'ಅವಳೇ ನನ್ನ ಹೆಂಡ್ತಿ' ಸಿನಿಮಾ ನಿರ್ದೇಶಕ ಎಸ್ ಉಮೇಶ್‌ ಸಹಾಯಕ್ಕೆ ಧಾವಿಸಿದ ಲಹರಿ ವೇಲು

ಬ್ಲಾಕ್ ಬಸ್ಟರ್ ಸಿನಿಮಾ 'ಅವಳೇ ನನ್ನ ಹೆಂಡ್ತಿ' ಸಿನಿಮಾದ ನಿರ್ದೇಶಕ ಎಸ್ ಮಹೇಶ್ ಅವರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ಲಹರಿ ಸಂಸ್ಥೆ ಸಹಾಯ ಮಾಡಿದೆ.

'ಅವಳೇ ನನ್ನ ಹೆಂಡ್ತಿ' ಸಿನಿಮಾ ನಿರ್ದೇಶಕ ಎಸ್ ಉಮೇಶ್‌ ಸಹಾಯಕ್ಕೆ ಧಾವಿಸಿದ ಲಹರಿ ವೇಲು
Linkup
ಅವಳೇ ನನ್ನ ಹೆಂಡತಿ, ತುಂಬಿದ ಮನೆ ಹೀಗೆ ಸಾಕಷ್ಟು ಯಶಸ್ವಿ ಚಿತ್ರಗಳ ನಿರ್ದೇಶಕ ಎಸ್ ಉಮೇಶ್. ಕನ್ನಡ ಚಿತ್ರರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿರುವ ಉಮೇಶ್ ಅವರ ಇಂದಿನ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಈ ವಿಷಯವನ್ನು ಪತ್ರಿಕೆಯೊಂದರ ಮೂಲಕ ತಿಳಿದುಕೊಂಡ ಲಹರಿ ಮ್ಯೂಸಿಕ್ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಅವರು ಉಮೇಶ್ ಅವರಿಗೆ ಒಂದು ಲಕ್ಷ ರೂಪಾಯಿ ನೀಡಲು ತಮ್ಮ ಸಹೋದರ ವೇಲು ಅವರಿಗೆ ತಿಳಿಸಿದಾರಂತೆ. 'ಅವಳೇ ನನ್ನ ಹೆಂಡತಿ' ಚಿತ್ರ ಇನ್ನೂ ಡಬ್ಬಿಂಗ್ ಸಹ ಆಗಿರಲಿಲ್ಲ. ಆಗಲೇ ನಿರ್ಮಾಪಕ ಪ್ರಭಾಕರ್ ಹಾಗೂ ನಿರ್ದೇಶಕ ಎಸ್ ಉಮೇಶ್ ಅವರು ಮನೋಹರ್ ನಾಯ್ಡು ಅವರಿಗೆ ಆ ಚಿತ್ರ ತೋರಿಸಿ, ಕಥೆ ಹೇಳಿದರಂತೆ. ಆ ಚಿತ್ರದ ಕಥೆ ಕೇಳಿದ ಮನೋಹರ್ ನಾಯ್ಡು ಅವರು ಇದೊಂದು ಸೂಪರ್ ಹಿಟ್ ಚಿತ್ರ ಆಗುತ್ತದೆ ಅಂದಿದರಂತೆ. ಆಗಿನಿಂದಲೂ ಎಸ್ ಉಮೇಶ್ ನಮ್ಮ ಲಹರಿ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದಾರೆ. ಅವರ ಕಷ್ಟಕ್ಕೆ ನೆರವಾಗುವುದು ನಮ್ಮ ಕರ್ತವ್ಯ ಎಂದಿದ್ದಾರೆ ಮನೋಹರ್ ನಾಯ್ಡು ಅವರು. ಇತ್ತೀಚೆಗೆ ಸಂಕಷ್ಟದಲ್ಲಿರುವ ಸಂಗೀತಗಾರರ ಸಂಕಷ್ಟಕ್ಕೆ ಮಿಡಿದ ಹತ್ತು ಲಕ್ಷ ರೂಪಾಯಿ ನೀಡಿತ್ತು. ಕನ್ನಡ ಚಿತ್ರರಂಗ ಒಂದು ಅವಿಭಕ್ತ ಕುಟುಂಬವಿದಂತೆ ನಾವೆಲ್ಲ ಒಂದೇ ಮನೆಯ ಸದಸ್ಯರು. ಒಬ್ಬರ ಕಷ್ಟಕ್ಕೆ ಒಬ್ಬರು ಸ್ಪಂದಿಸುವ ಗುಣವಿರಬೇಕು ಎನ್ನುವುದು ಲಹರಿ ವೇಲು ಅವರ ಅಭಿಪ್ರಾಯ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಉಮೇಶ್ ಆರ್ಥಿಕ ಸಹಾಯ ಮಾಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದರು. ಅವರಿಗೆ ನಟ ಸಹಾಯ ಮಾಡಿದ್ದರು. 'ಅವಳೇ ನನ್ನ ಹೆಂಡ್ತಿ' ಸಿನಿಮಾ ಪರಭಾಷೆಗಳಲ್ಲಿಯೂ ರಿಮೇಕ್ ಆಗಿತ್ತು. ಅಂದಹಾಗೆ ಉಮೇಶ್ ಅವರು 48 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ.