ಈ ವರ್ಷವೂ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವಿಲ್ಲ: ವಿಷಾದ ವ್ಯಕ್ತಪಡಿಸಿದ ಉಪೇಂದ್ರ

ಈ ವರ್ಷವೂ ಅಭಿಮಾನಿಗಳ ಜೊತೆಗಿನ ತಮ್ಮ ಹುಟ್ಟುಹಬ್ಬ ಆಚರಣೆಗೆ ರಿಯಲ್ ಸ್ಟಾರ್ ಉಪೇಂದ್ರ ಬ್ರೇಕ್ ಹಾಕಿದ್ದಾರೆ. ‘’ಈ ವರ್ಷವೂ ಅಭಿಮಾನಿಗಳ ಜೊತೆಗೆ ಸಂಭ್ರಮ ಇರುವುದಿಲ್ಲ’’ ಎಂಬ ಬೇಸರದ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಉಪೇಂದ್ರ.

ಈ ವರ್ಷವೂ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವಿಲ್ಲ: ವಿಷಾದ ವ್ಯಕ್ತಪಡಿಸಿದ ಉಪೇಂದ್ರ
Linkup
ಪ್ರತಿ ವರ್ಷ ಸೆಪ್ಟೆಂಬರ್ 18 ಬಂತು ಅಂದ್ರೆ ‘ರಿಯಲ್ ಅಭಿಮಾನಿ’ಗಳಲ್ಲಿ ಸಡಗರ ಸಂಭ್ರಮ ತುಂಬಿ ತುಳುಕುತ್ತಿರುತ್ತಿತ್ತು. ಆದರೆ, ಮಾರಣಾಂತಿಕ ಕೋವಿಡ್ ಶುರುವಾದಾಗಿನಿಂದ ಯಾವ ತಾರೆಯರೂ ಕೂಡ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿಲ್ಲ. ಹಾಗೆ, ಕೂಡ ತಮ್ಮ ಫ್ಯಾನ್ಸ್ ಜೊತೆಗೆ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡಿಲ್ಲ. ಈ ವರ್ಷವೂ ಅಭಿಮಾನಿಗಳ ಜೊತೆಗಿನ ತಮ್ಮ ಆಚರಣೆಗೆ ರಿಯಲ್ ಸ್ಟಾರ್ ಬ್ರೇಕ್ ಹಾಕಿದ್ದಾರೆ. ‘’ಈ ವರ್ಷವೂ ಅಭಿಮಾನಿಗಳ ಜೊತೆಗೆ ಸಂಭ್ರಮ ಇರುವುದಿಲ್ಲ’’ ಎಂಬ ಬೇಸರದ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಉಪೇಂದ್ರ. ಟ್ವೀಟ್ ಮಾಡಿರುವ ಉಪೇಂದ್ರ ತಾವು ಈ ವರ್ಷ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆಗೆ ಆಚರಣೆ ಮಾಡದಿರುವ ಬಗ್ಗೆ ಹಾಗೂ ತಮ್ಮ ಜನ್ಮದಿನದಂದು ಬೆಂಗಳೂರಿನಲ್ಲಿ ಇರದಿರುವ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ‘’ಅಭಿಮಾನಿಗಳ ದಿನ, 18.09.2021 ಪ್ರತಿವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲಾ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ’’ ಎಂದು ನಟ ಉಪೇಂದ್ರ ಟ್ವೀಟ್ ಮಾಡಿದ್ದಾರೆ. ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿರುವ ಉಪೇಂದ್ರ ಸೆಪ್ಟೆಂಬರ್ 18 ರಂದು ಅಭಿಮಾನಿಗಳ ಜೊತೆಗೆ ಉಪೇಂದ್ರ ತಮ್ಮ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳದೇ ಇದ್ದರೂ, ಫ್ಯಾನ್ಸ್‌ಗೆ ಖುಷಿ ನೀಡುವ ಸುದ್ದಿ ಈಗಾಗಲೇ ಸಿಕ್ಕಿದೆ. ಜನ್ಮದಿನದ ಪ್ರಯುಕ್ತ ಘೋಷಣೆಯಾಗಬೇಕಿದ್ದ ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಟೈಟಲ್ ಈಗಾಗಲೇ ಲೀಕ್ ಆಗಿದೆ. ಸದ್ಯ ಲೀಕ್ ಆಗಿರುವ ಉಪೇಂದ್ರ ನಿರ್ದೇಶನದ ಹೊಸ ಚಿತ್ರದ ಫಸ್ಟ್ ಲುಕ್‌ನಲ್ಲಿ ಸಿನಿಮಾದ ಟೈಟಲ್‌ ಮೂರು ನಾಮದ ಸಿಂಬಲ್ ಹೊಂದಿದೆ. ಈ ಹಿಂದೆ ಸೂಪರ್ ಸಿನಿಮಾಗೂ ಅವರು ಚಿಹ್ನೆಯನ್ನೇ ಬಳಸಿದ್ದರು. ಅಲ್ಲದೆ, ಈ ನಾಮವನ್ನು ಬೇರೆ ಬೇರೆ ಅರ್ಥದಲ್ಲೂ ನಾವು ಓದಿಕೊಳ್ಳಬಹುದು. I ಎಂದರೆ ನಾನು ಮತ್ತು U ಎಂದರೆ ನೀನು ಎಂಬರ್ಥವೂ ಸಿಗಲಿದೆ. ಇದನ್ನ ‘ಉಪ್ಪಿ 3’ ಅಂತಲೂ ಅರ್ಥೈಸಿಕೊಳ್ಳಬಹುದು. ಆದರೆ ಶೀರ್ಷಿಕೆಯ ಒಳ ಅರ್ಥವನ್ನು ಸ್ವತಃ ಉಪೇಂದ್ರ ಅವರೇ ಬಾಯಿಬಿಡಬೇಕು. ಪ್ಯಾನ್ ಇಂಡಿಯಾ ಸಿನಿಮಾ ಸದ್ಯ ಈ ಟೈಟಲ್ ಫಸ್ಟ್‌ ಲುಕ್ ಪೋಸ್ಟರ್‌ನಲ್ಲಿರುವ ಮಾಹಿತಿ ಪ್ರಕಾರ, ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ವಿಶೇಷವೆಂದರೆ, ಈ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಉಪೇಂದ್ರ ಅವರ ಫ್ಯಾಮಿಲಿಯೇ ನಿರ್ವಹಿಸಲಿದೆ. ಒಟ್ಟಿನಲ್ಲಿ ಉಪೇಂದ್ರ ನಿರ್ದೇಶಿಸಲಿರುವ ಹೊಸ ಚಿತ್ರದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಆದರೆ ಈ ಚಿತ್ರದ ಬಗ್ಗೆ ಉಪೇಂದ್ರ ಇನ್ನೂ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.