ಬೆಂಗಳೂರಿಗೆ ಬೇಕಿದೆ ಮಾಸ್ಟರ್‌ ಪ್ಲ್ಯಾನ್‌; ಸುಧಾರಿತ ನೀತಿ ಇದ್ರೆ ನಗರ ಅಡ್ಡಾದಿಡ್ಡಿ ಬೆಳೆಯದು!

* ಬಿವಿ ಆನಂದ್‌, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಮಾಜಿ ಸದಸ್ಯರುಬೆಂಗಳೂರು ಇಡೀ ದೇಶದಲ್ಲೇ ಕಾರ್ಯಶೀಲ ಮಾಸ್ಟರ್‌ಪ್ಲ್ಯಾನ್‌ ಹೊಂದಿರದ ಏಕೈಕ ರಾಜಧಾನಿ! ಅಂದರೆ, ಇಡೀ ದೇಶದಲ್ಲೇ ಯೋಜಿತವಲ್ಲದ ಪ್ರದೇಶ. ಮಾಸ್ಟರ್‌ ಪ್ಲ್ಯಾನ್‌ ಎಂಬುದು ಕಟ್ಟಡಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳ ಮೇಲೆ ಅಭಿವೃದ್ಧಿ ನಿಯಂತ್ರಣವನ್ನು ಜಾರಿಗೊಳಿಸುವ ಶಾಸನಬದ್ಧ ಯೋಜನೆ. ನಗರದ ಭವಿಷ್ಯದ ಅಭಿವೃದ್ಧಿಗೂ ಇದು ಮಾರ್ಗದರ್ಶಿ.2005ರಲ್ಲಿ ರೂಪಿಸಲಾದ ‘ಮಾಸ್ಟರ್‌ ಪ್ಲ್ಯಾನ್‌-2015’ ಬೆಂಗಳೂರಿನ ಪಾಲಿಗೆ ಕೊನೆಯದ್ದು. ಕಳೆದ 8 ವರ್ಷಗಳಿಂದ ಇದನ್ನು ಪರಿಷ್ಕರಿಸುವ ಕೆಲಸವೇ ಆಗಿಲ್ಲ. ಹೀಗಾಗಿ, ಬೆಂಗಳೂರು ಹೆಚ್ಚಿನ ಅಭಿವೃದ್ಧಿಗೆ ಸಂಬಂಧಿಸಿದ ಭೂಬಳಕೆ ಹಲವು ಗೊಂದಲಗಳಿಂದ ಕೂಡಿದೆ. ವಿಶೇಷವಾಗಿ ಮಹಾನಗರದ ಅಂಚಿನ ಪ್ರದೇಶಗಳನ್ನು ನೋಡಿದರೆ ಗೊಂದಲಪುರದಂತೆಯೇ ಕಾಣಿಸುತ್ತದೆ. 2015ರಲ್ಲಿ ಬಿಡಿಎ ಸಿದ್ಧಪಡಿಸಿದ ‘ಮಾಸ್ಟರ್‌ ಪ್ಲ್ಯಾನ್‌-2031’ಕ್ಕೆ ಸಾರ್ವಜನಿಕರಿಂದ 14,000 ಆಕ್ಷೇಪಣೆಗಳು ಬಂದಿದ್ದವು. ಈ ಯೋಜನೆಯನ್ನು 2022ರಲ್ಲಿ ರದ್ದುಗೊಳಿಸಲಾಯಿತು. ಆನಂತರ ಬಿಡಿಎ ಮಾಡಿದ ಕೆಲಸವೆಂದರೆ, 2031ರ ಎಲ್ಲಾ ನಕ್ಷೆಗಳು ಮತ್ತು ದಾಖಲೆಗಳನ್ನು ತನ್ನ ಜಾಲತಾಣದಿಂದ ಅಳಿಸಿದ್ದು!

Linkup