ಆಸ್ಟ್ರೇಲಿಯನ್ ಓಪನ್: ಚೊಚ್ಚಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಇಟಲಿಯ ಜಾನಿಕ್ ಸಿನ್ನರ್!

ಇಟಲಿಯ ಜಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ 2024ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಜಾನಿಕ್ ರ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಮೆಲ್ಬೋರ್ನ್: ಇಟಲಿಯ ಜಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ 2024ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಜಾನಿಕ್ ರ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಇಂದು ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಿನ್ನರ್ 3-6, 3-6, 6-4, 6-4, 6-3 ರಲ್ಲಿ ಮೂರನೇ ಶ್ರೇಯಾಂಕದ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿದರು. ಈ ಪ್ರಶಸ್ತಿ ಗೆದ್ದ ಮೊದಲ ಇಟಾಲಿಯನ್ ಆಟಗಾರ. ಅಂತಿಮ ಪಂದ್ಯ ಮೂರು ಗಂಟೆ 44 ನಿಮಿಷಗಳ ಕಾಲ ನಡೆಯಿತು. ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದ ಸಿನ್ನರ್ ಅಂತಿಮ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಸಿನ್ನರ್ ಆರಂಭದಲ್ಲಿ ರಷ್ಯಾದ ಆಟಗಾರನ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಆದರೆ ಪಂದ್ಯವು ಮುಂದುವರೆದಂತೆ, ಅವರು ವೇಗವನ್ನು ಪಡೆದರು. ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡ ಸಿನ್ನರ್ ಕೊನೆಯ ಮೂರು ಸೆಟ್‌ಗಳನ್ನು ಗೆದ್ದು ಮೆಡ್ವೆಡೆವ್ ಅವರ ಕನಸಿಗೆ ಕೊಳ್ಳಿಯಿಟ್ಟರು. ಮೆಡ್ವೆಡೆವ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಬಾರಿಗೆ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ. ಅವರು 2021 ಮತ್ತು 2022 ರಲ್ಲಿ ಪ್ರಶಸ್ತಿ ಗೆಲ್ಲುವಿನಿಂದ ದೂರ ಉಳಿದಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾ ಓಪನ್ ನಲ್ಲಿ ಭರ್ಜರಿ ಗೆಲುವು: ಐತಿಹಾಸಿಕ ದಾಖಲೆ ಬರೆದ ಭಾರತದ ರೋಹನ್ ಬೋಪಣ್ಣ ಸಿನ್ನರ್ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದು ಮೊದಲ ಫೈನಲ್‌ ನಲ್ಲೇ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ 2014ರಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಈ ಸಾಧನೆ ಮಾಡಿದ್ದರು. 2014 ರಿಂದ, ರೋಜರ್ ಫೆಡರರ್, ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಮಾತ್ರ ಚಾಂಪಿಯನ್ ಆಗುತ್ತಿದ್ದರು. ಹೆಚ್ಚಿನ ಗ್ರ್ಯಾಂಡ್ ಸ್ಲಾಮ್‌ಗಳು (ಪುರುಷರ ಸಿಂಗಲ್ಸ್) 1. ನೊವಾಕ್ ಜೊಕೊವಿಕ್ (ಸರ್ಬಿಯಾ) – 24 (ಆಸ್ಟ್ರೇಲಿಯನ್-10, ಫ್ರೆಂಚ್-3, ವಿಂಬಲ್ಡನ್-7, ಯುಎಸ್-4) 2. ರಾಫೆಲ್ ನಡಾಲ್ (ಸ್ಪೇನ್) – 22 (ಆಸ್ಟ್ರೇಲಿಯನ್-2, ಫ್ರೆಂಚ್-14, ವಿಂಬಲ್ಡನ್-2, ಯುಎಸ್-4) 3. ರೋಜರ್ ಫೆಡರರ್ (ಸ್ವಿಟ್ಜರ್ಲೆಂಡ್) – 20 (ಆಸ್ಟ್ರೇಲಿಯನ್-6, ಫ್ರೆಂಚ್-1, ವಿಂಬಲ್ಡನ್-8, ಯುಎಸ್-5) 4. ಪೀಟ್ ಸಾಂಪ್ರಾಸ್ (USA)-14 (ಆಸ್ಟ್ರೇಲಿಯನ್-2, ಫ್ರೆಂಚ್-0, ವಿಂಬಲ್ಡನ್-7, ಯುಎಸ್-5) ಹೆಚ್ಚಿನ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳು (ಪುರುಷರ ಸಿಂಗಲ್ಸ್) 36- ನೊವಾಕ್ ಜೊಕೊವಿಕ್ 31- ರೋಜರ್ ಫೆಡರರ್ 30- ರಾಫೆಲ್ ನಡಾಲ್ 19- ಇವಾನ್ ಲೆಂಡ್ಲ್ 18- ಪೀಟ್ ಸಾಂಪ್ರಾಸ್

ಆಸ್ಟ್ರೇಲಿಯನ್ ಓಪನ್: ಚೊಚ್ಚಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಇಟಲಿಯ ಜಾನಿಕ್ ಸಿನ್ನರ್!
Linkup
ಇಟಲಿಯ ಜಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ 2024ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಜಾನಿಕ್ ರ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಮೆಲ್ಬೋರ್ನ್: ಇಟಲಿಯ ಜಾನಿಕ್ ಸಿನ್ನರ್ ಆಸ್ಟ್ರೇಲಿಯನ್ ಓಪನ್ 2024ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಜಾನಿಕ್ ರ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಇಂದು ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸಿನ್ನರ್ 3-6, 3-6, 6-4, 6-4, 6-3 ರಲ್ಲಿ ಮೂರನೇ ಶ್ರೇಯಾಂಕದ ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿದರು. ಈ ಪ್ರಶಸ್ತಿ ಗೆದ್ದ ಮೊದಲ ಇಟಾಲಿಯನ್ ಆಟಗಾರ. ಅಂತಿಮ ಪಂದ್ಯ ಮೂರು ಗಂಟೆ 44 ನಿಮಿಷಗಳ ಕಾಲ ನಡೆಯಿತು. ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ ಪ್ರವೇಶಿಸಿದ್ದ ಸಿನ್ನರ್ ಅಂತಿಮ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಸಿನ್ನರ್ ಆರಂಭದಲ್ಲಿ ರಷ್ಯಾದ ಆಟಗಾರನ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಆದರೆ ಪಂದ್ಯವು ಮುಂದುವರೆದಂತೆ, ಅವರು ವೇಗವನ್ನು ಪಡೆದರು. ಮೊದಲ ಎರಡು ಸೆಟ್‌ಗಳನ್ನು ಕಳೆದುಕೊಂಡ ಸಿನ್ನರ್ ಕೊನೆಯ ಮೂರು ಸೆಟ್‌ಗಳನ್ನು ಗೆದ್ದು ಮೆಡ್ವೆಡೆವ್ ಅವರ ಕನಸಿಗೆ ಕೊಳ್ಳಿಯಿಟ್ಟರು. ಮೆಡ್ವೆಡೆವ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೂರನೇ ಬಾರಿಗೆ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ. ಅವರು 2021 ಮತ್ತು 2022 ರಲ್ಲಿ ಪ್ರಶಸ್ತಿ ಗೆಲ್ಲುವಿನಿಂದ ದೂರ ಉಳಿದಿದ್ದರು. ಇದನ್ನೂ ಓದಿ: ಆಸ್ಟ್ರೇಲಿಯಾ ಓಪನ್ ನಲ್ಲಿ ಭರ್ಜರಿ ಗೆಲುವು: ಐತಿಹಾಸಿಕ ದಾಖಲೆ ಬರೆದ ಭಾರತದ ರೋಹನ್ ಬೋಪಣ್ಣ ಸಿನ್ನರ್ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದು ಮೊದಲ ಫೈನಲ್‌ ನಲ್ಲೇ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ 2014ರಲ್ಲಿ ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಈ ಸಾಧನೆ ಮಾಡಿದ್ದರು. 2014 ರಿಂದ, ರೋಜರ್ ಫೆಡರರ್, ನೊವಾಕ್ ಜೊಕೊವಿಕ್ ಮತ್ತು ರಾಫೆಲ್ ನಡಾಲ್ ಮಾತ್ರ ಚಾಂಪಿಯನ್ ಆಗುತ್ತಿದ್ದರು. ಹೆಚ್ಚಿನ ಗ್ರ್ಯಾಂಡ್ ಸ್ಲಾಮ್‌ಗಳು (ಪುರುಷರ ಸಿಂಗಲ್ಸ್) 1. ನೊವಾಕ್ ಜೊಕೊವಿಕ್ (ಸರ್ಬಿಯಾ) – 24 (ಆಸ್ಟ್ರೇಲಿಯನ್-10, ಫ್ರೆಂಚ್-3, ವಿಂಬಲ್ಡನ್-7, ಯುಎಸ್-4) 2. ರಾಫೆಲ್ ನಡಾಲ್ (ಸ್ಪೇನ್) – 22 (ಆಸ್ಟ್ರೇಲಿಯನ್-2, ಫ್ರೆಂಚ್-14, ವಿಂಬಲ್ಡನ್-2, ಯುಎಸ್-4) 3. ರೋಜರ್ ಫೆಡರರ್ (ಸ್ವಿಟ್ಜರ್ಲೆಂಡ್) – 20 (ಆಸ್ಟ್ರೇಲಿಯನ್-6, ಫ್ರೆಂಚ್-1, ವಿಂಬಲ್ಡನ್-8, ಯುಎಸ್-5) 4. ಪೀಟ್ ಸಾಂಪ್ರಾಸ್ (USA)-14 (ಆಸ್ಟ್ರೇಲಿಯನ್-2, ಫ್ರೆಂಚ್-0, ವಿಂಬಲ್ಡನ್-7, ಯುಎಸ್-5) ಹೆಚ್ಚಿನ ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳು (ಪುರುಷರ ಸಿಂಗಲ್ಸ್) 36- ನೊವಾಕ್ ಜೊಕೊವಿಕ್ 31- ರೋಜರ್ ಫೆಡರರ್ 30- ರಾಫೆಲ್ ನಡಾಲ್ 19- ಇವಾನ್ ಲೆಂಡ್ಲ್ 18- ಪೀಟ್ ಸಾಂಪ್ರಾಸ್ ಆಸ್ಟ್ರೇಲಿಯನ್ ಓಪನ್: ಚೊಚ್ಚಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಇಟಲಿಯ ಜಾನಿಕ್ ಸಿನ್ನರ್!