ಅನಪೇಕ್ಷಿತ ಭಯ...
ಹಲವರ ನಿತ್ಯ ಜೀವನದಲ್ಲಿ ಒಂದು ರೀತಿಯ ವಿಚಿತ್ರವಾದ ಭಯ ಕಾಡುತ್ತದೆ. ಕೆಲವೊಮ್ಮೆ ಭಯದ ಮೂಲ ಅವರ ಗಮನಕ್ಕೆ ಬರಬಹುದು, ಕೆಲವೊಮ್ಮೆ ಭಯಕ್ಕೆ ಅವರಿಗಿರುವ ಅಭದ್ರತೆ ಕಾರಣವಾಗಬಹುದು, ಮೆತ್ತೆ ಕೆಲವೊಮ್ಮೆ ಕಷ್ಟವೇ ಬಾರದೆ, ಬರಬಹುದೇನೋ ಎಂಬ ಕಲ್ಪನೆಯೇ ಅವರ ಭಯಕ್ಕೆ ಮುಖ್ಯಕಾರಣವಾಗಿರಬಹುದು.
ಅನಪೇಕ್ಷಿತ ಭಯ: ಹಲವರ ನಿತ್ಯ ಜೀವನದಲ್ಲಿ ಒಂದು ರೀತಿಯ ವಿಚಿತ್ರವಾದ ಭಯ ಕಾಡುತ್ತದೆ. ಕೆಲವೊಮ್ಮೆ ಭಯದ ಮೂಲ ಅವರ ಗಮನಕ್ಕೆ ಬರಬಹುದು, ಕೆಲವೊಮ್ಮೆ ಭಯಕ್ಕೆ ಅವರಿಗಿರುವ ಅಭದ್ರತೆ ಕಾರಣವಾಗಬಹುದು, ಮೆತ್ತೆ ಕೆಲವೊಮ್ಮೆ ಕಷ್ಟವೇ ಬಾರದೆ, ಬರಬಹುದೇನೋ ಎಂಬ ಕಲ್ಪನೆಯೇ ಅವರ ಭಯಕ್ಕೆ ಮುಖ್ಯಕಾರಣವಾಗಿರಬಹುದು.
ಭಯದಲ್ಲಿ ಎರಡು ವಿಧ ವಿದೆ.
ಮೊದಲನೆಯದು:ತಾನು ಇಷ್ಟಪಟ್ಟಿದ್ದು ತನ್ನಿಂದ ದೂರವಾಗಬಹುದೇನೋ ಎಂಬ ಭಯ.
ಎರಡನೆಯದು: ತನಗೆ ಇಷ್ಟವಿಲ್ಲದ್ದು ಪ್ರಾಪ್ತಿಯಾಗುತ್ತೆಂಬ ಭಯ.
ಈ ಭಯವು ಆತಂಕ ಮತ್ತು ಕಾತರತೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿರುತ್ತದೆ. ಹೀಗಾಗಿ ಭಯದಿಂದ ಆತಂಕ ತಪ್ಪಿದ್ದಲ್ಲ.
ಅಯ್ಯೋ! ಮುಂದೆ ಏನಾಗುವುದೋ ?
ನಾನು ಯಾವಾಗ ಖಾಯಿಲೆ ಬೀಳುತ್ತೇನೋ ?
ಈ ದೇಹಕ್ಕೆ ಏನೇನು ಖಾಯಿಲೆ ಬಂದು ಸುತ್ತು ಕೊಳ್ಳುತ್ತೋ ?
ನನ್ನ ವ್ಯಾಪಾರ ಯಾವಾಗ ಕುಸಿದು ಹೋಗಿಬಿಡುತ್ತೋ ? ಇನ್ನು ಎನೇನು ಅನಾಹುತಗಳನ್ನು ಈ ಕಣ್ಣಿನಿಂದ ನೋಡಬೇಕೋ?
ಎಂದು ನನ್ನ ಮಕ್ಕಳಿಗೆ ಪ್ರೀತಿ ಕಡಿಮೆಯಾಗುತ್ತೋ?
