ಈ ತರಕಾರಿ ಜ್ಯೂಸ್‌ಗಳು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುತ್ತದೆ…

ತರಕಾರಿ ಜ್ಯೂಸ್‌ಗಳಲ್ಲಿ ವಿಟಮಿನ್, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಇಂತಹ ಜ್ಯೂಸ್‌ಗಳು ಹೆಚ್ಚು ಕಾಲ ಪೂರ್ಣವಾಗಿರಲು ಸಹಾಯ ಮಾಡುತ್ತದೆ.

ಈ ತರಕಾರಿ ಜ್ಯೂಸ್‌ಗಳು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುತ್ತದೆ…
ಈ ತರಕಾರಿ ಜ್ಯೂಸ್‌ಗಳು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುತ್ತದೆ…
Linkup

ದೇಹದ ತೂಕವನ್ನು ಕಾಪಾಡಿಕೊಳ್ಳಲು ಮತ್ತು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ಹಣ್ಣಿನ ಜ್ಯೂಸ್‌ಗಳ ಬದಲಿಯಾಗಿ ತರಕಾರಿ ಜ್ಯೂಸ್‌ಗಳನ್ನು ಸೇವನೆ ಮಾಡುವುದು ಉತ್ತಮ. ತರಕಾರಿ ಜ್ಯೂಸ್‌ಗಳು ದೇಹದ ತೂಕವನ್ನು ಕಡಿಮೆ ಮಾಡುವುದಲ್ಲದೆ, ಚರ್ಮ ಮತ್ತು ಕೂದಲಿಗೂ ಬಹಳ ಉತ್ತಮವಾಗಿದೆ.

ತರಕಾರಿ ಜ್ಯೂಸ್‌ಗಳಲ್ಲಿ ವಿಟಮಿನ್, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ. ಇಂತಹ ಜ್ಯೂಸ್‌ಗಳು ಹೆಚ್ಚು ಕಾಲ ಪೂರ್ಣವಾಗಿರಲು ಸಹಾಯ ಮಾಡುತ್ತದೆ.

ಅಲ್ಲದೆ, ಬೇಸಿಗೆಯಲ್ಲಿ ನಿರ್ಜಲೀಕರಣ ಮತ್ತು ಕಡಿಮೆ ಶಕ್ತಿಯ ಮಟ್ಟದಿಂದ ಬಹಳಷ್ಟು ಮಂದಿ ಬಳಲುತ್ತಿರಬಹುದು.ಅಂತವರು ಈ ಸಮಯದಲ್ಲಿ ನೀರನ್ನು ಮಾತ್ರ ಅವಲಂಬಿಸುವ ಬದಲು ಆಹಾರದಲ್ಲಿ ತಾಜಾ ತರಕಾರಿಗಳ ರಸವನ್ನು ಸೇರಿಸುವುದು ಬಹಳ ಮುಖ್ಯ.

ಹಾಗಾದರೆ ಯಾವ ತಾಜಾ ತರಕಾರಿಗಳ ಜ್ಯೂಸ್‌ ಬೇಸಿಗೆಯಲ್ಲಿ ಸೇವನೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

ಟೊಮೊಟೊ ಮತ್ತು ಸೌತೆಕಾಯಿ ರಸ
ಟೊಮೊಟೊ ಮತ್ತು ಸೌತೆಕಾಯಿ ದೇಹವನ್ನು ತಂಪಾಗಿಸುವ ಗುಣವನ್ನು ಹೊಂದಿದೆ.
ಇದರಲ್ಲಿ ವಿಟಮಿನ್, ಸಿ, ಇ, ಮತ್ತು ಬೀಟಾ ಕ್ಯಾರೋಟಿನ್‌ನಂತಹ ಅಗತ್ಯ ಉತ್ಕರ್ಷಣ ನಿರೋಧಕಗಳೊಂದಿಗೆ ಸಮೃದ್ಧವಾಗಿದೆ.
ನೈಸರ್ಗಿಕವಾಗಿ ಟೊಮೊಟೊಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಹಾಗೆಯೇ ಸೌತೆಕಾಯಿಗಳು ನಿಮ್ಮ ದೇಹವನ್ನು ಹೈಡ್ರೇಟ್‌ ಮಾಡಲು ಮತ್ತು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಹೀಗೆ ಮಾಡಿ

ಸೌತೆಕಾಯಿಗಳನ್ನು ತುಂಡುಗಳಾಗಿ ಕತ್ತರಿಸಿ, ಅದಕ್ಕೆ ಟೊಮೊಟೊ, ಹೆಚ್ಚುವರಿ ರುಚಿಗೆ ಪುದೀನಾ ಎಲೆಗಳು, ಕರಿಮೆಣಸು, ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.

​ಪಾಲಕ್ ಮತ್ತು ಪುದೀನಾ ಜ್ಯೂಸ್‌
ಈ ಪಾಲಕ್‌ ಮತ್ತು ಪುದೀನಾ ಜ್ಯೂಸ್‌ ಬೇಸಿಗೆಯಲ್ಲಿ ಬೆಸ್ಟ್‌ ಜ್ಯೂಸ್‌ ಆಗಿದೆ.
ಇದರಲ್ಲಿ ಕಬ್ಬಿಣ, ವಿಟಮಿನ್‌ ಎ, ಮೆಗ್ನೀಸಿಯಮ್‌ ಮತ್ತು ಫೋಲಿಕ್‌ ಆಮ್ಲಗಳನ್ನು ಹೊಂದಿ ಶ್ರೀಮಂತವಾಗಿದೆ.
ತೂಕ ನಷ್ಟಕ್ಕೆ ಇದೊಂದು ಅದ್ಭುತವಾದ ಪಾನೀಯವಾಗಿದೆ.
ಇದರ ಜ್ಯೂಸ್ ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಅಲ್ಲದೆ ಚರ್ಮ ಮತ್ತು ಕೂದಲನ್ನು ಪೋಷಿಸುತ್ತದೆ.
ಹೀಗೆ ಮಾಡಿ

ಪುದೀನ ಎಲೆಗಳು, ಪಾಲಕ ಸೊಪ್ಪು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಜ್ಯೂಸ್‌ ಮಾಡಿಕೊಳ್ಳಿ. ನಂತರ ರಸವನ್ನು ಸೋಸಿಕೊಂಡು ರುಚಿಗೆ ನಿಂಬೆ ರಸ, ಉಪ್ಪು ಬೆರಸಿ ಕುಡಿಯಿರಿ.

​ಬ್ರೊಕೊಲಿ ಜ್ಯೂಸ್‌
ಈ ಬ್ರೊಕೊಲಿಯನ್ನು ಬೇಸಿಗೆ ಕಾಲದಲ್ಲಿ ಸೇವನೆ ಮಾಡುವುದು ಬಹಳ ಪ್ರಯೋಜನಕಾರಿಯಾಗಿದೆ.
ಇದರಲ್ಲಿ ವಿಟಮಿನ್ ಎ, ಸಿ, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಕಾರಣ ದೇಹಕ್ಕೆ ತ್ವರಿತವಾದ ಶಕ್ತಿಯನ್ನು ಒದಗಿಸಿ, ತೂಕವನ್ನು ಕಡಿಮೆ ಮಾಡುತ್ತದೆ.
ಒಟ್ಟಾರೆ ಬೇಸಿಗೆಯಲ್ಲಿ ಬ್ರೊಕೊಲಿ ಜ್ಯೂಸ್‌ ಅತ್ಯುತ್ತಮವಾದ ಪಾನೀಯವಾಗಿದೆ.