ಬಜೆಟ್‌ ಪೂರ್ವ ಸಮಾಲೋಚನೆ ಇಂದಿನಿಂದ (ಡಿ.15): ಮೊದಲ ದಿನ ಕೃಷಿ ತಜ್ಞರ ಜತೆ ಚರ್ಚೆ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2022- 23ನೇ ಸಾಲಿನ ಕೇಂದ್ರ ಬಜೆಟ್‌ಗೆ ಸಂಬಂಧಿಸಿ ಪೂರ್ವಭಾವಿ ಸಮಾಲೋಚನೆಯನ್ನು ಇಂದಿನಿಂದ (ಡಿ.15, ಬುಧವಾರ) ಆರಂಭಿಸಲಿದ್ದಾರೆ. ಕೃಷಿ ಮತ್ತು ಕೃಷಿ ಉತ್ಪನ್ನ ಸಂಸ್ಕರಣೆ ಉದ್ದಿಮೆ ವಲಯದ ತಜ್ಞರ ಜತೆಗೆ ಸಭೆ ನಡೆಸಲಿದ್ದಾರೆ.

ಬಜೆಟ್‌ ಪೂರ್ವ ಸಮಾಲೋಚನೆ ಇಂದಿನಿಂದ (ಡಿ.15): ಮೊದಲ ದಿನ ಕೃಷಿ ತಜ್ಞರ ಜತೆ ಚರ್ಚೆ!
Linkup
ಹೊಸದಿಲ್ಲಿ: ಹಣಕಾಸು ಸಚಿವೆ ಅವರು 2022- 23ನೇ ಸಾಲಿನ ಕೇಂದ್ರ ಬಜೆಟ್‌ಗೆ ಸಂಬಂಧಿಸಿ ಪೂರ್ವಭಾವಿ ಸಮಾಲೋಚನೆಯನ್ನು ಇಂದಿನಿಂದ (ಡಿ.15, ಬುಧವಾರ) ಆರಂಭಿಸಲಿದ್ದಾರೆ. ಕೃಷಿ ಮತ್ತು ಕೃಷಿ ಉತ್ಪನ್ನ ಸಂಸ್ಕರಣೆ ಉದ್ದಿಮೆ ವಲಯದ ತಜ್ಞರ ಜತೆಗೆ ಸಭೆ ನಡೆಸಲಿದ್ದಾರೆ. ಉದ್ಯಮ ಮಂಡಳಿಗಳು, ರೈತಪರ ಸಂಘಟನೆಗಳು, ಆರ್ಥಿಕ ತಜ್ಞರ ಜತೆಗೆ ಚರ್ಚಿಸಲಿದ್ದಾರೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೆಳವಣಿಗೆ ದರ ಎರಡಂಕಿಯಷ್ಟಿರಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕೂಡ ಇತ್ತೀಚಿನ ದ್ವೈಮಾಸಿಕ ಮಾನಿಟರಿ ಪಾಲಿಸಿ ರಿವೀವ್‌ನಲ್ಲಿ 2021-22ರಲ್ಲಿ ಜಿಡಿಪಿ ಬೆಳವಣಿಗೆ ಶೇ. 9.5ರಷ್ಟು ಇರಲಿದೆ ಎಂದು ತಿಳಿಸಿದೆ. ಆದರೆ, ಕೇಂದ್ರ ಸರಕಾರವು ಸರ್ಕಾರವು ಜಿಡಿಪಿಯ ಶೇ.6.8ರಷ್ಟು ವಿತ್ತೀಯ ಕೊರತೆ ಉಂಟಾಗಬಹುದು ಎಂದು ಅಂದಾಜಿಸಿದೆ. ವಿತ್ತ ಸಚಿವರು ಡಿ.15ರ ಸೋಮವಾರದಿಂದಲೇ ವಿವಿಧ ಉದ್ದಿಮೆ ವಲಯದವರೊಂದಿಗೆ ಸಮಾಲೋಚನ ಸಭೆ ಆರಂಭಿಸಲಿದ್ದಾರೆ. 