ಇಸ್ರೋ ಸೋಲಾರ್ ಮಿಶನ್: ಜನವರಿ 6ಕ್ಕೆ ಗಮ್ಯ ಸ್ಥಾನ ತಲುಪಲಿದೆ ಆದಿತ್ಯ ಎಲ್​1

ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ಜನವರಿ 6 ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಶನಿವಾರ ಹೇಳಿದ್ದಾರೆ. ಅಹಮದಾಬಾದ್: ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ಜನವರಿ 6 ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಶನಿವಾರ ಹೇಳಿದ್ದಾರೆ. ವಿಜ್ಞಾನ ಭಾರತಿ ಎಂಬ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ್ದ ಭಾರತೀಯ ವಿಜ್ಞಾನ ಸಮ್ಮೇಳದಲ್ಲಿ ಈ ಕುರಿತು ಅವರು ಸೋಮನಾಥ್  ಮಾಹಿತಿ ನೀಡಿದರು. ಸೂರ್ಯನ ಸಮಗ್ರ ಅಧ್ಯಯನಕ್ಕೆ ಇಸ್ರೋ ಆದಿತ್ಯ ಎಲ್1 ನೌಕೆಯನ್ನು ಸೆಪ್ಟೆಂಬರ್​ 2ರಂದು ಶ್ರೀಹರಿಕೋಟದಿಂದ ಉಡಾವಣೆ ಮಾಡಿತ್ತು. ಆದಿತ್ಯ-ಎಲ್​1 ಜನವರಿ 6ರಂದು ಎಲ್​1 ಪಾಯಿಂಟ್​​ ಪ್ರವೇಶಿಸಲಿದೆ. ಅದರ ಕುರಿತಂತೆ ನಿಖರ ಸಮಯವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದ ಭಾರತದ ಆದಿತ್ಯ-ಎಲ್1 ಮಿಷನ್ ನೌಕೆ ಎಲ್​1 ಬಿಂದು ತಲುಪುತ್ತಿದ್ದಂತೆ ನಾವು ಮತ್ತೊಮ್ಮೆ ಇಂಜಿನ್​ ಅನ್ನು ಹೊತ್ತಿಸುತ್ತೇವೆ. ಮತ್ತೆ ಅದು ಎಲ್ಲಿಗೂ ಹೋಗಬಾರದೆಂದು ಹೀಗೆ ಮಾಡಲಾಗುತ್ತದೆ. ಇದು ಬಿಂದುವಿನ ಸ್ಥಾನಕ್ಕೆ ಹೋಗಲಿದ್ದು, ಒಮ್ಮೆ ಇದು ನಿರ್ದಿಷ್ಟ ಬಿಂದುವಿನ ಸ್ಥಳಕ್ಕೆ ತಲುಪಿದರೆ, ಅದರ ಸುತ್ತ ನೌಕೆಯು ಸುತ್ತಲಿದೆ ಎಂದು ತಿಳಿಸಿದರು. ಆದಿತ್ಯ ಎಲ್​1 ತನ್ನ ನಿಗದಿತ ಸ್ಥಾನವನ್ನು ಒಮ್ಮೆ ತಲುಪಿದರೆ, ಮುಂದಿನ ಐದು ವರ್ಷ ಸೂರ್ಯನಲ್ಲಿ ಏನೆಲ್ಲಾ ಘಟನೆಗಳು ನಡೆಯಲಿದೆ ಎಂದು ಮಾಪನ ಮಾಡಲು ಸಹಾಯವಾಗಲಿದೆ. ನಿಗದಿತ ಸ್ಥಳಕ್ಕೆ ತಲುಪಿದರೆ, ಮುಂದಿನ ಐದು ವರ್ಷ ಅಲ್ಲಿಯೇ ಸ್ಥಿರವಾಗಿ ಇರಲಿದೆ. ಕೇವಲ ಭಾರತಕ್ಕೆ ಮಾತ್ರವಲ್ಲದೇ, ಜಗತ್ತಿಗೆ ಬೇಕಾದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಲಿದೆ. ಈ ದತ್ತಾಂಶವೂ ಸೂರ್ಯನ ಡೈನಾಮಿಕ್ಸ್​ ಮತ್ತು ಅದು ನಮ್ಮ ಜೀವನದ ಮೇಲೆ ಬೀರುವ ಪರಿಣಾಮ ಅರಿಯಲು ಸಹಕಾರಿಯಾಗಲಿದೆ. ಈ ಮೂಲಕ ಭಾರತವು ಹೇಗೆ ತಾಂತ್ರಿಕವಾಗಿ ಶಕ್ತಿಶಾಲಿಯಾಗುತ್ತಿದೆ ಎಂಬುದು ತಿಳಿಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆದಿತ್ಯ-ಎಲ್1ನಲ್ಲಿ ಕಾರ್ಯಾಚರಣೆ ಆರಂಭಿಸಿದ ಸೋಲಾರ್ ವಿಂಡ್ ಪೇಲೋಡ್: ಇಸ್ರೋ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಅಮೃತ ಕಾಲದ ಸಮಯದಲ್ಲಿ 'ಭಾರತೀಯ ಬಾಹ್ಯಾಕಾಶ ನಿಲ್ದಾಣ' ನಿರ್ಮಿಸಲು ಇಸ್ರೋ ಯೋಜನೆ ರೂಪಿಸಿದೆ. ಭಾರತವು ಎಲ್ಲದರಲ್ಲೂ ನಾಯಕನಾಗಲು ಸಾಧ್ಯವಿಲ್ಲ. ಆದರೆ, ಸಾಧ್ಯವಿರುವ ಕ್ಷೇತ್ರಗಳ ಮೇಲೆ ನಾವು ಗಮನಹರಿಸಬೇಕು ಎಂದರು.

ಇಸ್ರೋ ಸೋಲಾರ್ ಮಿಶನ್: ಜನವರಿ 6ಕ್ಕೆ ಗಮ್ಯ ಸ್ಥಾನ ತಲುಪಲಿದೆ ಆದಿತ್ಯ ಎಲ್​1
Linkup
ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ಜನವರಿ 6 ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಶನಿವಾರ ಹೇಳಿದ್ದಾರೆ. ಅಹಮದಾಬಾದ್: ಭಾರತದ ಚೊಚ್ಚಲ ಸೌರ ಮಿಷನ್ ಆದಿತ್ಯ-ಎಲ್ 1 ತನ್ನ ಗಮ್ಯಸ್ಥಾನವನ್ನು, ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ಲಗ್ರಾಂಜಿಯನ್ ಪಾಯಿಂಟ್ (ಎಲ್ 1) ಅನ್ನು ಜನವರಿ 6 ರಂದು ತಲುಪಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಅವರು ಶನಿವಾರ ಹೇಳಿದ್ದಾರೆ. ವಿಜ್ಞಾನ ಭಾರತಿ ಎಂಬ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ್ದ ಭಾರತೀಯ ವಿಜ್ಞಾನ ಸಮ್ಮೇಳದಲ್ಲಿ ಈ ಕುರಿತು ಅವರು ಸೋಮನಾಥ್  ಮಾಹಿತಿ ನೀಡಿದರು. ಸೂರ್ಯನ ಸಮಗ್ರ ಅಧ್ಯಯನಕ್ಕೆ ಇಸ್ರೋ ಆದಿತ್ಯ ಎಲ್1 ನೌಕೆಯನ್ನು ಸೆಪ್ಟೆಂಬರ್​ 2ರಂದು ಶ್ರೀಹರಿಕೋಟದಿಂದ ಉಡಾವಣೆ ಮಾಡಿತ್ತು. ಆದಿತ್ಯ-ಎಲ್​1 ಜನವರಿ 