ಆರಿದ ‘ದೊಡ್ಮನೆ ದೀಪ’: ಅಪ್ಪು ನಿಧನಕ್ಕೆ ಕಣ್ಣೀರಿಟ್ಟ ಜನಪ್ರಿಯ ತಾರೆಯರು

ತೀವ್ರ ಹೃದಯಾಘಾತದಿಂದಾಗಿ ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದರು. ಅಪ್ಪು ನಿಧನದಿಂದ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಪುನೀತ್ ರಾಜ್‌ಕುಮಾರ್ ನಿಧನಕ್ಕೆ ತಾರೆಯರು ಕಂಬನಿ ಮಿಡಿದಿದ್ದಾರೆ.

ಆರಿದ ‘ದೊಡ್ಮನೆ ದೀಪ’: ಅಪ್ಪು ನಿಧನಕ್ಕೆ ಕಣ್ಣೀರಿಟ್ಟ ಜನಪ್ರಿಯ ತಾರೆಯರು
Linkup
ಪವರ್ ಸ್ಟಾರ್ ನಿಧನ ಹೊಂದಿದ್ದಾರೆ. ತೀವ್ರ ಹೃದಯಾಘಾತದಿಂದಾಗಿ ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಕೊನೆಯುಸಿರೆಳೆದರು. ಅಪ್ಪು ನಿಧನದಿಂದ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಪುನೀತ್ ರಾಜ್‌ಕುಮಾರ್ ನಿಧನಕ್ಕೆ ತಾರೆಯರು ಕಂಬನಿ ಮಿಡಿದಿದ್ದಾರೆ. ಅಮಿತಾಬ್ ಬಚ್ಚನ್ ‘’ಪಶ್ಚಾತ್ತಾಪ ಮತ್ತು ಪ್ರಾರ್ಥನೆಯ ದಿನ. ಕುಟುಂಬಕ್ಕೆ ಹತ್ತಿರವಾದವರು ಹೊಂದಿದ್ದಾರೆ. ಕತ್ತಲೆ ಆವರಿಸಿದೆ’’ ಅಲ್ಲು ಅರ್ಜುನ್ ‘’ನಿಜಕ್ಕೂ ಆಘಾತ ಉಂಟಾಗಿದೆ. ನಮ್ಮಿಬ್ಬರ ಮಧ್ಯೆ ಪರಸ್ಪರ ಪ್ರೀತಿ, ಗೌರವ ಇತ್ತು. ಪವನ್ ಕಲ್ಯಾಣ್ ‘’ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನವಾರ್ತೆಯಿಂದ ನಿಜಕ್ಕೂ ಆಘಾತ ಉಂಟಾಗಿದೆ. ಬಾಲನಟನಾಗಿ ‘ಬೆಟ್ಟದ ಹೂ’ ಚಿತ್ರದಲ್ಲಿ ಅವರು ಮಾಡಿದ ಪಾತ್ರ ನನ್ನ ಮೇಲ ಪ್ರಭಾವ ಬೀರಿತ್ತು’’ ಜೂನಿಯರ್ ಎನ್‌ಟಿಆರ್ ‘’ನನ್ನ ಹೃದಯಛಿದ್ರಗೊಂಡಿದೆ. ನಿಮ್ಮ ನಿಧನವಾರ್ತೆಯನ್ನ ನಂಬೋದಕ್ಕೆ ಸಾಧ್ಯವಾಗುತ್ತಿಲ್ಲ’’ ಮಹೇಶ್ ಬಾಬು ‘’ಪುನೀತ್ ರಾಜ್‌ಕುಮಾರ್ ಅವರ ನಿಧನವಾರ್ತೆ ಕೇಳಿ ನಿಜಕ್ಕೂ ಆಘಾತ ಉಂಟಾಗಿದೆ. ನಾನು ಭೇಟಿಯಾಗಿರುವವರ ಪೈಕಿ ಅತ್ಯಂತ ಸರಳ ವ್ಯಕ್ತಿ ಪುನೀತ್ ರಾಜ್‌ಕುಮಾರ್’’ ಉಪೇಂದ್ರ ‘’ಕೆಲವು