MeToo Case: ಶ್ರುತಿ ಹರಿಹರನ್ ಆರೋಪಕ್ಕಿಲ್ಲ ಸಾಕ್ಷಿ, ಅರ್ಜುನ್ ಸರ್ಜಾ ನಿರಾಳ!

‘ವಿಸ್ಮಯ’ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ತೆರೆಹಂಚಿಕೊಂಡಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಆದರೆ, ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವ ಕಾರಣ, ಕಬ್ಬನ್ ಪಾರ್ಕ್ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದಾರೆ.

MeToo Case: ಶ್ರುತಿ ಹರಿಹರನ್ ಆರೋಪಕ್ಕಿಲ್ಲ ಸಾಕ್ಷಿ, ಅರ್ಜುನ್ ಸರ್ಜಾ ನಿರಾಳ!
Linkup
2018 ರಲ್ಲಿ ಮೀಟೂ ಪ್ರಕರಣ (MeToo Campaign) ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದರಲ್ಲೂ ಭಾರತದಲ್ಲಿ ಈ ಮೀಟೂ ಅಭಿಯಾನದ ಅಡಿಯಲ್ಲಿ ಹಲವು ನಟಿಯರು ತಮಗಾದ ಲೈಂಗಿಕ ಕಿರುಕುಳದ ಅನುಭವದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದರು. ಇನ್ನೂ ಕರ್ನಾಟಕದಲ್ಲೂ ಮೀಟೂ ಪ್ರಕರಣ ಸಖತ್ ಸುದ್ದಿಯಾಗಿತ್ತು. ಮೀಟೂ ಅಭಿಯಾನದ ಅಡಿಯಲ್ಲಿ ‘ಆಕ್ಷನ್ ಕಿಂಗ್’ ಆರ್ಜುನ್ ಸರ್ಜಾ ವಿರುದ್ಧ ನಟಿ ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ನಟ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡುತ್ತಿದ್ದಂತೆಯೇ ಪರ-ವಿರೋಧ ಚರ್ಚೆ ಆರಂಭವಾಯಿತು. ಪ್ರಕರಣ ಪೊಲೀಸ್ ಠಾಣೆ ಮತ್ತು ಕೋರ್ಟ್ ಮೆಟ್ಟಿಲೇರಿತ್ತು. ಶ್ರುತಿ ಹರಿಹರನ್ ಮಾಡಿದ್ದ ಆರೋಪಗಳ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ಇದೀಗ ಪೂರ್ಣಗೊಂಡಿದ್ದು, ಬಿ-ರಿಪೋರ್ಟ್‌ಅನ್ನು ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಯಾವುದೇ ಸಾಕ್ಷಿ ಇಲ್ಲ! ‘ವಿಸ್ಮಯ’ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ತೆರೆಹಂಚಿಕೊಂಡಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ಅರ್ಜುನ್ ಸರ್ಜಾ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಆದರೆ, ಅವರ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು ಲಭಿಸಿಲ್ಲ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇರುವ ಕಾರಣ, ಕಬ್ಬನ್ ಪಾರ್ಕ್ ಪೊಲೀಸರು ಬಿ-ರಿಪೋರ್ಟ್ ಸಲ್ಲಿಸಿದ್ದಾರೆ. ಅರ್ಜುನ್ ಸರ್ಜಾ ಕ್ಲೀನ್ ಚಿಟ್ ಮೀಟೂ ಕೇಸ್‌ನಲ್ಲಿ ನಟಿ ಶ್ರುತಿ ಹರಿಹರನ್‌ಗೆ ತೀವ್ರ ಹಿನ್ನಡೆಯಾಗಿದೆ. ಕೇಸ್‌ ದಾಖಲಾಗಿ ಮೂರು ವರ್ಷಗಳು ಉರುಳಿದರೂ, ಅರ್ಜುನ್ ಸರ್ಜಾ ವಿರುದ್ಧ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಹೀಗಾಗಿ, ಪೊಲೀಸರು ಬಿ-ರಿಪೋರ್ಟ್ ನೀಡಿ, ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅರ್ಜುನ್ ಸರ್ಜಾ ಮತ್ತು ಕುಟುಂಬ ನಿರಾಳ ಶ್ರುತಿ ಹರಿಹರನ್ ಮಾಡಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂಬುದು ಜಗಜ್ಜಾಹೀರಾಗುತ್ತಿದ್ದಂತೆಯೇ ಅರ್ಜುನ್ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ‘ಜೆಂಟಲ್ ಮ್ಯಾನ್ ಆಲ್ವೇಸ್’ ಎಂದು ನಟಿ ಮೇಘನಾ ರಾಜ್ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಬರೆದುಕೊಂಡಿದ್ದಾರೆ. ‘ಧರ್ಮೋ ರಕ್ಷತಿಃ ರಕ್ಷಿತಃ’ ಎಂದು ಧ್ರುವ ಸರ್ಜಾ ಪೋಸ್ಟ್ ಹಾಕಿದ್ದಾರೆ. ಸಾಲದಕ್ಕೆ, ಸೊಳ್ಳೆಗಳನ್ನು ಬ್ಯಾಟ್‌ನಿಂದ ಹೊಡೆದು ಸಾಯಿಸುವ ವಿಡಿಯೋ ಹಾಕಿ ‘ಸೊಳ್ಳೆ ಕ್ರಿಮಿ ಕೀಟ’ ಅಂತಲೂ ಧ್ರುವ ಸರ್ಜಾ ಬರೆದುಕೊಂಡಿದ್ದಾರೆ. ವಿಫಲವಾಗಿದ್ದ ಅಂಬರೀಶ್ ಸಂಧಾನ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಅವರ ಮೀಟೂ ಪ್ರಕರಣವನ್ನು ಬಗೆಹರಿಸಲು ರೆಬೆಲ್ ಸ್ಟಾರ್ ಅಂಬರೀಶ್ ಮುಂದಾಗಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ನಡುವೆ ಅಂಬರೀಶ್ ನೇತೃತ್ವದಲ್ಲಿ ಸಂಧಾನ ನಡೆದಿತ್ತು. ಆದರೆ, ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ನಡುವೆ ಒಮ್ಮತ ಮೂಡಲಿಲ್ಲ. ಹೀಗಾಗಿ ಅಂಬರೀಶ್ ಸಂಧಾನ ವಿಫಲವಾಗಿತ್ತು.