ಕ್ಲಾಸ್‌ನ ಬಾಗಿಲಲ್ಲಿ ನಿಂತು ಅಳುತ್ತಿದ್ದ ಮುದ್ದು ತಂಗಿಗೆ ಧೈರ್ಯ ತುಂಬುವ ಪುಟ್ಟ ಅಣ್ಣ: ಹೃದಯಂಗಮ ದೃಶ್ಯವಿದು

ಕ್ಲಾಸ್‌ನ ಬಾಗಿಲಲ್ಲಿ ನಿಂತು ಅಳುತ್ತಿದ್ದ ಮುದ್ದು ತಂಗಿಗೆ ಧೈರ್ಯ ತುಂಬುವ ಪುಟ್ಟ ಅಣ್ಣ: ಹೃದಯಂಗಮ ದೃಶ್ಯವಿದು
Linkup

ಸಹಜವಾಗಿಯೇ ಈ ವಿಡಿಯೋ ಎಲ್ಲರ ಹೃದಯ ಗೆದ್ದಿದೆ. ಎಲ್ಲರೂ ಈ ಸೊಬಗಿನ ದೃಶ್ಯಕ್ಕೆ ಮನಸೋತಿದ್ದಾರೆ. ಈ ಪುಟ್ಟ ಮಕ್ಕಳ ನಿರ್ಮಲ ಹೃದಯ, ಪ್ರೀತಿ ಖುಷಿಯಿಂದ ಕಣ್ಣರಲಿಸಿ ನೋಡುವಂತೆ ಮಾಡಿದೆ. ಹೀಗಾಗಿ, ಈ ವಿಡಿಯೋ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹರಿದಾಡುತ್ತಿದೆ. 

ಇದು. ಮತ್ತೆ ನೋಡಬೇಕೆನಿಸುವ ನೋಟವಿದು. ಹೃದಯ ತುಂಬುವ ಮಕ್ಕಳ ನಿರ್ಮಲ ಮನಸ್ಸಿನ ಪ್ರೀತಿ ಇದು. 

ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ತಟ್ಟನೆ ನಮ್ಮ ಹೃದಯಕ್ಕೆ ಆನಂದ ನೀಡುತ್ತವೆ. ಕೆಲವೊಂದು ದೃಶ್ಯಗಳು ಬಹುಹೊತ್ತಿನ ತನಕ ನಮ್ಮನ್ನು ಕಾಡುತ್ತವೆ. ಜತೆಗೆ ಮನಸ್ಸಿಗೂ ಆನಂದ ಮೂಡಿಸುತ್ತವೆ. ಇಂತಹ ಉಲ್ಲಾಸದಾಯಕ ದೃಶ್ಯಗಳನ್ನು ನೋಡುವಾಗ ನಮ್ಮ ಹುಮ್ಮಸ್ಸು ಕೂಡಾ ಇಮ್ಮಡಿಯಾಗುತ್ತದೆ. ನೋವೆಲ್ಲಾ ಒಂದು ಕ್ಷಣ ಮರೆತು ಹೋಗುತ್ತದೆ. ಕೆಲವೊಮ್ಮೆ ಈ ರೀತಿಯ ದೃಶ್ಯಗಳನ್ನು ನಮ್ಮನ್ನು ಭಾವುಕರನ್ನಾಗಿಸುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಇಂತಹ ಒಂದಲ್ಲ ಒಂದು ದೃಶ್ಯಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ, ಇಂತಹದ್ದೇ ಇನ್ನೊಂದು ಅದ್ಭುತ ದೃಶ್ಯ ನೆಟ್ಟಿಗರ ಹೃದಯದಲ್ಲಿ ಆನಂದದ ಹೊನಲು ಹರಿಸಿದೆ. 

ಇದು ಮುದ್ದು ತಂಗಿಗೆ ಪುಟ್ಟ ಅಣ್ಣ ಧೈರ್ಯ ತುಂಬುವ ಅದ್ಭುತ ದೃಶ್ಯ. ಈ ದೃಶ್ಯವನ್ನು ನೋಡುವಾಗ ಬಹುತೇಕರು ಆನಂದಬಾಷ್ಪ ಸುರಿಸಿ ಖುಷಿಪಟ್ಟಿದ್ದಾರೆ. 

@buitengebieden ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು. ಪುಟಾಣಿ ಅಣ್ಣ ತನ್ನ ಪುಟ್ಟ ತಂಗಿಯನ್ನು ತರಗತಿಗೆ ಹೋಗಲು ಸಮಾಧಾನ ಮಾಡುವ ಹೃದಯಸ್ಪರ್ಶಿ ದೃಶ್ಯ ಈ ಕ್ಲಿಪ್‌ನಲ್ಲಿದೆ. ತರಗತಿ ಬಾಗಿಲಿನಲ್ಲಿ ನಿಂತಿರುವ ಪುಟ್ಟ ತಂಗಿಯನ್ನು ಅಣ್ಣ ಆಲಿಂಗಿಸಿಕೊಂಡು ಸಮಾಧಾನ ಹೇಳುವ ದೃಶ್ಯದ ಮೂಲಕ 28 ಸೆಕೆಂಡಿನ ಈ ವಿಡಿಯೋ ಕ್ಲಿಪ್ ಶುರುವಾಗುತ್ತದೆ. ಕ್ಲಾಸ್ ಒಳಗಿರುವ ಶಿಕ್ಷಕಿ ಕೂಡಾ ಬಾಲಕಿಯ ತಲೆ ಸವರಿ ಸಮಾಧಾನ ಹೇಳುವುದನ್ನೂ ಇಲ್ಲಿ ನೋಡಬಹುದಾಗಿದೆ. ಆದರೆ, ಪುಟ್ಟ ತಂಗಿಗೆ ಅಣ್ಣನನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಹೀಗಾಗಿ, ಮತ್ತೆ ಆಲಿಂಗಿಸಿಕೊಳ್ಳುತ್ತಾಳೆ. ಅಣ್ಣನೂ ಮುದ್ದು ತಂಗಿಯನ್ನು ಅಷ್ಟೇ ಪ್ರೀತಿಯಿಂದ ಸಮಾಧಾನ ಮಾಡುತ್ತಾನೆ. ಈ ದೃಶ್ಯವೇ ಹೃದಯಸ್ಪರ್ಶಿಯಾಗಿದೆ. ಪದಗಳಿಗೆ ನಿಲುಕದ ಅದ್ಭುತ ಬಂಧ ಇದಾಗಿದೆ. 

ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಹೃದಯ ಗೆದ್ದಿದೆ. ಎಲ್ಲರೂ ಈ ಸೊಬಗಿನ ದೃಶ್ಯಕ್ಕೆ ಮನಸೋತಿದ್ದಾರೆ. ಅಣ್ಣ ತಂಗಿಯ ಈ ಬಾಂಧವ್ಯ ಎಲ್ಲರ ಹೃದಯಕ್ಕೂ ಆನಂದ ನೀಡಿದೆ. ಹಲವರನ್ನು ಭಾವುಕರನ್ನಾಗಿಸಿದೆ.