ಮುಂದೆ ನನ್ನ ಮಕ್ಕಳು ನನ್ನನ್ನು ಚೆನ್ನಾಗಿ ನೋಡಿ ಕೊಳ್ಳುತ್ತಾರೋ ಇಲ್ಲವೋ?
ಹೀಗೆಲ್ಲಾ ಭಯ ಭೂತವಾಗಿ, ಆತಂಕ ಮತ್ತು ಕಾತುರತೆಗಳು ಇಂತಹವರನ್ನು ಕಾಡಲು ಪ್ರಾರಂಭ ಮಾಡುತ್ತವೆ.
ಹೀಗೆ ಅನೇಕ ಬಗೆಯಲ್ಲಿ ಗೊತ್ತಿಲ್ಲದ, ಇನ್ನೂ ಬಂದಿರದ ಭವಿಷ್ಯದ ವಿಷಯದ ಬಗ್ಗೆ ಚಿಂತೆ ಮಾಡಲು ಪ್ರಾರಂಭ ಮಾಡಿದಾಗ ಮಾನಸಿಕ ನೆಮ್ಮದಿ ಹಾರಿ ಹೋಗುತ್ತದೆ.
ಈ ರೀತಿಯಾಗಿ ತೊಳಲಾಡುವುದರಿಂದ ಬರುವ ದುಃಖವನ್ನು ನೆನೆನೆದು, ಇರುವ ಸುಸ್ಥಿತಿಯನ್ನು ಅನುಭವಿಸಲು ಸಾಧ್ಯವಾಗುವುದೇ ಇಲ್ಲ.
ಒಬ್ಬರೇ ಇರುವಾಗಲಂತೂ ಕೂತಾಗ ನಿಂತಾಗ ಇದೇ ಚಿಂತೆ. ಈ ರೀತಿಯ ಆತಂಕ ತೀವ್ರವಾದಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೆಡುವುದು ಮಾತ್ರವಲ್ಲ ಪರಸ್ಪರ ಮಾನವೀಯ ಸಂಬಂಧವನ್ನು ಕೆಡಿಸಿಬಿಡುತ್ತವೆ.
ತೀವ್ರ ಆತಂಕಕ್ಕೆ ಒಳಗಾದ ವ್ಯಕ್ತಿ ತನ್ನ ಸುತ್ತಲಿನ ನೆಮ್ಮದಿಯನ್ನು ಹಾಳುಮಾಡುತ್ತಾ , ವಾತಾವರಣವನ್ನು ಕೆಡಿಸಿಬಿಡುತ್ತಾನೆ.
ಹೀಗೆ ಭಯ ಪಡಲು ಪ್ರಾರಂಭ ಮಾಡಿದರೆ ಆದರೆ ಅದಕ್ಕೆ ಕೊನೆ ಮೊದಲೆಲ್ಲಿ?
ಭರ್ತೃಹರಿಯು ತನ್ನ ನೀತಿ ಶತಕದಲ್ಲಿ ಹೀಗೆ ಹೇಳುತ್ತಾನೆ " ಭೋಗದಲ್ಲಿ ರೋಗದ ಭಯ :
ಅಧಿಕಾರದಲ್ಲಿ ಸ್ಥಾನ ಚ್ಯುತಿಯ ಭಯ : ಹಣವಿದ್ದರೆ ಕಳ್ಳ ಕಾಕರ ಭಯ :
ಮಾನದಲ್ಲಿ ಅವಮಾನದ ಭಯ : ಬಲವಿದ್ದರೆ ಶತ್ರುವಿನ ಭಯ :
ಸೌಂದರ್ಯವಿದ್ದರೆ ಮುಪ್ಪಿನ ಭಯ : ವಿದ್ವತ್ತಿದ್ದರೆ ಪ್ರತಿವಾದಿಯ ಭಯ :
ಗುಣವಂತನಾಗಿದ್ದರೆ ನಿಂದಕನ ಭಯ : ದೇಹಕ್ಕೆ ಮರಣದ ಭಯ : "
ಹೀಗೆ ಪ್ರಪಂಚದಲ್ಲಿ ಒಂದಿಲ್ಲ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಈ ಭಯ ಎನ್ನುವ ರೋಗ ಒಮ್ಮೆ ಹತ್ತಿಕೊಂಡು ಬಿಟ್ಟರೆ ಅದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟದ ಕೆಲಸ.
