ಹಳ್ಳಿಯಲ್ಲಿ ಗೋ ಸೇವೆ ಮಾಡಿದ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವಗೆ ಜೈಹೋ ಎಂದ ಕನ್ನಡಿಗರು!

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು ಹಳ್ಳಿಯಲ್ಲಿ ಗೋ ಸೇವೆ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಳ್ಳಿಯಲ್ಲಿ ಗೋ ಸೇವೆ ಮಾಡಿದ ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವಗೆ ಜೈಹೋ ಎಂದ ಕನ್ನಡಿಗರು!
Linkup
ಅಪ್ಪಟವಾದ ಸ್ವಚ್ಛ ಕನ್ನಡ ಮಾತನಾಡಿ ಕನ್ನಡಿಗರ ಮನಸ್ಸು ಕದ್ದಿರುವ ನಟಿ ಅವರು ಗೋ ಸೇವೆ ಮಾಡುತ್ತಿರುವ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ ಸಂದರ್ಶನದಲ್ಲಿ ಕನ್ನಡದ ಬಗ್ಗೆ ಇರುವ ಅಭಿಮಾನದ ಬಗ್ಗೆ ಅದಿತಿ ಮಾತನಾಡಿದ್ದ ಮಾತುಗಳು ಸಾಕಷ್ಟು ವೈರಲ್ ಆಗಿತ್ತು. ಪ್ಯಾಟೆಯಲ್ಲಿದ್ದರೂ ಹಳ್ಳಿಪ್ರೇಮ ಬಿಟ್ಟುಕೊಡದ ಅದಿತಿಗೆ ಪ್ರೇಕ್ಷಕರು ಜೈಹೋ ಎಂದಿದ್ದಾರೆ. ಅದಿತಿ ಪ್ರಭುದೇವ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಕೊಟ್ಟಿಗೆಯಲ್ಲಿನ ಗೋವುಗಳ ಸಗಣಿ ತೆಗೆದು, ಕಸ ಗುಡಿಸಿ ಹಾಲು ಕರೆದಿದ್ದಾರೆ, ಅಡುಗೆ ಮನೆಗೆ ಹೋಗಿ ರೊಟ್ಟಿ ತಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅದಿತಿ "ಚಿಕ್ಕಂದಿನಿಂದ ಹಳ್ಳಿಯಲ್ಲಿ ಬೆಳೆದವಳು ನಾನು. ಬೆಳೆಯುತ್ತ ಆಧುನಿಕ ಬದುಕಿಗೆ ಹತ್ತಿರವಾದರು ಮನಸ್ಸು ಮಾತ್ರ ಸದಾ ಹಳ್ಳಿಯಲ್ಲಿ ಜೀವಂತ . ಜೀವನದಲ್ಲಿ ಏನೇ ಸಿಕ್ಕರೂ ಪ್ರೀತಿ , ನೆಮ್ಮದಿ ಎಲ್ಲದಕ್ಕೂ ಮಿಗಿಲು ಎಂದು ತಿಳಿದವಳು ನಾನು . ಹಳ್ಳಿಯಲ್ಲಿನ ಅಜ್ಜಿ ಮನೆಗೆ ಹೋದಾಗ ನನ್ನ ದಿನಚರಿ ಹೀಗೆ ಇರುವುದು" ಎಂದು ಹೇಳಿದ್ದಾರೆ. ಅದಿತಿ ಪ್ರಭುದೇವ ಅವರು ಗೋ ಸೇವೆ ಮಾಡುತ್ತಿರುವ ಪರಿ ನೋಡಿ ಎಲ್ಲರೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ. "ದಾವಣಗೆರೆ ಹುಡುಗಿ ಎಂದರೆ ಕೇಳಬೇಕೆ? ನೀವು ನಮ್ಮ ಪಾಲಿಗೆ ಹೆಮ್ಮೆಯ ಕನ್ನಡತಿ. ಕನ್ನಡದ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡು, ಏನೇ ಆದರೂ ಕನ್ನಡ ಬಿಟ್ಟುಕೊಡದ ಹುಡುಗಿ ನೀವು. ಏನೇ ಆದರೂ ಸಂಸ್ಕೃತಿ-ಸಂಸ್ಕಾರ ಬಿಡಬಾರದು ಎಂಬುದಕ್ಕೆ ನೀವು ಒಳ್ಳೆಯ ಉದಾಹರಣೆ. ಹೈ ಕ್ಲಾಸ್‌ನಲ್ಲಿ ಬದುಕುವ ನಟಿಯರ ಮಧ್ಯೆ ನೀವು ಉತ್ತಮರು" ಎಂದು ಸಾಕಷ್ಟು ಜನರು ಅದಿತಿಗೆ ಭೇಷ್ ಎಂದಿದ್ದಾರೆ. ಸಾಕಷ್ಟು ಜನರು ಅದಿತಿಯನ್ನು ಪೌರಾಣಿಕ ಪಾತ್ರದಲ್ಲಿ ನೋಡುವ ಆಸೆ ಇದೆ, ನಮ್ಮ ಸಮಾಜಕ್ಕೆ ಇಂತಹ ನಟಿ ಬೇಕು, ಬೇರೆ ನಟಿಯರಿಗಿಂತ ನೀವು ತುಂಬ ವಿಭಿನ್ನ, ನಿಮ್ಮಂತವರನ್ನು ನೋಡಿ ಕರುನಾಡಿನಲ್ಲಿ ಕೆಲವರು ತುಂಬ ಕಲಿಯುವುದಿದೆ ಎಂದು ಕೂಡ ಕೆಲವರು ಅದಿತಿ ಅವರ ಗೋ ಸೇವೆ ವಿಡಿಯೋಕ್ಕೆ ಕಾಮೆಂಟ್ ಮಾಡಿದ್ದಾರೆ. ಅದಿತಿ ಪ್ರಭುದೇವ ಕೈತುಂಬ ಸಿನಿಮಾಗಳಿದ್ದು, ರಿಲೀಸ್ ಆಗಬೇಕಿವೆ. 'ಒಂಭತ್ತನೇ ದಿಕ್ಕು', 'ಓಲ್ಡ್ ಮಾಂಕ್', 'ಅಂದೊತ್ತಿತ್ತು ಕಾಲ', 'ದಿಲ್‌ಮಾರ್', 'ಗಜಾನನ & ಗ್ಯಾಂಗ್' ಮುಂತಾದ ಸಿನಿಮಾಗಳಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ.