ಸರ್ಕಾರಿ ಆಸ್ಪತ್ರೆಯಲ್ಲಿರುವ ಕೊರೊನಾ ವಾರಿಯರ್ಸ್‌ಗೆ ಊಟದ ವ್ಯವಸ್ಥೆ ಮಾಡಿದ ಶ್ರೀಮುರಳಿ

ಕೊರೊನಾ ಸಮಯದಲ್ಲಿ ಸೆಲೆಬ್ರಿಟಿಗಳು ಸಾರ್ವಜನಿಕರಿಗೆ ವಿವಿಧ ರೀತಿಯಲ್ಲಿ ನೆರವಾಗುತ್ತಿದ್ದಾರೆ. ನಟ ಶ್ರೀಮುರಳಿ ಅವರು ಸಹಾಯಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ವೈದ್ಯಕೀಯ ಸಿಬ್ಬಂದಿಗೆ ಅವರು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿರುವ ಕೊರೊನಾ ವಾರಿಯರ್ಸ್‌ಗೆ ಊಟದ ವ್ಯವಸ್ಥೆ ಮಾಡಿದ ಶ್ರೀಮುರಳಿ
Linkup
ಕೊರೊನಾದ ಎರಡನೇ ಅಲೆಗೆ ಬೆಚ್ಚಿಬಿದ್ದಿರುವ ಕರ್ನಾಟಕದ ಜನತೆಗೆ ಹಲವಾರು ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು ತಮ್ಮ ಕೈಲಾದ ರೀತಿಯಲ್ಲಿಸಹಾಯ ಮಾಡುತ್ತಿದ್ದಾರೆ. ಕೆಲವರು ಕೆಲಸವಿಲ್ಲದೇ ಇರುವ ಕಾರ್ಮಿಕರಿಗೆ ನೆರವಾಗುತ್ತಿದ್ದಾರೆ. ನಟ ಶ್ರೀಮುರಳಿ ಬೆಂಗಳೂರಿನ ಕೆಲ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‌ಗೆ ಆಹಾರ ವಿತರಿಸಿದ್ದಾರೆ. ಬೆಂಗಳೂರಿನ ನೂರಾರು ಆಸ್ಪತ್ರೆಗಳಲ್ಲಿ ಸಾವಿರಾರು , ನರ್ಸ್‌ಗಳು, ಡಿ ಗ್ರೂಪ್‌ ನೌಕರರು ಕೆಲಸ ಮಾಡುತ್ತಿದ್ದಾರೆ. ಒಮ್ಮೆ ಪಿಪಿಇ ಕಿಟ್‌ ಧರಿಸಿದರೆ ಸುಮಾರು ಆರು ಗಂಟೆಗಳ ಕಾಲ ತೆಗೆಯುವ ಹಾಗಿಲ್ಲ. ಜನರ ಪ್ರಾಣ ಉಳಿಸುವಲ್ಲಿ ಅವರ ಕೆಲಸ ಬಹಳ ದೊಡ್ಡದು. ಇಂಥವರು ಹೊಟ್ಟೆ ಹಸಿವಾದರೆ ಬಿಸ್ಕೆಟ್‌ ತಿಂದುಕೊಂಡು ಕಾಲ ತಳ್ಳುತ್ತಿದ್ದಾರೆ ಎಂಬ ಮಾಹಿತಿ ಶ್ರೀಮುರಳಿಯವರಿಗೆ ಸಿಕ್ಕ ಕಾರಣ ಅವರು ಪ್ರತಿದಿನದ ಊಟದ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆ, ರಾಜಾಜಿನಗರದ ಇಎಸ್‌ಐ ಆಸ್ಪತ್ರೆ, ಬೌರಿಂಗ್‌ ಆಸ್ಪತ್ರೆ, ಜಯನಗರದ ಜನರಲ್‌ ಆಸ್ಪತ್ರೆ, ಸಿವಿ ರಾಮನ್‌ ನಗರದ ಜನರಲ್‌ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಮೂಲಕ ಕೊರೊನಾ ಕಾಲದಲ್ಲಿ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಭಾನುವಾರದಿಂದಲೇ ಊಟ ಎಲ್ಲ ಆಸ್ಪತ್ರೆಗಳನ್ನು ತಲುಪಿದೆ. ಆಸ್ಪತ್ರೆಯ ಸಿಬ್ಬಂದಿ ಎಲ್ಲಿಯವರೆಗೆ ಬೇಕು ಎನ್ನುತ್ತಾರೋ ಅಲ್ಲಿಯವರೆಗೂ ಊಟವನ್ನು ನೀಡಲಾಗುವುದು ಎಂಬ ಮಾಹಿತಿಯನ್ನು ಶ್ರೀಮುರಳಿ ಆಪ್ತರು ತಿಳಿಸಿದ್ದಾರೆ. ಇದರ ಜತೆಗೆ ಇತ್ತೀಚೆಗೆ ಅವರು, 18ರಿಂದ 44 ವರ್ಷದವರು ವ್ಯಾಕ್ಸಿನ್‌ ಹಾಕಿಸಿಕೊಳ್ಳುವ ಮೊದಲು ರಕ್ತದಾನ ಮಾಡಿ ಎಂದೂ ಸೋಶಿಯಲ್‌ ಮೀಡಿಯಾದಲ್ಲಿ ಮನವಿ ಮಾಡಿದ್ದರು. 'ವೈದ್ಯರು, ನರ್ಸ್‌ಗಳು, ಆಸ್ಪತ್ರೆ ಸಿಬ್ಬಂದಿಗಳಿಗೆ ಊಟದ ತೊಂದರೆಯಾಗಿದೆ. ಅವರು ಮನೆಗೆ ಹೋಗುವುದು ಕಷ್ಟದ ಕೆಲಸ ಎಂದು ತಿಳಿದು ಪ್ರತಿದಿನ ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಶ್ರೀಮುರಳಿ ಅವರು ಮಾಡಿದ್ದಾರೆ' ಎಂದು ನಟನೆಯ ಮದಗಜ ಚಿತ್ರದ ನಿರ್ದೇಶಕ ಮಹೇಶ್‌ಕುಮಾರ್‌ ತಿಳಿಸಿದ್ದಾರೆ.