ಮತ್ತೆ ಭಯದಿಂದ ಹೊರಬರುವುದು ಹೇಗೆ ಅಂದ್ರೆ
ಗೆಳೆಯರೇ, ಹೇಗೆ ನಾವು ಪ್ರಸ್ತುತವಾಗಿ ಸಂತಸದಿಂದ ಬದುಕುವುದು ಅಂತ ಅಂದ್ರೆ, ಅದು ನಮ್ಮಲ್ಲಿರುವ ಒಳ್ಳೆ ಆಲೋಚನೆಗಳು ಒಳ್ಳೆಯ ನೆನಪುಗಳು ಮಾತ್ರ , ಹೌದು ಸ್ನೇಹಿತರೆ,
ಒಳ್ಳೆಯ ನೆನಪುಗಳು ಮಾತ್ರ ನಮ್ಮನ್ನ ಪರಿವರ್ತಿಸಬಲ್ಲದು.
ಇದೊಂದು ರೀತಿಯ ವಿಧಾಯಕವಾದ ಮತ್ತು ಅಮೂಲ್ಯವಾದ ಔಷಧಿ. ಈ ರೀತಿಯ ಸವಿ ನೆನಪುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುವುದರಿಂದ ಎರಡು ರೀತಿಯ ಲಾಭವಿದೆ.
ಸವಿ ನೆನಪಿನಿಂದ ನಮ್ಮ ಮನಸ್ಸು ಉಲ್ಲಾಸಿತವಾಗಿರುತ್ತದೆ. ನಮ್ಮ ಒಳಗಿನ ಕ್ಷಮತೆ ಮತ್ತಷ್ಟು ಬಲಗೊಳ್ಳುತ್ತದೆ.
ನಮ್ಮ ಮನಸ್ಸು ಹೇಗಿರುತ್ತೆಂದರೆ,
ನಾವು ಯಾವ ನೆನಪನ್ನು ಮತ್ತೆ ಮತ್ತೆ ನೆನೆಯುತ್ತೆವೋ ಅದು ಬೀಜವಾಗಿ , ಭವಿಷ್ಯದಲ್ಲಿ ಗಿಡವಾಗಿ ಮರವಾಗಿ ಬೆಳೆಯುವಂತೆ ಮಾಡುತ್ತದೆ.
ಬೇಡದ ಕಹಿ ನೆನಪಿಗಿಂತ, ಸುಂದರ ನೆನಪು ಎಂದಿಗೂ ಹಿತಕರವಲ್ಲವೇ?
ಹೂವುಗಳನ್ನು ನೆನೆದರೆ ಮುಳ್ಳುಗಳು ಗಮನಕ್ಕೆ ಬರುವುದಿಲ್ಲ. ಮುಳ್ಳುಗಳನ್ನು ನೆನೆದು ಅಳುವುದಕ್ಕಿಂತ ಹೂವು ನೆನೆದು ಸಂತೋಷ ಪಡಬಹುದಲ್ಲವೇ ?
