'ನನ್ನ ಹೆಂಡತಿಯ ಒತ್ತಾಯದ ಮೇರೆಗೆ 'ಲವ್ ಮಾಕ್‌ಟೇಲ್' ಸಿನಿಮಾ ನೋಡಿದ್ದೆ'- ರವಿ ಡಿ. ಚನ್ನಣ್ಣನವರ್‌

ದಕ್ಷ ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್‌ ಅವರು ಮಾತು, ನಡೆ, ಕರ್ತವ್ಯ ಪಾಲನೆ, ಪ್ರಾಮಾಣಿಕತೆಯಿಂದಲೇ ಹೆಸರು ಮಾಡಿದ್ದಾರೆ. ಈಚೆಗೆ 'ದಿಲ್ ಪಸಂದ್' ಚಿತ್ರದ ಪ್ರೆಸ್ ಮೀಟ್‌ನಲ್ಲಿ ಡಾರ್ಲಿಂಗ್ ಕೃಷ್ಣ ಅವರ ಬಗ್ಗೆ ಮಾತನಾಡಿದ್ದಾರೆ.

'ನನ್ನ ಹೆಂಡತಿಯ ಒತ್ತಾಯದ ಮೇರೆಗೆ 'ಲವ್ ಮಾಕ್‌ಟೇಲ್' ಸಿನಿಮಾ ನೋಡಿದ್ದೆ'- ರವಿ ಡಿ. ಚನ್ನಣ್ಣನವರ್‌
Linkup
ದಕ್ಷ ಪೊಲೀಸ್ ಅಧಿಕಾರಿ ಅವರು ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಿಗೆ ಹಾಜರಾಗುವುದು ತುಂಬ ಕಡಿಮೆ. ತಮ್ಮ 13 ವರ್ಷಗಳ ಸೇವಾವಧಿಯಲ್ಲಿ ಇದೇ ಮೊದಲ ಬಾರಿಗೆ ಅವರು ಅಭಿನಯದ '' ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದರು. ಆ ವೇಳೆ ಸಿನಿಮಾದ ಜೊತೆಗೆ ತಮಗಿರುವ ಕನೆಕ್ಷನ್‌ ಅನ್ನು ಹೇಳಿಕೊಂಡರು. ಅಷ್ಟೇ ಅಲ್ಲ, 'ಲವ್ ಮಾಕ್‌ಟೇಲ್' ಸಿನಿಮಾವನ್ನು ತಮ್ಮ ಪತ್ನಿಗಾಗಿ ನೋಡಿದೆ ಎಂಬುದನ್ನು ಸಹ ತಿಳಿಸಿದರು ರವಿ ಡಿ. ಚನ್ನಣ್ಣನವರ್‌. 'ನನ್ನ ಸೇವಾವಧಿಯಲ್ಲಿ ಇಂಥದ್ದೊಂದು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದು ಇದೇ ಮೊದಲು. ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಎರಡು ಕಾರಣಗಳಿವೆ. ಒಂದು ನಿರ್ಮಾಪಕ ಸುಮಂತ್ ಕ್ರಾಂತಿ. ನಾನು ಇಂಗ್ಲಿಷ್‌ನಲ್ಲಿ ಎಂಎ ಮಾಡುವುದಕ್ಕೆ ಜ್ಞಾನಭಾರತಿಗೆ ಬಂದಿದ್ದೆ. ಆಗಿನಿಂದಲೂ ಈವರೆಗೂ ನಾನು ಸುಮಂತ್ ಅವರಲ್ಲಿ ಕಂಡಿದ್ದು ಪ್ರತಿಭೆ ಮತ್ತು ಹೋರಾಟದ ಕಿಚ್ಚು. ಈ ಹುಡುಗ ಏನಾದರೂ ಒಳ್ಳೆಯದು ಮಾಡಬೇಕು ಎಂದುಕೊಂಡಿದ್ದ. ಆದರೆ, ಈ ಮಟ್ಟಕ್ಕೆ ಬೆಳೆದಿರುವುದು ನನಗೆ ಖುಷಿ ವಿಚಾರ' ಎಂದು ಅವರು ಹೇಳಿದರು. ಪತ್ನಿ ಒತ್ತಾಯದಿಂದಾಗಿ ಲವ್‌ ಮಾಕ್‌ಟೇಲ್ ನೋಡಿದೆ'ಈ ಕಾರ್ಯಕ್ರಮಕ್ಕೆ ಬರುವುದಕ್ಕೆ ಮತ್ತೊಂದು ಕಾರಣ, ನಟ ಡಾರ್ಲಿಂಗ್ ಕೃಷ್ಣ ಅವರು. ನಾನು ಅವರ 'ಲವ್ ಮಾಕ್‌ಟೇಲ್' ಸಿನಿಮಾ ನೋಡಿದೆ; ಅದು ನನ್ನ ಹೆಂಡತಿಯ ಒತ್ತಾಯದ ಮೇರೆಗೆ. ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ಅತ್ಯದ್ಭುತವಾಗಿ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಮನಸ್ಸಿನಿಂದ ಮಾಡಿರುವ ಸಿನಿಮಾ ಅದು. ಚಿತ್ರರಂಗದಲ್ಲಿ ಅವರು ಬೆಳೆದು ಬಂದ ಹಿನ್ನೆಲೆ ಬಗ್ಗೆ ನನಗೆ ಖುಷಿ ಇದೆ. ಚಿತ್ರರಂಗವು ಪ್ರತಿಯೊಬ್ಬರ ಪ್ರತಿಭೆಯನ್ನು ಪ್ರತಿನಿತ್ಯವು ಒರೆಗೆ ಹಚ್ಚುತ್ತದೆ' ಎಂದು ಹೊಗಳಿದರು ರವಿ ಡಿ. ಚನ್ನಣ್ಣನವರ್‌. ರವಿ ಡಿ. ಚನ್ನಣ್ಣನವರ್‌ ಅವರಿಗೆ ಸಿನಿಮಾಗಳ ಜೊತೆಗೆ ಮೊದಲಿನಿಂದಲೂ ನಂಟು ಇತ್ತು. 'ಅಸುರ', 'ಯಜಮಾನ', 'ದಿಲ್ ಕಾ ರಿಶ್ತಾ', 'ಅಂಜಲಿ ಗೀತಾಂಜಲಿ' ಮುಂತಾದ ಸಿನಿಮಾಗಳು ಬಂದಾಗ ಗದಗ್‌ನ ಮಹಾಲಕ್ಷ್ಮೀ, ಶಾಂತಿ, ಕರ್ನಾಟಕ ಥಿಯೇಟರ್‌ನಲ್ಲಿ ಅವರು ಬ್ಲಾಕ್ ಟಿಕೆಟ್ ಮಾರಾಟ ಮಾಡಿದ್ದರಂತೆ. ಅದನ್ನೂ ಸಹ ಅವರೇ ಹೇಳಿಕೊಂಡಿದ್ದಾರೆ. 'ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ. ಒಬ್ಬ ಮಹಾನ್‌ ವ್ಯಕ್ತಿ ಹೇಳಿದ ಮಾತುಗಳನ್ನು ಜನರು ನೆನಪಿಲ್ಲಿ ಇಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾ ಡೈಲಾಗ್‌ಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ನನಗೆ ಡಾ. ರಾಜ್‌ಕುಮಾರ್ ಅವರ 'ಮಯೂರ' ಸಿನಿಮಾ ಸಾಕಷ್ಟು ಪ್ರಭಾವ ಬೀರಿತ್ತು' ಎಂದು ಅವರು ಹೇಳಿಕೊಂಡಿದ್ದಾರೆ.