'ಇಂಡಿಯನ್-2' ವಿವಾದ: ಕಮಲ್ ಹಾಸನ್ ವಿರುದ್ಧ ಆರೋಪ ಮಾಡಿದ ನಿರ್ದೇಶಕ ಶಂಕರ್

'ಇಂಡಿಯನ್-2' ಚಿತ್ರ ತಡವಾಗುತ್ತಿರುವುದಕ್ಕೆ ಕಮಲ್ ಹಾಸನ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಕಾರಣ ಎಂದು ನಿರ್ದೇಶಕ ಶಂಕರ್ ಆರೋಪಿಸಿದ್ದಾರೆ.

'ಇಂಡಿಯನ್-2' ವಿವಾದ: ಕಮಲ್ ಹಾಸನ್ ವಿರುದ್ಧ ಆರೋಪ ಮಾಡಿದ ನಿರ್ದೇಶಕ ಶಂಕರ್
Linkup
ಸಕಲಕಲಾವಲ್ಲಭ ಅಭಿನಯಿಸುತ್ತಿರುವ ನಿರ್ದೇಶಿಸುತ್ತಿರುವ ಚಿತ್ರ 'ಇಂಡಿಯನ್-2'. ಈ ಚಿತ್ರ ಅನೌನ್ಸ್ ಆಗಿದ್ದು 2017ರಲ್ಲಿ. ಅನಿವಾರ್ಯ ಕಾರಣಗಳಿಂದ ಚಿತ್ರದ ಚಿತ್ರೀಕರಣ ಶುರುವಾಗಿದ್ದು 2019ರಲ್ಲಿ. ಅದೇ ವರ್ಷ ಮೂರು ಶೆಡ್ಯೂಲ್‌ಗಳಲ್ಲಿ 'ಇಂಡಿಯನ್-2' ಚಿತ್ರದ ಚಿತ್ರೀಕರಣ ನಡೆದಿತ್ತು. ಇಷ್ಟಾದರೂ, 'ಇಂಡಿಯನ್-2' ಚಿತ್ರದ ಚಿತ್ರೀಕರಣ ಇನ್ನೂ ಪೆಂಡಿಂಗ್ ಇದೆ. 'ಇಂಡಿಯನ್-2' ಶೂಟಿಂಗ್ ಇನ್ನೂ ಬಾಕಿ ಇರುವಾಗಲೇ ಬೇರೆ ಬೇರೆ ಪ್ರಾಜೆಕ್ಟ್‌ಗಳ ಬಗ್ಗೆ ನಿರ್ದೇಶಕ ಶಂಕರ್ ಗಮನ ಹರಿಸಿದ್ದಾರೆ. ಹೀಗಾಗಿ, 'ಇಂಡಿಯನ್-2' ನಿರ್ಮಿಸುತ್ತಿರುವ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ. ಕಮಲ್ ಹಾಸನ್ ಅಭಿನಯದ 'ಇಂಡಿಯನ್-2' ಚಿತ್ರ ಕಂಪ್ಲೀಟ್ ಆಗುವವರೆಗೂ ಬೇರೆ ಚಿತ್ರವನ್ನು ನಿರ್ದೇಶನ ಮಾಡದಂತೆ ಶಂಕರ್‌ ಅವರ ಮೇಲೆ ನಿರ್ಬಂಧ ಹೇರಬೇಕು ಎಂದು ಕೋರ್ಟ್‌ಗೆ ಲೈಕಾ ಪ್ರೊಡಕ್ಷನ್ಸ್ ಮನವಿ ಮಾಡಿದೆ. ಹೀಗಿರುವಾಗಲೇ, 'ಇಂಡಿಯನ್-2' ಚಿತ್ರ ತಡವಾಗುತ್ತಿರುವುದಕ್ಕೆ ಕಮಲ್ ಹಾಸನ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಕಾರಣ ಎಂದು ನಿರ್ದೇಶಕ ಶಂಕರ್ ಆರೋಪಿಸಿದ್ದಾರೆ. ಕಮಲ್ ಹಾಸನ್‌ಗೆ ಮೇಕಪ್ ಅಲರ್ಜಿ ಉಂಟಾಗಿತ್ತು. ಇದರಿಂದ ಶೂಟಿಂಗ್ ತಡವಾಯಿತು. ಬಳಿಕ ಅವರೊಂದು ಸರ್ಜರಿಗೂ ಒಳಗಾಗಿದ್ದರು. ನಂತರ ಚಿತ್ರೀಕರಣದ ಸೆಟ್‌ನಲ್ಲಿ ಕ್ರೇನ್ ಅವಘಡ ಸಂಭವಿಸಿತು. ಈ ಮಧ್ಯೆ ಕೋವಿಡ್ ಭೀತಿ ಹಾಗೂ ಲಾಕ್‌ಡೌನ್ ನಿಂದಾಗಿ ಶೂಟಿಂಗ್ ಶೆಡ್ಯೂಲ್‌ಗಳು ಮುಂದೂಲ್ಪಟ್ಟವು ಎಂದು ನಿರ್ದೇಶಕ ಶಂಕರ್ ಹೇಳಿದ್ದಾರೆ. ಇತ್ತೀಚೆಗಷ್ಟೇ ನಿಧನ ಹೊಂದಿದ ನಟ ವಿವೇಕ್ ಕೂಡ 'ಇಂಡಿಯನ್-2' ಚಿತ್ರದಲ್ಲಿ ಅಭಿನಯಿಸಿದ್ದರು. ಅವರ ಭಾಗದ ಚಿತ್ರೀಕರಣವಿನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ, ವಿವೇಕ್ ಪೋಷಿಸುತ್ತಿದ್ದ ಪಾತ್ರದ ಚಿತ್ರೀಕರಣವನ್ನು ಪುನಃ ನಡೆಸಬೇಕಿದೆ. 'ಇಂಡಿಯನ್-2' ಚಿತ್ರ ವಿಳಂಬವಾಗುತ್ತಿರುವುದಕ್ಕೆ ತಾವು ಕಾರಣರಲ್ಲ. ಇದರಿಂದಾದ ನಷ್ಟಕ್ಕೂ ತಾವು ಜವಾಬ್ದಾರರಲ್ಲ ಎಂದು ಅರ್ಜಿಯಲ್ಲಿ ಶಂಕರ್ ತಿಳಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಲಾಗಿದೆ. ಅಂದ್ಹಾಗೆ, ಶಂಕರ್ ನಿರ್ದೇಶನದ 'ಇಂಡಿಯನ್-2' ಚಿತ್ರದಲ್ಲಿ ಕಮಲ್ ಹಾಸನ್, ಕಾಜಲ್ ಅಗರ್‌ವಾಲ್, ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್, ಸಮುದ್ರಖಣಿ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. 200 ಕೋಟಿ ರೂಪಾಯಿ ಬಜೆಟ್‌ನಲ್ಲಿ ಲೈಕಾ ಪ್ರೊಡಕ್ಷನ್ಸ್ ಸಿನಿಮಾ ನಿರ್ಮಿಸುತ್ತಿದೆ.