ಮುಳ್ಳಿನ ಬಗ್ಗೆ ಭಯವೇಕೆ ಬೇಕು? ಒಮ್ಮೆ ಯೋಚಿಸಿ ನೋಡಿ. ಭಗವಂತ ನಮ್ಮನ್ನು ಸಂತೋಷವಾಗಿಡಲು ಅದೆಷ್ಟು ಬಗೆಯ ಸುಂದರವಾದುದನ್ನು ಈ ಜಗತ್ತಿನಲ್ಲಿ ಸೃಷ್ಟಿ ಮಾಡಿದ್ದಾನೆ! ನಾವು ಆನಂದ ಪಡಲು, ಸಂತೋಷ ಹೊಂದಲು, ಇತರರಿಗೆ ಸಂತೋಷ ಕೊಡಲು ಸಾಧ್ಯವಿದೆಯಲ್ಲವೇ? ಕಣ್ಣಿಗೆ ಕಾಣುವ ಸುಖವನ್ನು ಬಿಟ್ಟು, ಕಾಣದ ಕಷ್ಟದ ಭಯಕ್ಕೆ ಏಕೆ ಆತಂಕ ಪಡಬೇಕು?
ನಮ್ಮಿಂದ ಯಾವುದನ್ನಾದರೂ ತಪ್ಪಿಸಿಕೊಳ್ಳಲು ಸಾಧ್ಯವಿದೆಯ? ಯಾರು ಭಗವಂತನ ಆಶ್ರಯದಲ್ಲಿ ಇರುತ್ತಾರೋ ಆತನಿಗೆ ಯಾವ ಆತಂಕ ಕಾತುರತೆಗಳು ಕಾಡುವುದಿಲ್ಲ.
ಭಗವಂತನ ಭದ್ರಕೋಟೆಯಲ್ಲಿ ನಿರಾತಂಕನಾಗಿ ನೆಮ್ಮದಿಯಾಗಿ ಇರುತ್ತಾನೆ.
ಇದು ಹೇಗೆಂದರೆ, ತಾಯಿ ಎಷ್ಟೇ ದುರ್ಬಳಲಾಗಿದ್ದರೂ ಆಕೆಯ ಮಗು ಮಾತ್ರ ಆವಳೊಡನೆ ಇರುವಾಗ ಎಷ್ಟೊಂದು ನೆಮ್ಮದಿಯಾಗಿರುತ್ತಲ್ಲ ಹಾಗೆ!! ಇಂತಹುದರಲ್ಲಿ ಅಭಯಪ್ರದನಾದ ಭಗವಂತನೊಡನೆ ನಾವು ಇರುವಾಗ ನಮಗೆ ಏತರ ಭಯ? ಭಗವಂತನ ಆಶ್ರಯದಲ್ಲಿ ಯಾರಿಗೂ, ಯಾವ ರೀತಿಯ ಭಯ, ಯಾರಿಂದಲೂ ಇರದು.
ನಮ್ಮ ಆತಂಕಗಳೇ ಅಂತಕನ ದೂತರು. ಕಾತರತೆಯೇ ಅಂತಃಸತ್ವವನ್ನು ಹೀರುವ ರಾಕ್ಷಸರು.
ಇಂತಹವರ ಸಹವಾಸ ನಮಗೇಕೆ?
ನಿರ್ಭಯ ಪ್ರದನಾದ ಭಗವಂತನ ಸಾನಿಧ್ಯದಲ್ಲಿ ನಿತ್ಯ ಆನಂದ ಹೊಂದುವ ಮನಸಿಗಾಗಿ ನಾವು ಅವನನ್ನೇ ಅನನ್ಯ ಬೇಡಿದರೆ ಸಾಕು. ಅಭಯಪ್ರದನಾದ ಭಗವಂತನು ತನ್ನ ಆಶ್ರಯದಲ್ಲಿರುತ್ತಾನೆಂದು ತಿಳಿದರೆ ಎಲ್ಲಾ ಭಯ ಹೇಳದೆ ಕೇಳದೆ ಓಡಿ ಹೋಗುತ್ತದೆ.
"ಭಯ ಬಿಡಿ ಅನಪೇಕ್ಷಿತ ಭಯ ಎಂದಿಗೂ ಬೇಡ"
"ಭರವಸೆಯಿಂದ ಸಾಗೋಣ ನಮಸ್ಕಾರ "
✍️ನಿಮ್ಮ ಭೂತೇಶ್ .....