ಶ್ರೀಲಂಕಾ, ಮಾರಿಷಸ್ ನಲ್ಲೂ ಯುಪಿಐ ಪಾವತಿ ಸೇವೆ ಆರಂಭ: 'ವಿಶೇಷ ದಿನ' ಎಂದ ಪ್ರಧಾನಿ ಮೋದಿ

ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ (Unified Payments Interface) ಇಟಲಿ ಬಳಿಕ ಇದೀಗ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲೂ ತನ್ನ ಸೇವೆ ಆರಂಭಿಸಿದೆ. ಕೊಲಂಬೋ: ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ (Unified Payments Interface) ಇಟಲಿ ಬಳಿಕ ಇದೀಗ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲೂ ತನ್ನ ಸೇವೆ ಆರಂಭಿಸಿದೆ. ಹೌದು.. ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ನೆರೆಯ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಇಂದು ಚಾಲನೆ ನೀಡಲಾಗಿದ್ದು, ಯುಪಿಐ ಮಾತ್ರವಲ್ಲದೆ ಭಾರತದ ರುಪೇ ಕಾರ್ಡ್‌ ಅನ್ನು ಕೂಡ ಮಾರಿಷಸ್‌ನಲ್ಲಿ ಬಳಸಬಹುದಾಗಿದೆ. ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗನೌತ್‌ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಜತೆಗೆ ಕಾರ್ಯಕ್ರಮಕ್ಕೆ ವರ್ಚುವಲ್‌ ಮೂಲಕ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ‘ಆಧುನಿಕ ಡಿಜಿಟಲ್ ತಂತ್ರಜ್ಞಾನದೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಜೋಡಿಸಲಾಗಿದೆ’ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಗೂ ಕಾಲಿಟ್ಟ ಭಾರತದ UPI ಪಾವತಿ: ಐಫೆಲ್ ಟವರ್ ನಲ್ಲಿ ಔಪಚಾರಿಕ ಪ್ರಾರಂಭ! ಮೂರು ದೇಶಗಳಿಗೆ ಇಂದು ಪ್ರಮುಖ ದಿನವಾಗಿದ್ದು, ಶ್ರೀಲಂಕಾ ಮತ್ತು ಮಾರಿಷಸ್‌ ಯುಪಿಐ ಬಳಕೆಯಿಂದ ಸಾಕಷ್ಟು ಉಪಯೋಗಗಳನ್ನು ಪಡೆಯಲಿದೆ ಎಂದು ಭಾವಿಸುತ್ತೇನೆ. ಯುಪಿಐ ಭಾರತದೊಂದಿಗೆ ಪಾಲುದಾರರನ್ನು ಒಗ್ಗೂಡಿಸುವ ಹೊಸ ಜವಾಬ್ದಾರಿಯನ್ನು ಕಾರ್ಯಗತಗೊಳಿಸುತ್ತಿದೆ. ಡಿಜಿಟಲ್ ಪಾವತಿಯು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮೊದಲು ಪ್ರತಿಸ್ಪಂದಿಸುವ ರಾಷ್ಟ್ರ ಎಂದರೆ ಭಾರತ. ಅದು ಹೀಗೆಯೇ ಮುಂದುವರಿಯುತ್ತದೆ. ಇದರಿಂದಾಗಿ ಭಾರತೀಯರು ಮಾರಿಷಸ್‌ ಮತ್ತು ಶ್ರೀಲಂಕಾಕ್ಕೆ ಪ್ರಯಾಣಿಸಿದರೆ ಅಥವಾ ಅವೆರಡೂ ದೇಶದವರು ಭಾರತಕ್ಕೆ ಬಂದಾಗ ಹಣ ಪಾವತಿ ಇನ್ನಷ್ಟು ಸುಲಭವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಂತೆಯೇ "ನೆರೆಹೊರೆಯ ಮೊದಲ ನೀತಿ"ಯ ಮೇಲೆ ಭಾರತದ ಗಮನವನ್ನು ಇದು ತೋರಿಸುತ್ತದೆ. ಇದು ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬೆಂಬಲವಾಗಿರಲಿ, ಭಾರತವು ಮೊದಲ ಪ್ರತಿಸ್ಪಂದಕವಾಗಿದೆ ಮತ್ತು ಅದು ಮುಂದುವರಿಯುತ್ತದೆ ಎಂದರು. ಇದನ್ನೂ ಓದಿ: ವಿದೇಶಗಳಲ್ಲಿ ಯುಪಿಐ ವಿಸ್ತರಿಸಲು ಗೂಗಲ್ ಪೇ- ಎನ್ ಪಿ ಸಿಐ ಪಾಲುದಾರಿಕೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ UPI ಮೊಬೈಲ್ ಫೋನ್‌ಗಳ ಮೂಲಕ ಅಂತರ-ಬ್ಯಾಂಕ್ ವಹಿವಾಟುಗಳನ್ನು ಸುಲಭಗೊಳಿಸಲು ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದೆ. RuPay ಭಾರತದಿಂದ ಜಾಗತಿಕ ಕಾರ್ಡ್ ಪಾವತಿ ಜಾಲವಾಗಿದ್ದು, ಅಂಗಡಿಗಳು, ATM ಗಳು ಮತ್ತು ಆನ್‌ಲೈನ್‌ನಲ್ಲಿ ವ್ಯಾಪಕ ಸ್ವೀಕಾರವನ್ನು ಹೊಂದಿದೆ.

ಶ್ರೀಲಂಕಾ, ಮಾರಿಷಸ್ ನಲ್ಲೂ ಯುಪಿಐ ಪಾವತಿ ಸೇವೆ ಆರಂಭ: 'ವಿಶೇಷ ದಿನ' ಎಂದ ಪ್ರಧಾನಿ ಮೋದಿ
Linkup
ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ (Unified Payments Interface) ಇಟಲಿ ಬಳಿಕ ಇದೀಗ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲೂ ತನ್ನ ಸೇವೆ ಆರಂಭಿಸಿದೆ. ಕೊಲಂಬೋ: ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ (Unified Payments Interface) ಇಟಲಿ ಬಳಿಕ ಇದೀಗ ಶ್ರೀಲಂಕಾ ಮತ್ತು ಮಾರಿಷಸ್ ನಲ್ಲೂ ತನ್ನ ಸೇವೆ ಆರಂಭಿಸಿದೆ. ಹೌದು.. ಭಾರತದ ಯುಪಿಐ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆಗೆ ನೆರೆಯ ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಇಂದು ಚಾಲನೆ ನೀಡಲಾಗಿದ್ದು, ಯುಪಿಐ ಮಾತ್ರವಲ್ಲದೆ ಭಾರತದ ರುಪೇ ಕಾರ್ಡ್‌ ಅನ್ನು ಕೂಡ ಮಾರಿಷಸ್‌ನಲ್ಲಿ ಬಳಸಬಹುದಾಗಿದೆ. ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗನೌತ್‌ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಜತೆಗೆ ಕಾರ್ಯಕ್ರಮಕ್ಕೆ ವರ್ಚುವಲ್‌ ಮೂಲಕ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ‘ಆಧುನಿಕ ಡಿಜಿಟಲ್ ತಂತ್ರಜ್ಞಾನದೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಜೋಡಿಸಲಾಗಿದೆ’ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಫ್ರಾನ್ಸ್ ಗೂ ಕಾಲಿಟ್ಟ ಭಾರತದ UPI ಪಾವತಿ: ಐಫೆಲ್ ಟವರ್ ನಲ್ಲಿ ಔಪಚಾರಿಕ ಪ್ರಾರಂಭ! ಮೂರು ದೇಶಗಳಿಗೆ ಇಂದು ಪ್ರಮುಖ ದಿನವಾಗಿದ್ದು, ಶ್ರೀಲಂಕಾ ಮತ್ತು ಮಾರಿಷಸ್‌ ಯುಪಿಐ ಬಳಕೆಯಿಂದ ಸಾಕಷ್ಟು ಉಪಯೋಗಗಳನ್ನು ಪಡೆಯಲಿದೆ ಎಂದು ಭಾವಿಸುತ್ತೇನೆ. ಯುಪಿಐ ಭಾರತದೊಂದಿಗೆ ಪಾಲುದಾರರನ್ನು ಒಗ್ಗೂಡಿಸುವ ಹೊಸ ಜವಾಬ್ದಾರಿಯನ್ನು ಕಾರ್ಯಗತಗೊಳಿಸುತ್ತಿದೆ. ಡಿಜಿಟಲ್ ಪಾವತಿಯು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮೊದಲು ಪ್ರತಿಸ್ಪಂದಿಸುವ ರಾಷ್ಟ್ರ ಎಂದರೆ ಭಾರತ. ಅದು ಹೀಗೆಯೇ ಮುಂದುವರಿಯುತ್ತದೆ. ಇದರಿಂದಾಗಿ ಭಾರತೀಯರು ಮಾರಿಷಸ್‌ ಮತ್ತು ಶ್ರೀಲಂಕಾಕ್ಕೆ ಪ್ರಯಾಣಿಸಿದರೆ ಅಥವಾ ಅವೆರಡೂ ದೇಶದವರು ಭಾರತಕ್ಕೆ ಬಂದಾಗ ಹಣ ಪಾವತಿ ಇನ್ನಷ್ಟು ಸುಲಭವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಂತೆಯೇ "ನೆರೆಹೊರೆಯ ಮೊದಲ ನೀತಿ"ಯ ಮೇಲೆ ಭಾರತದ ಗಮನವನ್ನು ಇದು ತೋರಿಸುತ್ತದೆ. ಇದು ನೈಸರ್ಗಿಕ ವಿಪತ್ತು, ಆರೋಗ್ಯ ಸಂಬಂಧಿತ, ಆರ್ಥಿಕ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬೆಂಬಲವಾಗಿರಲಿ, ಭಾರತವು ಮೊದಲ ಪ್ರತಿಸ್ಪಂದಕವಾಗಿದೆ ಮತ್ತು ಅದು ಮುಂದುವರಿಯುತ್ತದೆ ಎಂದರು. ಇದನ್ನೂ ಓದಿ: ವಿದೇಶಗಳಲ್ಲಿ ಯುಪಿಐ ವಿಸ್ತರಿಸಲು ಗೂಗಲ್ ಪೇ- ಎನ್ ಪಿ ಸಿಐ ಪಾಲುದಾರಿಕೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದ UPI ಮೊಬೈಲ್ ಫೋನ್‌ಗಳ ಮೂಲಕ ಅಂತರ-ಬ್ಯಾಂಕ್ ವಹಿವಾಟುಗಳನ್ನು ಸುಲಭಗೊಳಿಸಲು ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದೆ. RuPay ಭಾರತದಿಂದ ಜಾಗತಿಕ ಕಾರ್ಡ್ ಪಾವತಿ ಜಾಲವಾಗಿದ್ದು, ಅಂಗಡಿಗಳು, ATM ಗಳು ಮತ್ತು ಆನ್‌ಲೈನ್‌ನಲ್ಲಿ ವ್ಯಾಪಕ ಸ್ವೀಕಾರವನ್ನು ಹೊಂದಿದೆ. ಶ್ರೀಲಂಕಾ, ಮಾರಿಷಸ್ ನಲ್ಲೂ ಯುಪಿಐ ಪಾವತಿ ಸೇವೆ ಆರಂಭ: 'ವಿಶೇಷ ದಿನ' ಎಂದ ಪ್ರಧಾನಿ ಮೋದಿ