ದಲಿತರನ್ನು ಅವಹೇಳನ ಮಾಡಿ ಬಂಧನಕ್ಕೊಳಗಾಗಿದ್ದ ನಟಿ ಮೀರಾ ಮಿಥುನ್‌ಗೆ ಮತ್ತೊಂದು ಆಘಾತ!

ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಟಿ ಮೀರಾ ಮಿಥುನ್, ಈಗ ಪೊಲೀಸರ ವಶದಲ್ಲಿದ್ದಾರೆ. ಹಲವು ಪ್ರಕರಣಗಳಡಿ ಅವರ ಮೇಲೆ ಕೇಸ್ ದಾಖಲಾಗಿದೆ. ಇದೀಗ ಅವರಿಗೆ ಮತ್ತೊಂದು ಆಘಾತ ಕೂಡ ಎದುರಾಗಿದೆ!

ದಲಿತರನ್ನು ಅವಹೇಳನ ಮಾಡಿ ಬಂಧನಕ್ಕೊಳಗಾಗಿದ್ದ ನಟಿ ಮೀರಾ ಮಿಥುನ್‌ಗೆ ಮತ್ತೊಂದು ಆಘಾತ!
Linkup
ಕೆಲ ದಿನಗಳ ಹಿಂದಷ್ಟೇ ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ನಟಿ 'ತಮಿಳು ಚಿತ್ರರಂಗದಲ್ಲಿರುವ ಪರಿಶಿಷ್ಟ ಜಾತಿಯ ಜನರನ್ನು ಹೊರಗೆ ಹಾಕಬೇಕು' ಎಂದು ವಿಡಿಯೋದಲ್ಲಿ ಮೀರಾ ಹೇಳಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು ಮತ್ತು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಆ ವಿಡಿಯೋ ಸಂಬಂಧ ಆಗಸ್ಟ್ 14ರಂದು ಕ್ರೈಂ ಬ್ರಾಂಚ್ ಪೊಲೀಸರು ಮೀರಾ ಮಿಥುನ್‌ರನ್ನು ಕೇರಳದಲ್ಲಿ ಬಂಧಿಸಿದ್ದರು. ಸದ್ಯ ಪೊಲೀಸರ ವಶದಲ್ಲಿರುವ ಈ ನಟಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ಯೂಟ್ಯೂಬ್‌ನಿಂದ ಮೀರಾ ಬ್ಯಾನ್‌! ಸದಾ ಒಂದಿಲ್ಲೊಂದು ವಿವಾದಿಂದ ಗುರುತಿಸಿಕೊಂಡಿರುವ ಮೀರಾಗೆ ತಮ್ಮ ಆಲೋಚನೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಒಂದು ಯೂಟ್ಯೂಬ್‌ ಚಾನೆಲ್ ಅನ್ನು ಹೊಂದಿದ್ದರು. ತಾವು ಮಾಡುವ ವಿಡಿಯೋಗಳನ್ನು, ಆ ಚಾನೆಲ್ ಮೂಲಕವೇ ರಿಲೀಸ್ ಮಾಡುತ್ತಿದ್ದರು. ಇದೀಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಮೀರಾ ಮಿಥುನ್ ಅವರ ಯೂಟ್ಯೂಬ್‌ ಚಾನೆಲ್ ಅನ್ನು ಯೂಟ್ಯೂಬ್‌ ನಿಷ್ಕ್ರಿಯಗೊಳಿಸಿದೆ. ಅವರು ಇನ್ನುಮುಂದೆ ಯೂಟ್ಯೂಬ್‌ನಲ್ಲಿ ಯಾವುದೇ ಚಾನೆಲ್ ತೆರೆಯಲು ಸಾಧ್ಯವಿಲ್ಲ ಎನ್ನಲಾಗಿದೆ! ಮೀರಾ ನೀಡಿದ ಕಾಂಟ್ರವರ್ಸಿ ಹೇಳಿಕೆ ಏನು? 'ಪರಿಶಿಷ್ಟ ಜಾತಿ ಜನರು ಅನೈತಿಕ ಚಟುವಟಿಕೆ ಮತ್ತು ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿರುವುದರಿಂದ ಸಮಸ್ಯೆ ಎದುರಿಸುತ್ತಾರೆ. ಚಿತ್ರರಂಗದಲ್ಲಿ ಈಗ ಆಗುತ್ತಿರುವ ಕೆಡುಕುಗಳಿಗೆ ಪರಿಶಿಷ್ಟ ಜಾತಿಯ ನಿರ್ದೇಶಕರೇ ಕಾರಣ! ಅಂಥವರನ್ನೆಲ್ಲ ಸಿನಿಮಾರಂಗದಿಂದ ತೊಲಗಿಸಲು ಇದು ಸರಿಯಾದ ಸಮಯ ಅಂತ ನನಗೆ ಅನ್ನಿಸುತ್ತದೆ' ಎಂದು ಮೀರಾ ಹೇಳಿದ್ದರು. ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಅವರ ಮೇಲೆ ದೂರು ದಾಖಲಾಗಿತ್ತು. ಐಪಿಸಿ ಸೆಕ್ಷನ್ 153, 153A(1)(a), 505(1)(b), 505 (2) ಅಡಿಯಲ್ಲಿ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕ್ರೈಂ ಬ್ರಾಂಚ್ ಪೊಲೀಸರು ಮೀರಾ ಮಿಥುನ್‌ರನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಹೈ ಡ್ರಾಮಾ ಮಾಡಿದ್ದ ನಟಿ! ಪ್ರಕರಣ ಸಂಬಂಧ ಪೊಲೀಸರು ತನ್ನನ್ನು ಬಂಧಿಸಲಿದ್ದಾರೆ ಎಂಬುದನ್ನು ಅರಿತ ಮೀರಾ, ಹೈಡ್ರಾಮಾವನ್ನೇ ಮಾಡಿದ್ದರು. 'ಚೆನ್ನೈ ಪೊಲೀಸರು ದೌರ್ಜನ್ಯ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡುತ್ತಿದ್ದಾರೆ. ಅವರು ನನ್ನ ಮೇಲೆ ಹಲ್ಲೆ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿ ಮೀರಾ ಮಿಥುನ್ ವಿಡಿಯೋ ಮಾಡಿದ್ದರು!