ಅತ್ಯಾಚಾರ ಆರೋಪ: ಜೆಡಿಎಸ್‌ ಮುಖಂಡರೊಬ್ಬರ ಬೆಂಗಳೂರಿನ ಬಂಗಲೆಯಲ್ಲಿ ಅಡಗಿದ್ದ ಮಾಜಿ ಸಚಿವ ಮಣಿಕಂಠನ್‌ ಬಂಧನ!

ತಮಿಳುನಾಡಿನ ಮಾಜಿ ಸಚಿವ ಹಾಗೂ ಎಐಎಡಿಎಂಕೆ ಮುಖಂಡ ಎಂ. ಮಣಿಕಂಠನ್‌ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಮಲೇಷ್ಯಾದ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಗರ್ಭಪಾತ ಮಾಡಿಸಿದ ಹಾಗೂ ಬೆದರಿಕೆಯೊಡ್ಡಿದ ಆರೋಪದ ಮೇರೆಗೆ ಅವರ ಬಂಧನ ನಡೆದಿದೆ.

ಅತ್ಯಾಚಾರ ಆರೋಪ: ಜೆಡಿಎಸ್‌ ಮುಖಂಡರೊಬ್ಬರ ಬೆಂಗಳೂರಿನ ಬಂಗಲೆಯಲ್ಲಿ ಅಡಗಿದ್ದ ಮಾಜಿ ಸಚಿವ ಮಣಿಕಂಠನ್‌ ಬಂಧನ!
Linkup
ಬೆಂಗಳೂರು: ಮಲೇಷ್ಯಾದ ನಟಿಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಗರ್ಭಪಾತ ಮಾಡಿಸಿದ ಹಾಗೂ ಬೆದರಿಕೆಯೊಡ್ಡಿದ ಆರೋಪದ ಮೇರೆಗೆ ತಮಿಳುನಾಡಿನ ಮಾಜಿ ಸಚಿವ ಹಾಗೂ ಎಐಎಡಿಎಂಕೆ ಮುಖಂಡ ಎಂ. ಮಣಿಕಂಠನ್‌ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಅವರು ಬೆಂಗಳೂರಿನಲ್ಲಿ ಜೆಡಿಎಸ್‌ ಮುಖಂಡರೊಬ್ಬರ ಬಂಗಲೆಯಲ್ಲಿ ಅಡಗಿದ್ದರು. ಇದನ್ನು ತಿಳಿದ ಚೆನ್ನೈ ಸಿಐಡಿ ಪೊಲೀಸರು ಶನಿವಾರ ರಾತ್ರಿ ಬೆಂಗಳೂರಿಗೆ ಆಗಮಿಸಿ, ಭಾನುವಾರ ಕಾರ್ಯಾಚರಣೆ ನಡೆಸಿದರು. ಈ ಹಿಂದೆಯೇ ಆರೋಪಿ ಮಣಿಕಂಠನ್‌ಗೆ ಮದ್ರಾಸ್‌ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಏನಿದು ಪ್ರಕರಣ? 'ಕಳೆದ ಐದು ವರ್ಷಗಳಿಂದ ನಾನು ಮತ್ತು ಮಣಿಕಂಠನ್‌ ಲಿವ್‌ ಇನ್‌ ಸಂಬಂಧದಲ್ಲಿದ್ದೆವು. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ಇದರ ಫಲವಾಗಿ ಮೂರು ಬಾರಿ ಗರ್ಭ ಧರಿಸಿದ್ದೆ. ಬಲವಂತವಾಗಿ ಗರ್ಭಪಾತ ಮಾಡಿಸಿ, ಇದೀಗ ಮೋಸ ಮಾಡಿದ್ದಾರೆ' ಎಂದು ಮಲೇಷ್ಯಾ ಮೂಲದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ತಮ್ಮನ್ನು ಬಂಧಿಸದಂತೆ ಮಣಿಕಂಠನ್‌ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಎಐಎಡಿಎಂಕೆ ಸರಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾಗಿದ್ದ ಮಣಿಕಂಠನ್‌ ಅವರಿಗೆ 2017ರಲ್ಲಿ ದಕ್ಷಿಣ ಏಷ್ಯಾದ ಮಹಿಳೆಯ ಪರಿಚಯವಾಗಿತ್ತು. ಮಲೇಷ್ಯಾದಲ್ಲಿಹೂಡಿಕೆ ಸಂಬಂಧ ಮಾತುಕತೆಗೆ ಆಕೆಯನ್ನು ಕರೆಸಿಕೊಂಡಿದ್ದರು. ಈ ವೇಳೆ ಮಹಿಳೆಯ ಜತೆ ಒಡನಾಟ ಬೆಳೆಸಿ, ಲಿವ್‌ ಇನ್‌ ಸಂಬಂಧದಲ್ಲಿದ್ದರು. ಮದುವೆಯಾಗುವುದಾಗಿ ಒತ್ತಾಯಿಸಿದರೆ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿತಿಳಿಸಲಾಗಿದೆ.