಯಾಕ್ ಅನ್ನು ಹಂಚಿಕೊಂಡಿದ್ದೇವೆ... UPI ಶೀಘ್ರದಲ್ಲೇ UAE ನಲ್ಲಿ ಪ್ರಾರಂಭವಾಗಲಿದೆ. ಇದರೊಂದಿಗೆ, ಯುಎಇ ಮತ್ತು ಭಾರತೀಯ ಖಾತೆಗಳ ನಡುವೆ ತಡೆರಹಿತ ಪಾವತಿಗಳು ಸಾಧ್ಯವಾಗುತ್ತದೆ ಎಂದರು. ಇಂದು ಜಗತ್ತು ಭಾರತವನ್ನು ‘ವಿಶ್ವ ಬಂಧು’ ಎಂದು ನೋಡುತ್ತಿದೆ. ಇಂದು ವಿಶ್ವದ ಪ್ರತಿಯೊಂದು ಪ್ರಮುಖ ವೇದಿಕೆಯಲ್ಲೂ ಭಾರತದ ಧ್ವನಿ ಕೇಳಿಬರುತ್ತಿದೆ. ಎಲ್ಲಿ ಬಿಕ್ಕಟ್ಟು ಇದೆಯೋ ಅಲ್ಲಿಗೆ ತಲುಪುವ ಮೊದಲ ದೇಶಗಳಲ್ಲಿ ಭಾರತದ ಹೆಸರು ಬರುತ್ತದೆ. ಇಂದಿನ ಬಲಿಷ್ಠ ಭಾರತ ಪ್ರತಿ ಹೆಜ್ಜೆಯಲ್ಲೂ ತನ್ನ ಜನರೊಂದಿಗೆ ನಿಂತಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ ಎಂದು ಹೇಳಿದರು. ಆರ್ಥಿಕತೆಯು ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಪ್ರಪಂಚದ ಮೂರನೇ ಅತಿ ದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದೇಶ ಭಾರತವಾಗಿದೆ. ತನ್ನ ಮೊದಲ ಪ್ರಯತ್ನದಲ್ಲಿ ಮಂಗಳವನ್ನು ತಲುಪಿದ ದೇಶ ಭಾರತ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ದೇಶ ಭಾರತವಾಗಿದೆ. 5G ತಂತ್ರಜ್ಞಾನವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಿ, ಅದನ್ನು ತ್ವರಿತವಾಗಿ ಹೊರತಂದಿರುವ ದೇಶ ಭಾರತವಾಗಿದೆ ಎಂದು ಪ್ರಧಾನಿ ಮೋದಿ ಭಾಷಣದುದ್ದಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು. 

ಅಬುಧಾಬಿ: 'ಆಹ್ಲಾನ್ ಮೋದಿ' ಕಾರ್ಯಕ್ರಮ, ದಕ್ಷಿಣ ಭಾರತದ 4 ಭಾಷೆಗಳಲ್ಲಿ ಮಾತನಾಡಿದ ಪ್ರಧಾನಿ ಮೋದಿ!
Linkup
ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಿ ನಡೆದ 'ಆಹ್ಲಾನ್ ಮೋದಿ' ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ,  ತಮಿಳು, ತೆಲುಗು, ಮತ್ತು ಮಲಯಾಳಂನಲ್ಲಿ ಮಾತನಾಡಿದ್ದಾರೆ. ಅಬುಧಾಬಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಲ್ಲಿ ನಡೆದ 'ಆಹ್ಲಾನ್ ಮೋದಿ' ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಾದ ಕನ್ನಡ,  ತಮಿಳು, ತೆಲುಗು, ಮತ್ತು ಮಲಯಾಳಂನಲ್ಲಿ ಮಾತನಾಡಿದ್ದಾರೆ. ಈ ಭಾಷಿಕರು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಗರಿಷ್ಠ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಯುಎಇಯ ವಿವಿಧ ಪ್ರದೇಶಗಳು ಮತ್ತು ಭಾರತದ ವಿವಿಧ ರಾಜ್ಯಗಳ ಜನರು ಸ್ಥಳದಲ್ಲಿ ಜಮಾಯಿಸಿದ್ದು,"ಎಲ್ಲರ ಹೃದಯಗಳು ಸಂಪರ್ಕ ಹೊಂದಿವೆ" ಎಂದು ಪ್ರಧಾನಿ ಮೋದಿ ಹೇಳಿದರು. ಕಿಕ್ಕಿರಿದು ತುಂಬಿದ ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ಅಬುಧಾಬಿಯಲ್ಲಿ, ನೀವು ಹೊಸ ಇತಿಹಾಸವನ್ನು ಸೃಷ್ಟಿಸಿದ್ದೀರಿ. ಯುಎಇಯ ಎಲ್ಲಾ ಮೂಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿದ್ದೀರಿ. ಆದರೆ ಪ್ರತಿಯೊಬ್ಬರ ಹೃದಯವು ಸಂಪರ್ಕ ಹೊಂದಿದೆ. ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ಪ್ರತಿ ಹೃದಯ ಬಡಿತ, ಪ್ರತಿ ಉಸಿರು, ಪ್ರತಿ ಧ್ವನಿ ಹೇಳುತ್ತದೆ - ಭಾರತ-ಯುಎಇ ಸ್ನೇಹ ಚಿರಾಯುವಾಗಲಿ ಎಂದರು.  ನನ್ನೊಂದಿಗೆ 140 ಕೋಟಿ ಭಾರತೀಯರಿಂದ ಸಂದೇಶವನ್ನು ತಂದಿದ್ದೇನೆ. ಇದು ಸರಳ ಮತ್ತು ಆಳವಾದದ್ದು ನಿಮ್ಮ ಬಗ್ಗೆ ಭಾರತ ಹೆಮ್ಮೆಪಡುತ್ತದೆ. ನಿಮ್ಮ ಉತ್ಸಾಹವು 'ಏಕ್ ಭಾರತ್, ಶ್ರೇಷ್ಠ ಭಾರತ'ದ ಸುಂದರವಾದ ಚಿತ್ರವನ್ನು ಚಿತ್ರಿಸುತ್ತದೆ.ಎಂದು ಪ್ರಧಾನಿ ಮೋದಿ ಭಾರತೀಯ ಸಮುದಾಯಕ್ಕೆ ಹೇಳಿದರು. ಸರಿಸುಮಾರು 3.5 ಮಿಲಿಯನ್ ಭಾರತೀಯ ವಲಸಿಗ ಸಮುದಾಯವು ಯುಎಇಯಲ್ಲಿ ಅತಿದೊಡ್ಡ ಸಂಖ್ಯೆಯಲ್ಲಿದೆ. ಇದು ದೇಶದ ಜನಸಂಖ್ಯೆಯ ಸರಿಸುಮಾರು ಶೇ. 35ರಷ್ಟು ಜನರನ್ನು ಹೊಂದಿದೆ. ಇಂದು ಭಾರತವು ತನ್ನ ಬೃಹತ್ ಮೂಲಸೌಕರ್ಯ ಯೋಜನೆಗಳಿಗಾಗಿ ಗುರುತಿಸಲ್ಪಟ್ಟಿದ್ದು, ಅತ್ಯುತ್ತಮ ಪ್ರವಾಸೋದ್ಯಮ ತಾಣವಾಗಿ ಗುರುತಿಸಲಾಗುತ್ತಿದೆ. ಭಾರತವನ್ನು ದೊಡ್ಡ ಕ್ರೀಡಾ ಶಕ್ತಿ ಎಂದು ಗುರುತಿಸಲಾಗುತ್ತಿದೆ. ಇದನ್ನು ಕೇಳಿದರೆ ನೀವು ಹೆಮ್ಮೆ ಪಡುತ್ತೀರಿ. ಡಿಜಿಟಲ್ ಇಂಡಿಯಾ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ. ಯುಎಇಯ ಜನರು ಸಹ ಅದರ ಪ್ರಯೋಜನ ಪಡೆಯಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಾವು UAE ಯೊಂದಿಗೆ RuPay ಕಾರ್ಡ್ ಪ್ಯಾಕ್ ಅನ್ನು ಹಂಚಿಕೊಂಡಿದ್ದೇವೆ... UPI ಶೀಘ್ರದಲ್ಲೇ UAE ನಲ್ಲಿ ಪ್ರಾರಂಭವಾಗಲಿದೆ. ಇದರೊಂದಿಗೆ, ಯುಎಇ ಮತ್ತು ಭಾರತೀಯ ಖಾತೆಗಳ ನಡುವೆ ತಡೆರಹಿತ ಪಾವತಿಗಳು ಸಾಧ್ಯವಾಗುತ್ತದೆ ಎಂದರು. ಇಂದು ಜಗತ್ತು ಭಾರತವನ್ನು ‘ವಿಶ್ವ ಬಂಧು’ ಎಂದು ನೋಡುತ್ತಿದೆ. ಇಂದು ವಿಶ್ವದ ಪ್ರತಿಯೊಂದು ಪ್ರಮುಖ ವೇದಿಕೆಯಲ್ಲೂ ಭಾರತದ ಧ್ವನಿ ಕೇಳಿಬರುತ್ತಿದೆ. ಎಲ್ಲಿ ಬಿಕ್ಕಟ್ಟು ಇದೆಯೋ ಅಲ್ಲಿಗೆ ತಲುಪುವ ಮೊದಲ ದೇಶಗಳಲ್ಲಿ ಭಾರತದ ಹೆಸರು ಬರುತ್ತದೆ. ಇಂದಿನ ಬಲಿಷ್ಠ ಭಾರತ ಪ್ರತಿ ಹೆಜ್ಜೆಯಲ್ಲೂ ತನ್ನ ಜನರೊಂದಿಗೆ ನಿಂತಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ ಎಂದು ಹೇಳಿದರು. ಆರ್ಥಿಕತೆಯು ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಪ್ರಪಂಚದ ಮೂರನೇ ಅತಿ ದೊಡ್ಡ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿರುವ ದೇಶ ಭಾರತವಾಗಿದೆ. ತನ್ನ ಮೊದಲ ಪ್ರಯತ್ನದಲ್ಲಿ ಮಂಗಳವನ್ನು ತಲುಪಿದ ದೇಶ ಭಾರತ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ದೇಶ ಭಾರತವಾಗಿದೆ. 5G ತಂತ್ರಜ್ಞಾನವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಿ, ಅದನ್ನು ತ್ವರಿತವಾಗಿ ಹೊರತಂದಿರುವ ದೇಶ ಭಾರತವಾಗಿದೆ ಎಂದು ಪ್ರಧಾನಿ ಮೋದಿ ಭಾಷಣದುದ್ದಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದರು.  ಅಬುಧಾಬಿ: 'ಆಹ್ಲಾನ್ ಮೋದಿ' ಕಾರ್ಯಕ್ರಮ, ದಕ್ಷಿಣ ಭಾರತದ 4 ಭಾಷೆಗಳಲ್ಲಿ ಮಾತನಾಡಿದ ಪ್ರಧಾನಿ ಮೋದಿ!