ಈಡಿಗ ಬಿಲ್ಲವ ನಾಮಧಾರಿ ದೀವರು ಮತ್ತು ಅತಿಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ

ಸೆಪ್ಟೆಂಬರ್ 9- 2023, ಶನಿವಾರ. ಸ್ಥಳ:-ಅರಮನೆ ಮೈದಾನ, ಗೇಟ್ ನಂಬರ್ ಮೂರು, ವೈಟ್ ಪೆಟಲ್ ಸಭಾಂಗಣ.

ಈಡಿಗ ಬಿಲ್ಲವ ನಾಮಧಾರಿ ದೀವರು ಮತ್ತು ಅತಿಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ
Linkup

ಮಾನ್ಯ ಕುಲ ಬಾಂಧವರಲ್ಲಿ ಕರ್ನಾಟಕ ರಾಜ್ಯದಲ್ಲಿ ಈಡಿಗ ಬಿಲ್ಲವ ನಾಮಧಾರಿ ದೀವರು ಸೇರಿದಂತೆ ಸುಮಾರು 70 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಒಂದು ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಶ್ರೀಯುತ ದಿವಂಗತ ಬಂಗಾರಪ್ಪನವರು ಕೇಂದ್ರ ಸಚಿವರುಗಳಾಗಿ ಶ್ರೀಯುತ ಆರ್ ಎಲ್ ಜಾಲಪ್ಪನವರು ಶ್ರೀಯುತ ಜನಾರ್ಧನ ಪೂಜಾರಿಯವರು ಸ್ಥಾನವನ್ನು ಅಲಂಕರಿಸಿರುತ್ತಾರೆ ಮತ್ತು ಲೋಕಸಭಾ ಸದಸ್ಯರುಗಳು ಹಾಗೂ ರಾಜ್ಯದ ಮಂತ್ರಿಗಳಾಗಿ ವಿವಿಧ ಸರ್ಕಾರಗಳಲ್ಲಿ ಮಂತ್ರಿಗಳಾಗಿ ಸ್ಥಾನಗಳನ್ನು ಅಲಂಕರಿಸಿರುತ್ತಾರೆ ಆದರೆ ಈಡಿಗ ಬಿಲ್ಲವ ಸಮಾಜದ ರಾಜಕೀಯ ನಾಯಕರಗಳ ರಾಜಕೀಯ ಬೆಳವಣಿಗೆಯನ್ನು ಸಹಿಸದ ಹಾಗೂ ಸರ್ವ ಪಕ್ಷದಲ್ಲಿರುವ ನಮ್ಮ ಸಮಾಜ ನಾಯಕರುಗಳ ಧ್ವನಿಗಳನ್ನ ಕುಗ್ಗಿಸುವ ಹಾಗೂ ಅವರ ರಾಜಕೀಯ ಅಧಿಕಾರ ಸ್ಥಾನಮಾನಗಳಿಂದ ದೂರ ಇಟ್ಟರುವುದು ನಾವು ಗಮನಿಸಬೇಕಾಗುತ್ತದೆ ನಮ್ಮ ಕುಲಕಸಬಾದ ಸೇಂದಿ 2004ರಲ್ಲ ಸ್ಥಗಿತ ಮಾಡಿ 2007 ನೇ ಇಸವಿಯಲ್ಲಿ ಸಾರಾಯಿ ನಿಷೇಧ ಮಾಡಿಯಾವುದೇ ಸರ್ಕಾರ ನಮ್ಮ ಸಮಾಜಕ್ಕೆ ಪರ್ಯಾಯ ವ್ಯವಸ್ಥೆ ನೀಡಿಲ್ಲ. ಆದುದರಿಂದ ನಮ್ಮ ಕುಲಬಾಂಧವರು ಬೀದಿಪಾಲಾಗಿರುತ್ತಾರೆ ಬಂದುಗಳೇ ನಾವು ಜಾಗ್ರತರಾಗಬೇಕಾಗುತ್ತದೆ ಸಮಾಜದಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಪೀಠಾಧಿಪತಿಗಳಾದ ಡಾ|| ಶ್ರೀ ಶ್ರೀ ಶ್ರೀ ಪ್ರಣಾವಾನಂದ ಮಹಾಸ್ವಾಮಿಗಳ ಅವರ ನೇತೃತ್ವದಲ್ಲಿ ರಾಜ್ಯದ್ಯಂತ ದೇಶಾದ್ಯಂತ ಸಂಘಟನೆ ಮತ್ತು ಹೋರಾಟಗಳು ಮಾಡುತ್ತಾ ಇರುವುದು ತಾವೆಲ್ಲ ಗಮನಿಸಿರಬಹುದು ನಮ್ಮೆಲ್ಲರ ಹೋರಾಟದ ಪರವಾಗಿ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ಅಭಿವೃದ್ಧಿ ಮಾಡಿರುವುದು ಮತ್ತು ಕುಲಶಾಸ್ತ್ರ ಅಧ್ಯಯನ ಪ್ರಾರಂಭ ಮಾಡಿರುವುದು ತಮಗೆ ಗೊತ್ತಿರುವ ವಿಷಯ ಆದರೆ ರಾಜಕೀಯ ನಾಯಕರುಗಳ ಶಕ್ತಿಯನ್ನು ಹೆಚ್ಚಿಸಬೇಕಾಗಿರುವುದು ನಮ್ಮ ಜವಾಬ್ದಾರಿ ನಮ್ಮ ಮೇಲೆ ಇದೆ ಸಾಮಾಜಿಕ ಆರ್ಥಿಕ ಶಕ್ತಿಯನ್ನು ಪಡೆಯಬೇಕಾದರೆ ಮೊದಲು ನಾವುಗಳು ರಾಜಕೀಯ ಹೊಂದಿರಬೇಕಾಗುತ್ತದೆ ಯಾವುದೇ ಪಕ್ಷ ನಮಗೆ ಮುಖ್ಯವಲ್ಲ ಸಮಾಜದ ರಾಜಕೀಯ ನಾಯಕರುಗಳು ಮುಖ್ಯ ಸಮಾಜದ ಕೋಟದಿಂದ ರಾಜಕೀಯ ಸ್ಥಾನವನ್ನು ಪಡೆದು ಅನಂತರ ನಮ್ಮ ಸಮಾಜವನ್ನು ಮರೆತಿರುವ ರಾಜಕೀಯ ನಾಯಕರುಗಳಿಗೆ ಅರಿವು ಮೂಡಿಸಬೇಕಾಗುತ್ತದೆ ರಾಜ್ಯದಲ್ಲ ಯಾರು ಒಂದೇ ಸಮಾಜದಿಂದ ಮುಖ್ಯಮಂತ್ರಿಗಳು ಆಗಲಲ್ಲ ದಿವಂಗತ ಶ್ರೀ ಬಂಗಾರಪ್ಪನವರು ಸಹ ಎಲ್ಲಾ ಹಿಂದುಳದ ವರ್ಗಗಳ ಸೇರಿಸಿಕೊಂಡು ಮುಖ್ಯಮಂತ್ರಿಯಾಗಿದ್ದರು ಆದುದರಿಂದ ಅತಿ ಹಿಂದುಳಿದ ವರ್ಗಗಳು ಹಾಗು ಸಮಾನಮಸ್ಕಾರ ಜೊತೆಗೂಡಿಸಿ ಒಂದು ದೊಡ್ಡ ಹೋರಾಟ ರಾಜ್ಯದಲ್ಲಿ ಪ್ರಾರಂಭ ಆಗಬೇಕಾಗುತ್ತದೆ ಈ ಹೋರಾಟದ ನೇತೃತ್ವವನ್ನ ಈಡಿಗ ಬಿಲ್ಲವ ಸಮಾಜದ ಸಮಾಜದ ರಾಜಕೀಯ ಮುಖಂಡರುಗಳು ನೇತೃತ್ವ ವಹಿಸಬೇಕಾಗುತ್ತದೆ ಬರುವ ಲೋಕಸಭಾ ಚುನಾವಣೆಯ ಮೊದಲು ನಮ್ಮ ಸಮಾಜದ ಶಕ್ತಿ ಪ್ರದರ್ಶನ ರಾಜ್ಯದ ದೊಡ್ಡ ಸ್ವಾಭಿಮಾನ ಸಮಾವೇಶದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಡಳಿತ ಸರ್ಕಾರಕ್ಕೆ ಶಕ್ತಿಯನ್ನ ತೋರಿಸಬೇಕಾಗಾದ ಅವಶ್ಯಕತೆ ಇದೆ ಇದರ ಪೂರ್ವಭಾವಿ ಸಭೆ ಸೆಪ್ಟೆಂಬರ್ 9 ಶನಿವಾರ ಅರಮನೆ ಮೈದಾನ ಗೇಟ್ ನಂಬರ್ ಮೂರು ವೈಟ್ ಪೆಟಲ್ ಸಭಾಂಗಣದಲ್ಲಿ ನಡೆಯುತ್ತದೆ ಈ ಪೂರ್ವಭಾವಿ ಸಮಾರಂಭಕ್ಕೆ ಸರಿಯಾದ ಸಮಯಕ್ಕೆ ತಾವೆಲ್ಲರೂ ಬರಬೇಕಾಗಿ ವಿನಂತಿ. ನಮ್ಮ ಮುಂದೆ ಸಾಕಷ್ಟು ಸವಾಲುಗಳವೆ ನಾವು ನಡೆಯಬೇಕಾಗಿವುದು ಕಲ್ಲು ಮುಳ್ಳುಗಳು ಇರುವ ದಾರಿಯಲ್ಲಿ ಆದರೆ ನಮಗೆ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು ತಾಯಿ ಯಲ್ಲಮ್ಮ ದೇವಿ ತುಳುನಾಡು ವೀರ ಕೋಟಿ ಚೆನ್ನಯ್ಯನವರ ಆಶೀರ್ವಾದದೊಂದಿಗೆ ನಾವುಗಳು ನಮ್ಮ ಹಕ್ಕನ್ನು ಪಡೆಯುವ ಬನ್ನಿ ಕುಲಬಾಂಧವರೇ ಸಮಾಜ ಸೇವೆಯನ್ನು ಮಾಡೋಣ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ರಾಷ್ಟ್ರೀಯ ಈಡಿಗ ಮಹಾಮಂಡಳಿ ತಾವು ಬನ್ನಿ ತಮ್ಮವರನ್ನ ಕರೆ ತನ್ನಿ.

 
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ಡಾ| ಶ್ರೀ ಮಂಜೇಗೌಡ 9019644445 
ಶ್ರೀ ಸಂತೋಷ್ ಕುಮಾರ್ 7676200212 
ಶ್ರೀ ಬಿ.ಹೆಚ್. ನಾಗರಾಜ್ ನಾಥ್ ಸಾಗರ 8095820170 
ಶ್ರೀ ಗುರುರಾಜ್, ಎನ್ 9902406387 
ಶ್ರೀ ಜನಾರ್ಧನ್. ಬಿ.ಕೆ 7829336437