ಮಗಳು ಬಂದ ನಂತರದಲ್ಲಿ ನಡೆಯಲಿದೆ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ

ಮಗಳು ವಿದೇಶದಿಂದ ಬಂದ ನಂತರದಲ್ಲಿ ಇಂದು ಸಂಜೆ 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆಯು ನಡೆಯಲಿದೆ. ಈ ವಿಷಯದ ಬಗ್ಗೆ ಸಿ ಎನ್ ಅಶ್ವತ್ಥ ನಾರಾಯಣ್ ಅಧಿಕೃತಪಡಿಸಿದ್ದಾರೆ

ಮಗಳು ಬಂದ ನಂತರದಲ್ಲಿ ನಡೆಯಲಿದೆ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ
Linkup
'ಪವರ್ ಸ್ಟಾರ್' ಅವರ ಅಂತ್ಯಕ್ರಿಯೆ ಇಂದು (ಅ.30) ನಡೆಯಲಿದೆ. ಪುನೀತ್ ರಾಜ್‌ಕುಮಾರ್ ಮಗಳು ವಿದೇಶದಲ್ಲಿ ಇರೋದರಿಂದ ಅಂತ್ಯಕ್ರಿಯೆ ಮಾಡುತ್ತಿರುವುದು ತಡವಾಗುತ್ತಿದೆ. ಇನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಪಾರ್ಥಿವ ಶರೀರ ಇಡಲಾಗಿದ್ದು, ನಿನ್ನೆಯಿಂದಲೇ (ಅ.29) ರಾಜಕಾರಣಿಗಳು, ಸೆಲೆಬ್ರಿಟಿಗಳು, ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ. ಇಂದು ಅಂತ್ಯಕ್ರಿಯೆ ನಡೆಯುವ ವಿಷಯವನ್ನು ಸಚಿವ ಸಿ ಎನ್ ಅಶ್ವತ್ಥ ನಾರಾಯಣ್ ಅಧಿಕೃತಪಡಿಸಿದ್ದಾರೆ. ಮಗಳು ಬಂದ ನಂತರ ಅಂತ್ಯಕ್ರಿಯೆ "ಪುನೀತ್ ಮಗಳು ವಿದೇಶದಿಂದ ಇಲ್ಲಿಗೆ ಬರಬೇಕು, ಅವರಿಗೆ ಕಾಯುತ್ತಿದ್ದೇವೆ. ಮೆರವಣಿಗೆ ನಡೆಯಬೇಕಿದೆ. ಅಪ್ಪು ಮಗಳು ನೇರವಾಗಿ ಕಂಠೀರವಾಗಿ ಸ್ಟುಡಿಯೋಕ್ಕೆ ಬರುವ ವ್ಯವಸ್ಥೆಯೂ ಆಗಿದೆ, ಅಥವಾ ಮೆರವಣಿಗೆ ಮಧ್ಯದಲ್ಲಿಯೇ ಅವರು ಸೇರಿಕೊಳ್ಳಬಹುದು. ಪುನೀತ್ ಮಗಳು ದೆಹಲಿಗೆ ಬಂದ ನಂತರದಲ್ಲಿ ಅಂತ್ಯಕ್ರಿಯೆ ಸಮಯ ನಿಗದಿಯಾಗಲಿದೆ" ಎಂದು ಸಚಿವ ಸಿ ಎನ್ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಅಂತ್ಯಕ್ರಿಯೆ ವ್ಯವಸ್ಥೆ ಆಗಿದೆ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಕ್‌ಲೈನ್ ವೆಂಕಟೇಶ್ ಮಾಧ್ಯಮಗಳಿಗೆ ಹೇಳಿದ್ದಾರೆ. ಪುನೀತ್ ಪುತ್ರಿ ಬರುವವರೆಗೂ ಪೂಜೆಗಳನ್ನು ಮಾಡಲಾಗುತ್ತದೆ. ಪುನೀತ್ ರಾಜ್‌ಕುಮಾರ್‌ಗೆ ಇಬ್ಬರು ಹೆಣ್ಣು ಮಕ್ಕಳು. ಹೀಗಾಗಿ ಅವರ ವಿಧಿ ವಿಧಾನಗಳನ್ನು ಸಹೋದರ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ನೆರವೇರಿಸಲಿದ್ದಾರಂತೆ. ಈಗಾಗಲೇ ಅಂತ್ಯಕ್ರಿಯೆಯ ಎಲ್ಲ ವ್ಯವಸ್ಥೆಯೂ ಆಗಿದೆ. ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟುಡಿಯೋಕ್ಕೆ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುವುದು. ಮೆರವಣಿಗೆ ಮ್ಯಾಪ್ ರೆಡಿ ಸಾರ್ವಜನಿಕ ಮೆರವಣಿಗೆ ಮೂಲಕ ಕಂಠೀರವ ಕ್ರೀಡಾಂಗಣದಿಂದ ಪುನೀತ್ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಕ್ಕೆ ತರಲು ನಿರ್ಧರಿಸಲಾಗಿದೆ. ಪಾರ್ಥಿವ ಶರೀರದ ಮೆರವಣಿಗೆಯು ಹಡ್ಸನ್‌ ವೃತ್ತ, ಮೈಸೂರು ಬ್ಯಾಂಕ್‌ ವೃತ್ತ, ಪ್ಯಾಲೇಸ್‌ ರಸ್ತೆ, ಚಾಲುಕ್ಯ ವೃತ್ತ ಹೈ-ಗ್ರೌಂಡ್ಸ್‌ ವೃತ್ತ, ಸ್ಯಾಂಕಿ ರಸ್ತೆ, ಯಶವಂತಪುರ, ತುಮಕೂರು ರಸ್ತೆ, ಗೊರಗುಂಟೆಪಾಳ್ಯ ಮಾರ್ಗವಾಗಿ ಸಾಗಿ ಅಂತಿಮವಾಗಿ ಕಂಠೀರವ ಸ್ಟುಡಿಯೋವರೆಗೂ ಮೆರವಣಿಗೆ ಸಾಗಲಿದೆ. ಪುನೀತ್ ಪಾರ್ಥಿ ಶರೀರದ ಮೆರವಣಿಗೆ ಮ್ಯಾಪ್ ರೆಡಿಯಾಗಿದೆ. ಅಭಿಮಾನಿಗಳ ಸಾಗರವೇ ಕಂಠೀರವ ಸ್ಟುಡಿಯೋದಲ್ಲಿ ಹರಿದಿರೋದರಿಂದ ಭರ್ಜರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ನೇತೃತ್ವದಲ್ಲಿ 3000 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಭಾಷಾ ನಟರು ಕೂಡ ದರ್ಶನ ಪಡೆದಿದ್ದಾರೆ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು, ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ, ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಪರಭಾಷಾ ನಟರು ಕೂಡ ಪುನೀತ್ ಅವರನ್ನು ನೋಡಲು ಬಂದಿದ್ದಾರೆ. ನಿನ್ನೆ ನಟ ಶರತ್‌ಕುಮಾರ್ ಅವರು ಬಂದಿದ್ದರು. ಇಂದು ನಂದಮೂರಿ ಬಾಲಕೃಷ್ಣ ಅವರು ಪುನೀತ್ ದರ್ಶನ ಪಡೆದಿದ್ದಾರೆ. ಖ್ಯಾತ ಕೊರಿಯೋಗ್ರಾಫರ್, ನಿರ್ದೇಶಕ ಪ್ರಭುದೇವ ಕೂಡ ಪುನೀತ್ ನೋಡಲು ಬಂದಿದ್ದಾರೆ. ಅಪ್ಪು ನೃತ್ಯವನ್ನು ಕೂಡ ಪ್ರಭುದೇವ ಹೊಗಳಿದ್ದರು.