‘ಸಲಗ’ ಚಿತ್ರ ನನ್ನ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ನೀಡುತ್ತದೆ ಎಂದ ಸಂಜನಾ ಆನಂದ್

ದುನಿಯಾ ವಿಜಯ್‌ ನಿರ್ದೇಶನ ಮಾಡಿ ನಟಿಸಿರುವ ‘ಸಲಗ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್‌, ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ಸಲಗ’ ಚಿತ್ರ ನನ್ನ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ನೀಡುತ್ತದೆ ಎಂದ ಸಂಜನಾ ಆನಂದ್
Linkup
(ಹರೀಶ್‌ ಬಸವರಾಜ್‌) ದುನಿಯಾ ವಿಜಯ್‌ ನಿರ್ದೇಶನ ಮಾಡಿ ನಟಿಸಿರುವ ‘’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಸಂಜನಾ ಆನಂದ್‌, ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ‘ಕರಿಯಪ್ಪನ ಸೊಸೆ’ ಎಂದೇ ಹೆಸರುವಾಸಿಯಾಗಿರುವ ಸಂಜನಾ ಆನಂದ್‌ ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಸಿನಿಮಾದಲ್ಲಿನ ತಮ್ಮ ನೈಜ ಅಭಿನಯದಿಂದ ಎಲ್ಲರ ಮನ ಗೆದ್ದಿದ್ದರು. ಈಗ ಅವರು ‘ಸಲಗ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕೆ ಜನ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂಬ ಕುತೂಹಲದಲ್ಲಿ ಅವರಿದ್ದಾರೆ. ‘ಸಲಗ’ ಸಿನಿಮಾದ ಟ್ರೇಲರ್‌ನಲ್ಲಿ ಸಂಜನಾ ಖಡಕ್‌ ಡೈಲಾಗ್‌ ಹೊಡೆಯುವ ತುಣುಕಿದೆ. ಈ ದೃಶ್ಯ ನೋಡಿದರೆ ಅವರು ಖಡಕ್‌ ಆಗಿ ನಟಿಸಿದ್ದಾರೆ ಎಂಬುದು ತಿಳಿಯುತ್ತದೆ. ಈ ಚಿತ್ರದಲ್ಲಿ ಅವರು ಮಧ್ಯಮವರ್ಗದ ಹುಡುಗಿಯಾಗಿ ನಟಿಸಿದ್ದಾರಂತೆ. ‘ನಾನು ಕೆಮಿಸ್ಟ್ರಿ ಆಫ್‌ ಕರಿಯಪ್ಪ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೆ. ಆದರೆ ‘ಸಲಗ’ ಸಿನಿಮಾದ ಬಿಡುಗಡೆಯ ಈ ಹೊತ್ತಿನಲ್ಲಿ ಇದು ಸಹ ನನ್ನ ಮೊದಲನೇ ಸಿನಿಮಾವೇನೊ ಎನಿಸುತ್ತಿದೆ. ನನ್ನ ಚಿತ್ರಬದುಕಿನ ಬಹುದೊಡ್ಡ ರಿಲೀಸ್‌ ಇದು. ಮಾಸ್‌ ಪ್ರೇಕ್ಷಕರ ಎದುರು ನಾನು ಬರುತ್ತಿದ್ದೇನೆ. ಅಭಿಮಾನಿಗಳು ಮತ್ತು ಚಿತ್ರತಂಡಕ್ಕೆ ಎಷ್ಟು ಟೆನ್ಷನ್‌ ಇದೆಯೋ ಅದಕ್ಕಿಂತ ಡಬಲ್‌ ಟೆನ್ಷನ್‌ ನನಗಿದೆ. ಅವರಂತೆ ನಾನು ಸಹ ಗುರುವಾರ ರಿಲೀಸ್‌ ದಿನವೇ ಸಿನಿಮಾ ನೋಡುವುದು. ನನ್ನ ಪಾತ್ರ ತೆರೆಮೇಲೆ ಹೇಗೆ ಬಂದಿದೆ ಎಂಬುದನ್ನು ನೋಡಲು ನಾನು ಗುರುವಾರಕ್ಕಾಗಿ ಕಾಯುತ್ತಿದ್ದೇನೆ’ ಎನ್ನುತ್ತಾರೆ ಸಂಜನಾ. ‘ಈ ಸಿನಿಮಾದಲ್ಲಿ ನನ್ನದು ಅತ್ತ ತೀರಾ ಶ್ರೀಮಂತಳೂ ಅಲ್ಲದ, ಇತ್ತ ಕಡು ಬಡವಳೂ ಅಲ್ಲದ ಪಾತ್ರ. ಸಿಕ್ಕಾಪಟ್ಟೆ ಬೋಲ್ಡ್‌ ಆಗಿ ಮಾಡನಾಡುತ್ತಾ ಇರುತ್ತೇನೆ. ಆಡುಭಾಷೆಯಲ್ಲಿಎಲ್ಲರಿಗೂ ಬಯ್ಯುತ್ತಿರುತ್ತೇನೆ. ನನ್ನ ಪಾತ್ರದ ಮೂಲಕವೇ ಸಿನಿಮಾದ ಕಥೆ ತೆರೆದುಕೊಳ್ಳುತ್ತದೆ. ತೆರೆ ಮೇಲೆ ಕಡಿಮೆ ಸಮಯ ಇರುತ್ತೇನೆ. ಆದರೆ ಇದ್ದಷ್ಟು ಹೊತ್ತು ಉತ್ತಮವಾಗಿ ನಟಿಸಿದ್ದೇನೆ’ ಎಂದರು. ‘ದುನಿಯಾ ವಿಜಯ್‌ ಅವರು ನನ್ನನ್ನು ಸೇರಿದಂತೆ ಎಲ್ಲರ ಬಳಿ ಬಹಳ ಶ್ರಮವಹಿಸಿ ಕೆಲಸ ತೆಗೆಸಿದ್ದಾರೆ. ನಾನು ಏನಾದರೂ ಸಿನಿಮಾದಲ್ಲಿ ಚೆನ್ನಾಗಿ ನಟಿಸಿದ್ದೇನೆ ಎಂದರೆ ಅದಕ್ಕೆ ಕಾರಣ ಅವರ ಸ್ಫೂರ್ತಿದಾಯಕ ಮಾತುಗಳು. ಚಿತ್ರಮಂದಿರದಿಂದ ಹೊರಬಂದ ಮೇಲೆ ಜನರಿಗೆ ನನ್ನ ಪಾತ್ರ ನೆನಪಿನಲ್ಲಿ ಉಳಿಯುತ್ತದೆ’ ಎಂದು ಹೇಳಿದರು. ‘ಸಲಗ’ ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ನೀಡುತ್ತದೆ ಅಂದುಕೊಂಡಿದ್ದೇನೆ. ನನಗೆ ಮಾತ್ರವಲ್ಲ, ಆ ಸಿನಿಮಾದಲ್ಲಿ ನಟಿಸಿರುವ ಕೆಂಡ, ಶ್ರೀಧರ ಎಲ್ಲರಿಗೂ ಇದೊಂದು ಮೇಜರ್‌ ಟರ್ನಿಂಗ್‌ ಪಾಯಿಂಟ್‌. ನನಗೆ ಇಂತಹ ಒಳ್ಳೆ ಪಾತ್ರ ನೀಡಿದ ದುನಿಯಾ ವಿಜಯ್‌ ಅವರಿಗೆ ಧನ್ಯವಾದಗಳು ಎಂದಿದ್ದಾರೆ ನಟಿ . ತೆಲುಗಿಗೆ ಸಂಜನಾ ಈ ನಡುವ ಸಂಜನಾ ಆನಂದ್‌ ತೆಲುಗು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ‘ತೆಲುಗಿನಲ್ಲಿ ಸದ್ಯ ಹೆಸರು ಮಾಡುತ್ತಿರುವ ಕಿರಣ್‌ ಎಂಬವರ ಸಿನಿಮಾವಿದು. ಇತ್ತೀಚೆಗೆ ಮುಹೂರ್ತ ಆಯಿತು. ಅದೊಂದು ಪ್ರೇಮಕಥೆ. ನನ್ನ ‘ಹನಿಮೂನ್‌’ ಎಂಬ ವೆಬ್‌ ಸಿರೀಸ್‌ ತೆಲುಗಿನಲ್ಲಿ ಬಿಡುಗಡೆಯಾದ ದಿನದಿಂದಲೂ ತೆಲುಗು ಚಿತ್ರರಂಗದಿಂದ ಆಫರ್‌ ಬರುತ್ತಿತ್ತು. ಉತ್ತಮ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೆ. ಅದು ಈ ಸಿನಿಮಾದ ಮೂಲಕ ಈಡೇರುತ್ತಿದೆ. ಕಿರಣ್‌ ‘ಎಸ್‌ ಆರ್‌ ಕಲ್ಯಾಣಮಂಟಪಂ’ ಸಿನಿಮಾದ ನಾಯಕ ನಟ’ ಎಂದು ಮಾಹಿತಿ ನೀಡಿದರು ಸಂಜನಾ.