ವಿವಾಹ ಪ್ರಸ್ತಾವ ಒಪ್ಪದ್ದಕ್ಕೆ ಕೇರಳದ ಮಹಿಳಾ ಉದ್ಯಮಿಯನ್ನು ಗಾಂಜಾ ಕೇಸ್‌ನಲ್ಲಿ ಸಿಲುಕಿಸಿದ ಭೂಪ, ನಡೆದಿದ್ದೇನು?

ಆರು ವರ್ಷಗಳ ಮುನ್ನವೇ ಪತಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದ ಶೋಭಾ ಅವರಿಗೆ ಕಳೆದ ವರ್ಷ ಬ್ರಿಟನ್‌ ಪ್ರಜೆ ಹರೀಶ್‌ ಹರಿದಾಸ್‌ ಅವರಿಂದ ಮದುವೆಗಾಗಿ ಪ್ರಸ್ತಾವನೆ ಬಂದಿತ್ತು. ಲಾರ್ಡ್ಸ್ ಆಸ್ಪತ್ರೆಯ ಸಿಇಒ ಡಾ. ಹರಿದಾಸ್‌ ಅವರ ಪುತ್ರನ ಪ್ರಸ್ತಾವನೆಯನ್ನು ಶೋಭಾ ತಿರಸ್ಕರಿಸಿದ್ದರು. ಇದಕ್ಕೆ ಹಗೆತನ ಬೆಳೆಸಿದ್ದ ಹರಿದಾಸ್‌ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ವಿವಾಹ ಪ್ರಸ್ತಾವ ಒಪ್ಪದ್ದಕ್ಕೆ ಕೇರಳದ ಮಹಿಳಾ ಉದ್ಯಮಿಯನ್ನು ಗಾಂಜಾ ಕೇಸ್‌ನಲ್ಲಿ ಸಿಲುಕಿಸಿದ ಭೂಪ, ನಡೆದಿದ್ದೇನು?
Linkup
ತಿರುವನಂತಪುರಂ: ವರ್ಷದ ಹಿಂದೆ ಪ್ರಸ್ತಾಪನೆಯೊಂದನ್ನು ತಿರಸ್ಕರಿಸಿದ ಪರಿಣಾಮ ಕೇರಳದ ಉದ್ಯಮಿಯೊಬ್ಬರು ಗಾಂಜಾ ಬಳಕೆ ಪ್ರಕರಣದಲ್ಲಿ ಸಿಲುಕಿಕೊಂಡು ಕಿರುಕುಳ ಅನುಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಜನವರಿಯಲ್ಲಿ ಉದ್ಯಮಿ ಶೋಭಾ ವಿಶ್ವನಾಥ್‌ ಅವರ ಬಟ್ಟೆ ಮಾರಾಟ ಅಂಗಡಿಯಲ್ಲಿ ಪೊಲೀಸರು 400 ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದರು. ಕೋವಲಂನಲ್ಲಿ ಹೊಸ ಮಳಿಗೆ ತೆರೆಯುವ ಸಂಭ್ರಮದಲ್ಲಿದ್ದ ಶೋಭಾ ಅವರಿಗೆ ತಮ್ಮ ತಿರುವನಂತಪುರಂನ ಮಳಿಗೆಯಲ್ಲಿ ಮಾದಕವಸ್ತು ಜಪ್ತಿಯಾಗಿರುವ ಸುದ್ದಿ ಭಾರಿ ಆಘಾತ ಉಂಟುಮಾಡಿತ್ತು. ಕೂಡಲೇ ಶೋಭಾ ಅವರ ವಿರುದ್ಧ ಪ್ರಕರಣ ದಾಖಲಾಗಿ, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದರು. ನಾರ್ಕೊಟಿಕ್ಸ್‌ ವಿಭಾಗದವರ ತೀವ್ರ ವಿಚಾರಣೆಯಿಂದಾಗಿ ಶೋಭಾ ಅವರು ಮಾನಸಿಕ ಕಿರುಕುಳಕ್ಕೆ ಕೂಡ ಗುರಿಯಾಗಿದ್ದರು. ಕೊನೆಗೆ ಜಾಮೀನು ಪಡೆದು ಮನೆಗೆ ಬಂದ ಶೋಭಾ ಅವರು ಕೇರಳ ಸಿಎಂ ಮತ್ತು ಡಿಜಿಪಿಗೆ ಪತ್ರ ಬರೆದು, ಪ್ರಕರಣದಲ್ಲಿ ತಮ್ಮನ್ನು ಅನಗತ್ಯವಾಗಿ ಸಿಕ್ಕಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಡಿಎಸ್‌ಪಿ ಅಮ್ಮಿನಿಕುಟ್ಟನ್‌ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಹೊಸ ಆದೇಶ ಹೊರಡಿಸಲಾಗಿತ್ತು. ಬ್ರಿಟನ್‌ ಪ್ರಜೆಯ ದುಷ್ಕೃತ್ಯ! ಆರು ವರ್ಷಗಳ ಮುನ್ನವೇ ಪತಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದ ಶೋಭಾ ಅವರಿಗೆ ಕಳೆದ ವರ್ಷ ಬ್ರಿಟನ್‌ ಪ್ರಜೆ ಹರೀಶ್‌ ಹರಿದಾಸ್‌ ಅವರಿಂದ ಮದುವೆಗಾಗಿ ಪ್ರಸ್ತಾವನೆ ಬಂದಿತ್ತು. ಲಾರ್ಡ್ಸ್ ಆಸ್ಪತ್ರೆಯ ಸಿಇಒ ಡಾ. ಹರಿದಾಸ್‌ ಅವರ ಪುತ್ರನ ಪ್ರಸ್ತಾವನೆಯನ್ನು ಶೋಭಾ ತಿರಸ್ಕರಿಸಿದ್ದರು. ಇದನ್ನು ಅವಮಾನವಾಗಿ ಪರಿಗಣಿಸಿ ಹಗೆತನ ಸಾಧಿಸಲು ಮುಂದಾದ ಹರೀಶ್‌ ಅವರು ಶೋಭಾ ಅವರ ಬಟ್ಟೆಯ ಅಂಗಡಿಯಲ್ಲಿ ಕೆಲಸ ಮಾಡುವ ವಿವೇಕ್‌ ಎಂಬಾತನಿಗೆ ಆಮಿಷವೊಡ್ಡಿ ಗಾಂಜಾ ಪ್ಯಾಕೆಟ್‌ಗಳನ್ನು ಇರಿಸಲು ಕುಮ್ಮಕ್ಕು ನೀಡಿದ್ದರು. ಅದರಂತೆ 400 ಗ್ರಾಂ. ಗಾಂಜಾ ಅಂಗಡಿ ಸೇರಿತ್ತು. ಇದನ್ನು ಪತ್ತೆ ಮಾಡಿರುವ ಪೊಲೀಸರು ಶೋಭಾ ಅವರ ಹೆಸರನ್ನು ಎಫ್‌ಐಆರ್‌ನಿಂದ ತೆಗೆದುಹಾಕಿ, ಕ್ಲೀನ್‌ಚಿಟ್‌ ಕೊಟ್ಟಿದ್ದಾರೆ. ಹರೀಶ್‌ ಹಾಗೂ ವಿವೇಕ್‌ರನ್ನು ಆರೋಪಿಯಾಗಿಸಿದ್ದಾರೆ.