ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಚಿತ್ರಣವನ್ನೇ ಬದಲಿಸಿದ್ದೇವೆ; ಉ.ಪ್ರ. ಸಿಎಂ ಆದಿತ್ಯನಾಥ್‌

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಚಿತ್ರಣವನ್ನೇ ಬದಲಿಸಿ, ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ. ಉದ್ಯಮ ಸ್ನೇಹಿ ರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ ರಾಜ್ಯದ ಸ್ಥಾನ ಏರಿಕೆ ಕಂಡಿದೆ ಎಂದು ಸಿಎಂ ಆದಿತ್ಯ ನಾಥ್ ತಿಳಿಸಿದ್ದಾರೆ. ಅಭಿವೃದ್ಧಿ ಕುರಿತು ವಿವರಿಸಿದ ಅವರು, ರಾಜ್ಯದಲ್ಲಿ 1.67 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಸುಮಾರು 4.50 ಲಕ್ಷ ಯುವಕರಿಗೆ ಸರಕಾರಿ ಉದ್ಯೋಗ ನೀಡಲಾಗಿದೆ. ರಾಜ್ಯದ 42 ಲಕ್ಷ ಬಡವರಿಗೆ ಮನೆ ನಿರ್ಮಿಸಿಕೊಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಚಿತ್ರಣವನ್ನೇ ಬದಲಿಸಿದ್ದೇವೆ; ಉ.ಪ್ರ. ಸಿಎಂ ಆದಿತ್ಯನಾಥ್‌
Linkup
ಹೊಸದಿಲ್ಲಿ: ಕೇವಲ ದಂಗೆ, ಬಡಿದಾಟಗಳಿಗೇ ಹೆಸರಾಗಿದ್ದ ಉತ್ತರಪ್ರದೇಶದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಂದೇ ಒಂದು ದರೋಡೆ ಪ್ರಕರಣವೂ ನಡೆಯದಂತೆ ಕಾನೂನು ವ್ಯವಸ್ಥೆ ಕಾಪಾಡಿಕೊಂಡು ಬರುವ ಮೂಲಕ ಭದ್ರತೆ ಮತ್ತು ಸುಸ್ಥಿರ ಆಡಳಿತಕ್ಕೆ ಆದ್ಯತೆ ನೀಡಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ನಾಲ್ಕೂವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್‌ ತಮ್ಮ ಆಡಳಿತದ ರಿಪೋರ್ಟ್‌ ಕಾರ್ಡ್‌ ಅನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ. ಅಪರಾಧಿಗಳು, ಮಾಫಿಯಾ ಜಾಲವನ್ನು ಹತ್ತಿಕ್ಕಲು ಖಡಕ್‌ ಕ್ರಮ ಜರುಗಿಸಿದ್ದೇವೆ. 1800 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಸರಕಾರಿ ಸ್ವತ್ತುಗಳನ್ನು ಅಕ್ರಮ ವಶದಿಂದ ಬಿಡುಗಡೆಗೊಳಿಸಲಾಗಿದೆ. ಇನ್ನು, ಅಪರಾಧಿಗಳು ಅಕ್ರಮವಾಗಿ ವಾಸಿಸುತ್ತಿದ್ದ ಕಟ್ಟಡಗಳನ್ನು ಕೂಡ ಧ್ವಂಸಗೊಳಿಸಲಾಗಿದೆ ಎಂದು ಹೇಳಿದರು. ಇನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ ಚಿತ್ರಣವನ್ನೇ ಬದಲಿಸಿ, ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ. ಉದ್ಯಮ ಸ್ನೇಹಿ ರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ ರಾಜ್ಯದ ಸ್ಥಾನ ಏರಿಕೆ ಕಂಡಿದೆ ಎಂದು ಸಿಎಂ ಆದಿತ್ಯ ನಾಥ್ ತಿಳಿಸಿದ್ದಾರೆ. ಅಭಿವೃದ್ಧಿ ಕುರಿತು ವಿವರಿಸಿದ ಅವರು, ರಾಜ್ಯದಲ್ಲಿ 1.67 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಸುಮಾರು 4.50 ಲಕ್ಷ ಯುವಕರಿಗೆ ಸರಕಾರಿ ಉದ್ಯೋಗ ನೀಡಲಾಗಿದೆ. ರಾಜ್ಯದ 42 ಲಕ್ಷ ಬಡವರಿಗೆ ಮನೆ ನಿರ್ಮಿಸಿಕೊಡಲಾಗಿದೆ ಎಂದು ತಿಳಿಸಿದರು. ಪ್ರತಿಪಕ್ಷಗಳು, ರಿಪೋರ್ಟ್‌ ಕಾರ್ಡ್‌ನಲ್ಲಿ ಹೇಳಿರುವುದೆಲ್ಲವೂ ಸುಳ್ಳು ಎಂದು ಟೀಕಿಸಿವೆ. 2022 ರಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಎರಡನೇ ಬಾರಿಗೆ ಅಧಿಕಾರಿ ಚುಕ್ಕಾಣಿ ಹಿಡಿಯುವ ಸಿದ್ಧತೆಯಲ್ಲಿದೆ. ಉ.ಪ್ರ: ನಿಗೂಢ ವೈರಾಣು ಜ್ವರಕ್ಕೆ ಒಂದೇ ಗ್ರಾಮದ 12 ಮಂದಿ ಬಲಿ ಲಖನೌ: ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ವ್ಯಾಪಿಸಿರುವ ನಿಗೂಢ ಮಾದರಿಯ ವೈರಾಣು ಜ್ವರಕ್ಕೆ ಒಂದೇ ಗ್ರಾಮದ 12 ಮಂದಿ ಬಲಿಯಾಗಿದ್ದಾರೆ. ಮೃತರ ರಕ್ತದ ಮಾದರಿ ಪರೀಕ್ಷೆಯಲ್ಲಿ ಡೆಂಘೀ ಸೋಂಕು ಇಲ್ಲ ಎಂದು ವರದಿಯಾಗಿದೆ. ಹಾಗಿದ್ದೂ ಕೂಡ ವಿಪರೀತ ಜ್ವರದಿಂದ ಬಳಲಿ ಜಿಲ್ಲೆಯ ಕುರ್‌ಸೌಳಿ ಗ್ರಾಮಸ್ಥರು ಹೆಚ್ಚಾಗಿ ಮೃತಪಡುತ್ತಿರುವುದು ಭಾರಿ ಆತಂಕ ಮೂಡಿಸಿದೆ. ಸೋಂಕಿನ ಮೂಲ ಪತ್ತೆಗಾಗಿ ಜಿಲ್ಲಾ ವೈದ್ಯಾಧಿಕಾರಿಗಳು ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ. ಮತ್ತೊಂದೆಡೆ, ಫಿರೋಜಾಬಾದ್‌ನಲ್ಲಿ ಡೆಂಘೀ ಜ್ವರ ಆರ್ಭಟ ಜೋರಾಗಿದ್ದು, ಇದುವರೆಗೂ 62 ಮಂದಿ ಬಲಿಯಾಗಿದ್ದಾರೆ. ಕೇಂದ್ರ ಸರಕಾರದ ಸ್ವಚ್ಛ ಭಾರತ ಮಿಷನ್‌ ನಿರ್ದೇಶಕ ಎಸ್‌.ಬಿ. ಸಿಂಗ್‌ ಅವರು ಫಿರೋಜಾಬಾದ್‌ನಲ್ಲಿ ಠಿಕಾಣಿ ಹೂಡಿ, ಸೋಂಕಿನ ಸ್ಥಿತಿಗತಿಯ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಕಳೆದ ತಿಂಗಳು ವಿಚಿತ್ರ ಜ್ವರದಿಂದಾಗಿ ಕಾನ್ಪುರದ ಆಸ್ಪತ್ರೆಗೆ ಬಹುತೇಕ ಮಕ್ಕಳು ಸೇರಿದಂತೆ ಒಟ್ಟು 250 ಮಂದಿ ದಾಖಲಾಗಿದ್ದರು.