ವಾರದಲ್ಲಿ 2ನೇ ಬಾರಿಗೆ ತೈಲ ದರ ಏರಿಕೆ, ಬೆಂಗಳೂರಿನಲ್ಲಿ ನೂರರ ಅಂಚಿಗೆ ತಲುಪಿದ ಪೆಟ್ರೋಲ್‌ ಬೆಲೆ

ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಬುಧವಾರ ಮತ್ತೆ ಏರಿಕೆಯಾಗಿದ್ದು, ಈ ವಾರದಲ್ಲಿ ನಡೆಯುತ್ತಿರುವ ಎರಡನೇ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೊಲ್‌ ದರ 26 ಪೈಸೆ ತುಟ್ಟಿಯಾಗಿದ್ದರೆ, ಡೀಸೆಲ್‌ ದರ 14 ಪೈಸೆ ಹೆಚ್ಚಳವಾಗಿದೆ.

ವಾರದಲ್ಲಿ 2ನೇ ಬಾರಿಗೆ ತೈಲ ದರ ಏರಿಕೆ, ಬೆಂಗಳೂರಿನಲ್ಲಿ ನೂರರ ಅಂಚಿಗೆ ತಲುಪಿದ ಪೆಟ್ರೋಲ್‌ ಬೆಲೆ
Linkup
ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಬುಧವಾರ ಮತ್ತೆ ಏರಿಕೆಯಾಗಿವೆ. ಇದು ಈ ವಾರದಲ್ಲಿ ನಡೆಯುತ್ತಿರುವ ಎರಡನೇ ದರ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ 25 ಪೈಸೆ ತುಟ್ಟಿಯಾಗಿದ್ದು ಲೀಟರ್‌ಗೆ 96.66 ರೂ. ತಲುಪಿದೆ. ಡೀಸೆಲ್‌ ದರ 13 ಪೈಸೆ ಹೆಚ್ಚಳವಾಗಿದ್ದು ಲೀಟರ್‌ಗೆ 87.28 ರೂ.ಗೆ ಮುಟ್ಟಿದೆ.ವಾಣಿಜ್ಯ ನಗರಿ ಮುಂಬಯಿನಲ್ಲಿ ಈಗಾಗಲೇ ಪೆಟ್ರೋಲ್‌ ದರ ನೂರರ ಗಡಿ ದಾಟಿದ್ದು 102.82 ರೂ. ಮುಟ್ಟಿದೆ. ಡೀಸೆಲ್‌ ದರ 94.84 ರೂ.ಗೆ ಏರಿಕೆಯಾಗಿದೆ. ಇದೇ ವೇಳೆ ಮಧ್ಯ ಪ್ರದೇಶದ ರೇವಾದಲ್ಲಿ ಪೆಟ್ರೋಲ್‌ ಬೆಲೆ 107 ರೂ. ಗಡಿ ದಾಟಿದ್ದು, ಡೀಸೆಲ್‌ 100 ರೂ.ಗಿಂತ ಮೇಲೇರಿದೆ.ಪ್ರಮುಖ ನಗರಗಳ ಪೆಟ್ರೋಲ್‌ ದರ ಹೀಗಿದೆ,
ನಗರಪೆಟ್ರೋಲ್‌ (ರೂ.)ಡೀಸೆಲ್‌ (ರೂ.)
ದಿಲ್ಲಿ96.6687.41
ಮುಂಬಯಿ102.8294.84
ಚೆನ್ನೈ97.9192.04
ಕೊಲ್ಕತ್ತಾ96.5890.25
ಬೆಂಗಳೂರಿನಲ್ಲಿ 100ರ ಅಂಚಿಗೆ ಪೆಟ್ರೋಲ್‌ ದರಬೆಂಗಳೂರಿನಲ್ಲಿ ಪೆಟ್ರೊಲ್‌ ದರ ಶತಕ ಬಾರಿಸಲು ಇನ್ನೊಂದೇ ಏರಿಕೆ ಬಾಕಿ ಉಳಿದಿದೆ. ನಗರದಲ್ಲಿ ಬುಧವಾರ ಪೆಟ್ರೋಲ್‌ ಬೆಲೆ 26 ಪೈಸೆ ತುಟ್ಟಿಯಾಗಿದ್ದು 99.89ಕ್ಕೆ ಏರಿಕೆ ಕಂಡಿದೆ. ಡೀಸೆಲ್‌ ದರ 14 ಪೈಸೆ ಹೆಚ್ಚಳವಾಗಿದ್ದು 92.66 ರೂ.ಗೆ ಏರಿಕೆಯಾಗಿದೆ.ಇದೇ ವೇಳೆ ಕಚ್ಚಾ ತೈಲ ಬೆಲೆಯೂ ಹೆಚ್ಚಳವಾಗಿದೆ. ಬ್ರೆಂಟ್‌ ಮಾದರಿಯ ಕಚ್ಚಾ ತೈಲ ದರ ಬ್ಯಾರೆಲ್‌ಗೆ 1.13 ಡಾಲರ್‌ಗೆ ಏರಿಕೆ ಕಂಡಿದ್ದು 73.99 ಡಾಲರ್‌ಗೆ ಏರಿಕೆಯಾಗಿದೆ. ಡಬ್ಲ್ಯೂಟಿಐ ಮಾದರಿಯ ಕಚ್ಚಾ ತೈಲ ದರದಲ್ಲಿ 1.24 ಡಾಲರ್‌ ಏರಿಕೆಯಾಗಿದ್ದು, ಬ್ಯಾರಲ್‌ಗೆ 72.12 ಡಾಲರ್‌ಗೆ ತಲುಪಿದೆ.