ಆಸ್ಪತ್ರೆಯಲ್ಲಿರುವ ಸಾಯಿ ಧರಮ್‌ ತೇಜ್‌ ಸಹಾಯಕ್ಕೆ ಬಂದ 'ಮೆಗಾ ಫ್ಯಾಮಿಲಿ'; ಇದು ಫ್ಯಾನ್ಸ್‌ಗೆ ಗುಡ್ ನ್ಯೂಸ್

ಬೈಕ್ ಅಪಘಾತದಲ್ಲಿ ನಟ ಸಾಯಿ ಧರಮ್‌ ತೇಜ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಒಂದು ವಿಚಾರಕ್ಕಾಗಿ ಇಡೀ ಮೆಗಾ ಫ್ಯಾಮಿಲಿ ಅವರ ಸಪೋರ್ಟ್‌ಗೆ ನಿಂತಿದೆ.

ಆಸ್ಪತ್ರೆಯಲ್ಲಿರುವ ಸಾಯಿ ಧರಮ್‌ ತೇಜ್‌ ಸಹಾಯಕ್ಕೆ ಬಂದ 'ಮೆಗಾ ಫ್ಯಾಮಿಲಿ'; ಇದು ಫ್ಯಾನ್ಸ್‌ಗೆ ಗುಡ್ ನ್ಯೂಸ್
Linkup
ಟಾಲಿವುಡ್‌ ನಟ ಸಾಯಿ ಧರಮ್ ತೇಜ್‌ ಅವರು ಸೆ.10ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಇಡೀ ಮೆಗಾ ಫ್ಯಾಮಿಲಿ ಅಂದು ಆಸ್ಪತ್ರೆಗೆ ಧಾವಿಸಿ, ತೇಜ್ ಆರೋಗ್ಯ ವಿಚಾರಿಸಿ, ಆರೈಕೆ ಮಾಡಿತ್ತು. ಇದೀಗ ಮತ್ತೊಂದು ಕಾರಣಕ್ಕೆ ಇಡೀ ಮೆಗಾ ಫ್ಯಾಮಿಲಿ ತೇಜ್ ಸಹಾಯಕ್ಕೆ ಬಂದಿದೆ. ಸಾಯಿ ಧರಮ್‌ ಸಿನಿಮಾ ಮೆಗಾ ಸಪೋರ್ಟ್ ಸಾಯಿ ಧರಮ್ ನಟನೆಯ 'ರಿಪಬ್ಲಿಕ್‌' ಸಿನಿಮಾವು ಇದೇ ಅಕ್ಟೋಬರ್‌ ಮೊದಲ ವಾರದಂದು ತೆರೆಗೆ ಬರಲಿದೆ. ಆದರೆ, ಈ ಸಿನಿಮಾ ಪ್ರಚಾರಕ್ಕೆ ಸಾಯಿ ಧರಮ್‌ ತೇಜ್ ಬರಲು ಸಾಧ್ಯವಿಲ್ಲ. ಹಾಗಾಗಿ, ಅವರ ಪರವಾಗಿ ಇಡೀ ಮೆಗಾ ಫ್ಯಾಮಿಲಿಯೇ ಈ ಸಿನಿಮಾದ ಸಪೋರ್ಟ್‌ಗೆ ಬಂದಿದೆ. ಹೌದು, ಸಾಯಿ ಧರಮ್‌ ತೇಜ್ ಮಾವ, 'ಮೆಗಾ ಸ್ಟಾರ್' ಚಿರಂಜೀವಿ 'ರಿಪಬ್ಲಿಕ್‌' ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ಗೆ ಸಾಯಿ ಧರಮ್‌ ತೇಜ್ ಮತ್ತೋರ್ವ ಮಾವ, 'ಪವರ್ ಸ್ಟಾರ್' ಪವನ್‌ ಕಲ್ಯಾಣ್‌ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಸಾಯಿ ಧರಮ್ ತೇಜ್‌ ಹೊರತುಪಡಿಸಿ ಇಡೀ ಚಿತ್ರತಂಡ ಭಾಗವಹಿಸಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಅಂದು ಸಾಯಿ ಧರಮ್ ತೇಜ್‌ ಒಂದು ವಿಡಿಯೋ ಬೈಟ್ ನೀಡುವ ಸಾಧ್ಯತೆ ಇದೆ. ಇನ್ನುಳಿದಂತೆ ಮೆಗಾ ಫ್ಯಾಮಿಲಿಯ ಉಳಿದ ಹೀರೋಗಳು ತಮ್ಮ ಸೋಶಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಸಿನಿಮಾದ ಪ್ರಮೋಷನ್ ಮಾಡಲಿದ್ದಾರೆ. ಸದ್ಯ ಈಗ ಗುಣಮುಖರಾಗುತ್ತಿದ್ದು, ಲೈಫ್‌ ಸಪೋರ್ಟ್ ತೆಗೆಯಲಾಗಿದೆ. ಸದ್ಯ ವೈದ್ಯರ ನಿಗಾದಲ್ಲಿರುವ ಅವರನ್ನು ಕೆಲವು ದಿನಗಳ ನಂತರ ಡಿಸ್‌ಚಾರ್ಜ್ ಮಾಡುವ ಸಾಧ್ಯತೆ ಇದೆ. ಅವರಿಗೆ ಯಶಸ್ವಿಯಾಗಿ ಕಾಲರ್ ಬೋನ್ ಚಿಕಿತ್ಸೆ ಮಾಡಲಾಗಿದೆ. ಅಂದಹಾಗೆ,ರಿಪಬ್ಲಿಕ್ ಸಿನಿಮಾದಲ್ಲಿ ಮೊದಲ ಬಾರಿಗೆ ಸಾಯಿ ಧರಮ್ ತೇಜ್ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರಿಗೆ ನಾಯಕಿಯಾಗಿ ಐಶ್ವರ್ಯಾ ರಾಜೇಶ್ ನಟಿಸಿದ್ದಾರೆ. ದೇವ ಕಟ್ಟ ಇದರ ನಿರ್ದೇಶಕರು. ಜಗಪತಿ ಬಾಬು, ರಮ್ಯಾ ಕೃಷ್ಣ, ಸುಬ್ಬರಾಜು, ರಾಹುಲ್ ರಾಮಕೃಷ್ಣ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ಮಣಿ ಶರ್ಮಾ ಈ ಸಿನಿಮಾದ ಹಾಡುಗಳಿಗೆ ಸಂಗೀತ ನೀಡಿದ್ಧಾರೆ. ರಿಪಬ್ಲಿಕ್ ಮೇಲೆ ದೊಡ್ಡ ನಿರೀಕ್ಷೆಯನ್ನು ಸಾಯಿ ಧರಮ್ ತೇಜ್ ಅವರು ಇಟ್ಟುಕೊಂಡಿದ್ದಾರೆ.