15 ವರ್ಷದ ಬಳಿಕ ಬೆಂಗಳೂರಲ್ಲಿ ಮತ್ತೆ ಉಗ್ರ ದಾಳಿಗೆ ಸಂಚು! ಯಾರು ಈ ತಂಡಿಯಂತಾವಿಡೆ ನಜೀರ್?

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಮುಂದಾಗಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಈಗ ಬೆಂಗಳೂರಿಗರಲ್ಲಿ ಆತಂಕ ಮೂಡಿಸಿದ್ದು, 2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್ ಸ್ಫೋಟಕ್ಕೆ ತಳಕು ಹಾಕಿಕೊಂಡಿದೆ. ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಟಿ ನಜೀರ್ ಈಗ ಮತ್ತೊಂದು ಬಾರಿ ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದ್ದು, ಆತನೇ ಮಾಸ್ಟರ್ ಮೈಂಡ್ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.ಅದು 2008 ಜುಲೈ 25, ಮಧ್ಯಾಹ್ನ 1.20 ಬೆಂಗಳೂರಿನ ಮಡಿವಾಳ ಬಸ್ ಡಿಪೋದಲ್ಲಿ ಬಾಂಬ್ ಸ್ಫೋಟಗೊಂಡಿತು. ಅದಾದ ಬಳಿಕ 2.35ರವರೆಗೆ ರಾಜಧಾನಿಯ ವಿವಿಧ ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿತ್ತು. ಈ ಭಯೋತ್ಪಾದಕರ ಕೃತ್ಯದಲ್ಲಿ ಒಬ್ಬರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದಾಳಿಯ ಪ್ರಮುಖ ಆರೋಪಿಯಾಗಿರುವ ಟಿ ನಜೀರ್ ಅಲಿಯಾಸ್ ತಂಡಿಯಂತಾವಿಡೆ ನಜೀರ್ ಹೆಸರು ಮತ್ತೊಂದು ಬಾರಿ ಉಗ್ರ ಕೃತ್ಯದ ಸಂಬಂಧ ಕೇಳಿಬಂದಿದೆ. ಸದ್ಯ ಈತ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾನೆ.