'ಮಿ ಟೂ' ಆರೋಪಿಗೆ ಪಂಜಾಬ್ ಸಿಎಂ ಸ್ಥಾನ: 'ವೆಲ್ ಡನ್ ರಾಹುಲ್' ಎಂದು ಬಿಜೆಪಿ ವ್ಯಂಗ್ಯ

ಮಿ ಟೂ ಆರೋಪ ಎದುರಿಸುತ್ತಿರುವ ಚರಣ್ ಜಿತ್ ಸಿಂಗ್ ಅವರನ್ನು ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವ ಕಾಂಗ್ರೆಸ್ ನಡೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

'ಮಿ ಟೂ' ಆರೋಪಿಗೆ ಪಂಜಾಬ್ ಸಿಎಂ ಸ್ಥಾನ: 'ವೆಲ್ ಡನ್ ರಾಹುಲ್' ಎಂದು ಬಿಜೆಪಿ ವ್ಯಂಗ್ಯ
Linkup
ಚಂಡೀಗಡ: ಮುಖ್ಯಮಂತ್ರಿಯಾಗಿ ಅವರನ್ನು ಆಯ್ಕೆ ಮಾಡಿರುವ ವಿರುದ್ಧ ಬಿಜೆಪಿ ಟೀಕಾಪ್ರಹಾರ ನಡೆಸಿದೆ. 'ಮೀ ಟೂ' ಆರೋಪಿಯನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿರುವುದು ಕಾಂಗ್ರೆಸ್‌ನ ಮಹಿಳಾವಾದವನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದೆ. ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಬಂಧಿಸಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಅಶ್ಲೀಲ ಸಂದೇಶ ರವಾನಿಸಿದ ಆರೋಪ ಚರಣ್‌ಜಿತ್ ಸಿಂಗ್ ಚನ್ನಿ ಅವರ ಮೇಲಿದೆ. 'ಕಾಂಗ್ರೆಸ್‌ನ ಸಿಎಂ ಆಯ್ಕೆಯಾದ ಚರಣ್‌ಜಿತ್ ಚನ್ನಿ ಅವರು 3 ವರ್ಷ ಹಳೆಯದಾದ ಮಿ-ಟೂ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅವರು 2018ರಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಅನುಚಿತ ಸಂದೇಶವನ್ನು ರವಾನಿಸಿದ್ದರು ಎಂಬ ಆರೋಪವಿದೆ. ಅದನ್ನು ಹೇಗೋ ಮುಚ್ಚಿಹಾಕಲಾಗಿತ್ತು. ಆದರೆ ಪಂಜಾಬ್ ಮಹಿಳಾ ಆಯೋಗ ನೋಟಿಸ್ ನೀಡಿದ ಬಳಿಕ ಮತ್ತೆ ಚಾಲ್ತಿಗೆ ಬಂದಿದೆ. ಒಳ್ಳೆಯ ಕೆಲಸ ಮಾಡಿದ್ದೀರಿ ರಾಹುಲ್' ಎಂದು ಬಿಜೆಪಿ ಮುಖಂಡ ಟ್ವೀಟ್ ಮಾಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಬಾಲ್ಯ ವಿವಾಹ ನೋಂದಣಿಗೆ ಮಸೂದೆಯೊಂದನ್ನು ಅಂಗೀಕರಿಸಿತ್ತು. ಹೆಣ್ಣುಮಕ್ಕಳ ಬೆಳೆಯವ ವಯಸ್ಸನ್ನು ಕಿತ್ತುಕೊಳ್ಳುವುದನ್ನು ಕಾನೂನುಬದ್ಧಗೊಳಿಸಿದೆ. ಈಗ ಆರೋಪಿಯನ್ನು ಪಂಜಾಬ್ ಸಿಎಂ ಆಗಿ ಮಾಡಿದೆ. ಮಹಿಳಾ ಸಬಲೀಕರಣದ ಕುರಿತು ರಾಹುಲ್ ಗಾಂಧಿ ಒಪ್ಪಿಗೆಯನ್ನು ಕಾದು ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ. ಪಂಜಾಬ್ ಮಹಿಳಾ ಆಯೋಗವು ಈ ವರ್ಷದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದ ಬಳಿಕ ಈ ಪ್ರಕರಣ ಮತ್ತೆ ಜೀವ ಪಡೆದುಕೊಂಡಿತ್ತು. ಆಗ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದ ಚನ್ನಿ ಅವರು ಕಳುಹಿಸಿದ್ದ 'ಅನುಚಿತ ಸಂದೇಶ'ದ ಕುರಿತು ತನ್ನ ನಿಲುವಿನ ಬಗ್ಗೆ ಒಂದು ವಾರದೊಳಗೆ ವಿವರ ನೀಡದೆ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಪವಾಸ ನಿರಶನ ನಡೆಸುವುದಾಗಿ ಪಂಜಾಬ್ ಮಹಿಳಾ ಆಯೋಗದ ಮುಖ್ಯಸ್ಥೆ ಬೆದರಿಕೆ ಹಾಕಿದ್ದರು. ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮದ ವರದಿ ನೀಡುವಂತೆ ಪಂಜಾಬ್ ಮುಖ್ಯ ಕಾರ್ಯದರ್ಶಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ಪತ್ರ ಬರೆದಿದ್ದರು. 2018ರ ಆರೋಪಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. 'ಸಂತ್ರಸ್ತೆ ಈಗ ಪಂಜಾಬ್‌ನ ಹೊರಗೆ ವರ್ಗಾವಣೆ ಪಡೆದುಕೊಂಡಿದ್ದಾರೆ. ಇತ್ತ ಐಎಎಸ್ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವಂತೆ ನನ್ನನ್ನು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ನಾನು ಪಂಜಾಬ್ ಸರ್ಕಾರಕ್ಕೆ ನೋಟಿಸ್ ನೀಡಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಮಹಿಳೆ ಆಗಿದ್ದಾರೆ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರೂ ಮಹಿಳೆ ಆಗಿದ್ದಾರೆ, ಹೀಗಿರುವಾಗ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ನ್ಯಾಯ ಸಿಗದೆ ಹೋದರೆ ಹೇಗೆ?' ಎಂದು ಮನೀಶಾ ಗುಲಾಟಿ ಹೇಳಿದ್ದರು. ಆ ಮಹಿಳಾ ಅಧಿಕಾರಿಯ ಕ್ಷಮೆ ಕೋರುವಂತೆ ಚನ್ನಿ ಅವರಿಗೆ ಅಮರಿಂದರ್ ಸೂಚನೆ ನೀಡಿದ್ದರು. ಬಳಿಕ ಈ ಪ್ರಕರಣ ಸೌಹಾರ್ದಯುತವಾಗಿ ಅಂತ್ಯಗೊಂಡಿದೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದರು. ಮಹಿಳಾ ಅಧಿಕಾರಿ ಮೊಬೈಲ್ ಫೋನ್‌ಗೆ ಪ್ರಮಾದವಶಾತ್ ಸಂದೇಶ ರವಾನಿಯಾಗಿದೆ ಎಂದು ಚನ್ನಿ ಹೇಳಿದ್ದರು. ಈ ಪ್ರಕರಣ ಬಗೆಹರಿದಿದೆ ಎಂದು ಅವರೂ ಹೇಳಿಕೊಂಡಿದ್ದರು. 'ಮಿ ಟೂ' ಅಲೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ಮಹಿಳಾ ಅಧಿಕಾರಿ ಸಚಿವರಿಂದ ತಮಗಾಗಿದ್ದ ಕಿರಕುಳದ ಪ್ರಸಂಗವನ್ನು ಹೇಳಿಕೊಂಡಿದ್ದರು. ಆದರೆ ಅದರ ಬಗ್ಗೆ ಈವರೆಗೂ ಯಾವುದೇ ದೂರು ಸಲ್ಲಿಸಿಲ್ಲ.