ಸಂಬಂಧ, ನೆನಪುಗಳು, ಅಗಲಿಕೆ, ನೋವು ಬರೆದು ವ್ಯಕ್ತಪಡಿಸಲು ಸಾಧ್ಯವಿಲ್ಲ. ಅಪ್ಪು ನೀವು ನಮ್ಮೆಲ್ಲರ ಮನದಲ್ಲಿ ಎಂದೆಂದೂ ಅಜರಾಮರ’’ ಗಣೇಶ್ ‘’ಬಹಳ ಬೇಗ ಹೋಗಿಬಿಟ್ರಿ. ನಾನಿನ್ನೂ ಶಾಕ್‌ನಲ್ಲೇ ಇದ್ದೀನಿ. ನಂಬೋದಕ್ಕೆ ಸಾಧ್ಯವಾಗುತ್ತಿಲ್ಲ. ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಮಿಸ್ ಯೂ ಅಪ್ಪು ಸರ್’’ ದಿನಕರ್ ತೂಗುದೀಪ ‘’ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್ ಅವರು ನಮ್ಮನ್ನೆಲ್ಲಾ ಅಗಲಿ ಪರಮಾತ್ಮನ ಐಕ್ಯವಾದ ಸುದ್ದಿ ನಂಬಲೂ ಸಹ ಆಗುತ್ತಿಲ್ಲ. ಕುಟುಂಬದವರಿಗೆ ಅಭಿಮಾನಿಗಳಿಗೆ ಹಾಗೂ ಕನ್ನಡಿಗರೆಲ್ಲರಿಗೂ ಈ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ರಾಜಕುಮಾರನ ಕುವರ ಅಜರಾಮರ’’ ಆಶಿಕಾ ರಂಗನಾಥ್ ‘’ದ್ವಿತ್ವ ಚಿತ್ರಕ್ಕೆ ಸಹಿ ಹಾಕಿದಾಗ ಅಪ್ಪು ಸರ್ ಜೊತೆ ತೆರೆ ಹಂಚಿಕೊಳ್ಳುವ ಕನಸು ನನಸಾಯಿತು ಅಂದುಕೊಂಡೆ. ಆದರೆ ಈಗದು ಕನಸಾಗಿಯೇ ಉಳಿದಿದೆ. ಲವ್ ಯೂ ಅಪ್ಪು ಸರ್. ವಿ ವಿಲ್ ಮಿಸ್ ಯೂ’’ ಖುಷ್ಬು ‘’ಜೀವನವೇ ಒಂದು ದೊಡ್ಡ ವೇದಿಕೆ. ನಾವೆಲ್ಲರೂ ಪಾತ್ರಧಾರಿಗಳು. ಜೀವನ ನಡೆಯಲೇಬೇಕು’’ ಸುನೀಲ್ ಶೆಟ್ಟಿ ‘’ಆಘಾತಗೊಂಡಿದ್ದೇನೆ. ನನ್ನ ಸ್ನೇಹಿತ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬುದನ್ನ ನಂಬೋದಕ್ಕೆ ಸಾಧ್ಯವಾಗುತ್ತಿಲ್ಲ. ಅವರಿಗಿನ್ನೂ 46 ವರ್ಷ ವಯಸ್ಸು. ಬಹಳ ಬೇಗ ನಮ್ಮನ್ನೆಲ್ಲ ಅಗಲಿದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ತಡೆದುಕೊಳ್ಳುವ ಶಕ್ತಿ ಸಿಗಲಿ’’ ಪೂಜಾ ಹೆಗ್ಡೆ ‘’ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ. ನನ್ನ ಚೊಚ್ಚಲ ಚಿತ್ರದ ಪ್ರೀ-ರಿಲೀಸ್ ಈವೆಂಟ್‌ಗೆ ಅವರು ಅತಿಥಿಯಾಗಿ ಬಂದಿದ್ದಾಗ ಭೇಟಿ ಮಾಡಿದ್ದೆ. ಅವರು ಅತ್ಯಂತ ಸರಳ ವ್ಯಕ್ತಿ’’