'ಸೋಷಿಯಲ್ ಮೀಡಿಯಾ ನ್ಯೂಕ್ಲಿಯರ್‌ ಪವರ್‌ ಇದ್ದಹಾಗೆ, ಅದನ್ನು ಸರಿಯಾಗಿ ಬಳಸಬೇಕು'- ನಟ ರಮೇಶ್ ಅರವಿಂದ್‌

ನಟ/ನಿರ್ದೇಶಕ ರಮೇಶ್‌ ಅರವಿಂದ್‌ ನಿರ್ದೇಶನ ಮಾಡಿರುವ '100' ಸಿನಿಮಾದ ಟ್ರೇಲರ್‌ ವೈರಲ್‌ ಆಗುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಕೂಡ ತೆರೆಗೆ ಬರಲಿದೆ. ಸೈಬರ್ ಕ್ರೈಮ್ ಕುರಿತ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಬಗ್ಗೆ ರಮೇಶ್ ಅರವಿಂದ್ ಮಾತನಾಡಿದ್ದಾರೆ.

'ಸೋಷಿಯಲ್ ಮೀಡಿಯಾ ನ್ಯೂಕ್ಲಿಯರ್‌ ಪವರ್‌ ಇದ್ದಹಾಗೆ, ಅದನ್ನು ಸರಿಯಾಗಿ ಬಳಸಬೇಕು'- ನಟ ರಮೇಶ್ ಅರವಿಂದ್‌
Linkup
ಹರೀಶ್‌ ಬಸವರಾಜ್‌ ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಅದರಲ್ಲಿರುವ ಸೋಷಿಯಲ್‌ ಮೀಡಿಯಾದ ಪ್ರಯೋಜನವನ್ನು ಪಡೆದುಕೊಂಡಿರುವ ಜತೆಗೆಯೇ ಕೆಲವು ತೊಂದರೆಗಳನ್ನೂ ಎದುರಿಸಿದ್ದಾರೆ. ಈ ರೀತಿ ತೊಂದರೆ ಅನುಭವಿಸುವವರ ಕಥೆಯನ್ನು ನಟ ರಮೇಶ್‌ ಅರವಿಂದ್‌ '100' ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ನವೆಂಬರ್‌ 19ರಂದು ಬಿಡುಗಡೆಯಾಗಲಿರುವ ಈ ಸಿನಿಮಾದ ಟ್ರೇಲರ್‌ ಈಗಾಗಲೇ ವೈರಲ್‌ ಆಗಿದ್ದು, ಅದರಲ್ಲಿಸಿನಿಮಾದ ಕಂಟೆಂಟ್‌ ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿಸಲಾಗಿದೆ. ಫ್ಯಾಮಿಲಿಯೊಳಗಿನ ಥ್ರಿಲ್ಲರ್ ಕಥೆ 'ಸಾಮಾಜಿಕ ಜಾಲತಾಣ ಒಂದು ರೀತಿಯಲ್ಲಿ ಆಟಂ ಬಾಂಬ್‌ ಮತ್ತು ನ್ಯೂಕ್ಲಿಯರ್‌ ಪವರ್‌ ಇದ್ದ ಹಾಗೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬೆಳಕು ಸಿಗುತ್ತದೆ. ತಪ್ಪಾಗಿ ಬಳಸಿದರೆ ಸಿಡಿದು ಜೀವಕ್ಕೆ ಎರವಾಗಿ ನಾಗಸಾಕಿ, ಹಿರೋಶಿಮಾದಲ್ಲಿ ಆದಂತೆ ಆಗುತ್ತದೆ. ಈ ಸಿನಿಮಾದಲ್ಲಿ ಫ್ಯಾಮಿಲಿಯೊಳಗೆ ನಡೆಯುವಂಥ ಥ್ರಿಲ್ಲರ್‌ ಕಥೆಯನ್ನು ಹೇಳುತ್ತಿದ್ದೇವೆ' ಎಂದು ರಮೇಶ್‌ ಅರವಿಂದ್‌ ಹೇಳಿದ್ದಾರೆ. ಯಾರ್ ಯಾರೋ ಒಳಗೆ ಬರುತ್ತಿದ್ದಾರೆ 'ಚಿಕ್ಕ ವಯಸ್ಸಿನಲ್ಲಿ ಅಪರಿಚಿತರಿಂದ ಚಾಕ್ಲೇಟ್‌ ತೆಗೆದುಕೊಳ್ಳಬೇಡ ಎಂದು ಮನೆಯಲ್ಲಿ ಹೇಳುತ್ತಿದ್ದರು. ಈಗ ಮನೆಯೊಳಗೆ ನಮಗೆ ಗೊತ್ತಿಲ್ಲದೇ ಮೊಬೈಲ್‌ ಮೂಲಕ ಬೇರೆ ಬೇರೆ ರೀತಿಯ ಚಾಕ್ಲೇಟ್‌ಗಳನ್ನು ನೀಡುತ್ತಿದ್ದಾರೆ. ಮನೆಯಲ್ಲಿ ನಾಲ್ಕು ಜನರು ಇದ್ದರೆ, ಎಲ್ಲರ ಕೈಯಲ್ಲಿಯೂ ಒಂದೊಂದು ಮೊಬೈಲ್‌ ಇದೆ. ಅದರಲ್ಲಿ ಅವರು ಎಂತಹದ್ದೋ ವಿಡಿಯೋ ನೋಡುತ್ತಿದ್ದಾರೆ. ಯಾರ್ ಯಾರೋ ಒಳಗೆ ಬರುತ್ತಿದ್ದಾರೆ. ನಮ್ಮ ಮಕ್ಕಳಿಗೆ ಒಂದು ಮೌಲ್ಯವನ್ನು ಹೇಳಿಕೊಟ್ಟಿರುತ್ತೇವೆ. ಅದನ್ನು ಬ್ರೇಕ್‌ ಮಾಡುವಂಥ ಪ್ರಯತ್ನ ಈ ಮೊಬೈಲ್‌ನಲ್ಲಿಆಗುತ್ತಿದೆ' ಎಂದು ಅವರು ವಿವರಿಸಿದ್ದಾರೆ. ರಮೇಶ್ ತಂಗಿಯಾಗಿ ರಚಿತಾ 'ಕೋವಿಡ್‌ ಸಮಯದಲ್ಲಿ ಎಲ್ಲರೂ ಆನ್‌ಲೈನ್‌ಗೆ ಬಂದೆವು. ಈ ಡಿಜಿಟಲ್‌ ವೇದಿಕೆ ಮೂಲಕ ಯಾವ ರೀತಿಯಲ್ಲಿ ಮೋಸ ಮಾಡಬಹುದು ಎಂಬುದು '100' ಸಿನಿಮಾದಲ್ಲಿದೆ. ಮೊಬೈಲ್‌ ಮೂಲಕ ಒಳಗೆ ಬರುತ್ತಿರುವ ಅಪರಿಚಿತರ ಮೋಸವನ್ನು ಒಬ್ಬ ಗೃಹಸ್ಥ ಹೇಗೆ ಬ್ರೇಕ್‌ ಮಾಡುತ್ತಾನೆ ಎಂಬುದು ಇದರಲ್ಲಿದೆ. ನಟಿ ಅವರು ನನ್ನ ಸಹೋದರಿಯಾಗಿ ನಟಿಸಿದ್ದಾರೆ. ನಟಿ ಪೂರ್ಣ ನನ್ನ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ' ಎಂದು ರಮೇಶ್‌ ಅರವಿಂದ್‌ ತಿಳಿಸಿದ್ದಾರೆ. ಕೋಟ್‌: 100 ಸಿನಿಮಾ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥ ಕಥೆ ಹೊಂದಿದೆ. ಸೋಷಿಯಲ್‌ ಮೀಡಿಯಾವನ್ನು ಹೇಗೆ ಬಳಸುತ್ತೇವೆ, ಅದರ ಅನುಕೂಲ, ಅನನುಕೂಲಗಳು ಈ ಸಿನಿಮಾದಲ್ಲಿವೆ. ಇಂಥ ಒಳ್ಳೆಯ ಸಿನಿಮಾ ನಿರ್ಮಾಣವಾಗಲು ನಿರ್ಮಾಪಕ ರಮೇಶ್‌ ರೆಡ್ಡಿಯವರೇ ಕಾರಣ. -ರಮೇಶ್‌ ಅರವಿಂದ್‌, ನಿರ್ದೇಶಕ/ನಟ