6ರಂದು ಎಲ್​1 ಪಾಯಿಂಟ್​​ ಪ್ರವೇಶಿಸಲಿದೆ. ಅದರ ಕುರಿತಂತೆ ನಿಖರ ಸಮಯವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದ ಭಾರತದ ಆದಿತ್ಯ-ಎಲ್1 ಮಿಷನ್ ನೌಕೆ ಎಲ್​1 ಬಿಂದು ತಲುಪುತ್ತಿದ್ದಂತೆ ನಾವು ಮತ್ತೊಮ್ಮೆ ಇಂಜಿನ್​ ಅನ್ನು ಹೊತ್ತಿಸುತ್ತೇವೆ. ಮತ್ತೆ ಅದು ಎಲ್ಲಿಗೂ ಹೋಗಬಾರದೆಂದು ಹೀಗೆ ಮಾಡಲಾಗುತ್ತದೆ. ಇದು ಬಿಂದುವಿನ ಸ್ಥಾನಕ್ಕೆ ಹೋಗಲಿದ್ದು, ಒಮ್ಮೆ ಇದು ನಿರ್ದಿಷ್ಟ ಬಿಂದುವಿನ ಸ್ಥಳಕ್ಕೆ ತಲುಪಿದರೆ, ಅದರ ಸುತ್ತ ನೌಕೆಯು ಸುತ್ತಲಿದೆ ಎಂದು ತಿಳಿಸಿದರು. ಆದಿತ್ಯ ಎಲ್​1 ತನ್ನ ನಿಗದಿತ ಸ್ಥಾನವನ್ನು ಒಮ್ಮೆ ತಲುಪಿದರೆ, ಮುಂದಿನ ಐದು ವರ್ಷ ಸೂರ್ಯನಲ್ಲಿ ಏನೆಲ್ಲಾ ಘಟನೆಗಳು ನಡೆಯಲಿದೆ ಎಂದು ಮಾಪನ ಮಾಡಲು ಸಹಾಯವಾಗಲಿದೆ. ನಿಗದಿತ ಸ್ಥಳಕ್ಕೆ ತಲುಪಿದರೆ, ಮುಂದಿನ ಐದು ವರ್ಷ ಅಲ್ಲಿಯೇ ಸ್ಥಿರವಾಗಿ ಇರಲಿದೆ. ಕೇವಲ ಭಾರತಕ್ಕೆ ಮಾತ್ರವಲ್ಲದೇ, ಜಗತ್ತಿಗೆ ಬೇಕಾದ ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಲಿದೆ. ಈ ದತ್ತಾಂಶವೂ ಸೂರ್ಯನ ಡೈನಾಮಿಕ್ಸ್​ ಮತ್ತು ಅದು ನಮ್ಮ ಜೀವನದ ಮೇಲೆ ಬೀರುವ ಪರಿಣಾಮ ಅರಿಯಲು ಸಹಕಾರಿಯಾಗಲಿದೆ. ಈ ಮೂಲಕ ಭಾರತವು ಹೇಗೆ ತಾಂತ್ರಿಕವಾಗಿ ಶಕ್ತಿಶಾಲಿಯಾಗುತ್ತಿದೆ ಎಂಬುದು ತಿಳಿಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆದಿತ್ಯ-ಎಲ್1ನಲ್ಲಿ ಕಾರ್ಯಾಚರಣೆ ಆರಂಭಿಸಿದ ಸೋಲಾರ್ ವಿಂಡ್ ಪೇಲೋಡ್: ಇಸ್ರೋ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಅಮೃತ ಕಾಲದ ಸಮಯದಲ್ಲಿ 'ಭಾರತೀಯ ಬಾಹ್ಯಾಕಾಶ ನಿಲ್ದಾಣ' ನಿರ್ಮಿಸಲು ಇಸ್ರೋ ಯೋಜನೆ ರೂಪಿಸಿದೆ. ಭಾರತವು ಎಲ್ಲದರಲ್ಲೂ ನಾಯಕನಾಗಲು ಸಾಧ್ಯವಿಲ್ಲ. ಆದರೆ, ಸಾಧ್ಯವಿರುವ ಕ್ಷೇತ್ರಗಳ ಮೇಲೆ ನಾವು ಗಮನಹರಿಸಬೇಕು ಎಂದರು. ಇಸ್ರೋ ಸೋಲಾರ್ ಮಿಶನ್: ಜನವರಿ 6ಕ್ಕೆ ಗಮ್ಯ ಸ್ಥಾನ ತಲುಪಲಿದೆ ಆದಿತ್ಯ ಎಲ್​1