2022-23ರ ಬಜೆಟ್‌ ಅನ್ನೂ ಗಮನದಲ್ಲಿರಿಸಿಕೊಂಡು ಸಮಾಲೋಚನೆ ನಡೆಸಲಾಗುತ್ತಿದೆ. ಸಮಾಲೋಚನೆ ಸಭೆಗಳು ವರ್ಚುವಲ್‌ ವಿಧಾನದಲ್ಲಿ ನಡೆಯಲಿವೆ ಎಂದು ವಿತ್ತ ಸಚಿವಾಲಯ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಬಜೆಟ್‌ ಸಮಾಲೋಚನಾ ಸಭೆಯ ಆರಂಭದಲ್ಲಿಯೇ ವಿತ್ತ ಸಚಿವರು ಕೃಷಿ ಮತ್ತು ಆಗ್ರೋ- ಪ್ರೊಸೆಸಿಂಗ್ ಉದ್ಯಮಗಳ ಜತೆ ಚರ್ಚೆ ನಡೆಸಲಿದ್ದಾರೆ. ಮುಂದಿನ ವರ್ಷದ ಬಜೆಟ್‌ನಲ್ಲಿ ಗಂಭೀರ ಸಮಸ್ಯೆಗಳಾದ ಬೇಡಿಕೆ ಸೃಷ್ಟಿ, ಉದ್ಯೋಗ ಸೃಷ್ಟಿ, ಆರ್ಥಿಕತೆಯನ್ನು ಶೇ.8ರ ದರದಲ್ಲಿ ಸುಸ್ಥಿರ ಬೆಳವಣಿಗೆ ಹಾದಿಯಲ್ಲಿ ಕೊಂಡೊಯ್ಯುವುದು ಸೇರಿದಂತೆ ಹಲವು ಪ್ರಮುಖ ಗುರಿಗಳನ್ನೂ ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗುತ್ತಿದೆ. 2021-22ರ ಆರ್ಥಿಕ ವರ್ಷದ 2ನೇ ತ್ರೈಮಾಸಿಕದಲ್ಲಿ ನೈಜ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ.8.4ರಷ್ಟು ಬೆಳವಣಿಗೆಯಾಗಿದೆ (ವರ್ಷದಿಂದ ವರ್ಷಕ್ಕೆ). 2019-20ರ ವರ್ಷಕ್ಕೆ ಹೋಲಿಸಿದರೆ ಇದು ಶೇ.100ಕ್ಕೂ ಹೆಚ್ಚು ಪ್ರಗತಿ ಸಾಧಿಸಿದೆ ಎಂದು ವಿತ್ತ ಸಚಿವಾಲಯದ ಮಾಸಿಕ ಎಕನಾಮಿಕ್‌ ರಿವೀವ್‌ ವರದಿಯಲ್ಲಿ ತಿಳಿಸಲಾಗಿದೆ. 2022ರ ಫೆಬ್ರವರಿ 1ರಂದು ಕೇಂದ್ರ ಬಜೆಟ್‌ ಮಂಡನೆ ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಜನವರಿ ಕೊನೆಯ ವಾರ ಬಜೆಟ್‌ ಅಧಿವೇಶನ ಆರಂಭವಾಗುತ್ತದೆ. ಬೇಡಿಕೆ ಸೃಷ್ಟಿಸುವುದು, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಯನ್ನು ಶೇ.8ರ ಸರಾಸರಿಯಲ್ಲಿ ಸ್ಥಿರವಾಗಿಸುವ ಗುರಿ ಸರಕಾರದ ಮುಂದಿದೆ. ಇದಕ್ಕೆ ಪೂರಕ ಬಜೆಟ್‌ ನಿರೀಕ್ಷಿಸಲಾಗಿದೆ. ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಬಜೆಟ್‌ ಟೀಮ್‌ನಲ್ಲಿ ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್‌, ಕಂದಾಯ ಕಾರ್ಯದರ್ಶಿ ತರುಣ್‌ ಬಜಾಜ್‌, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಖಾತೆ ಕಾರ್ಯದರ್ಶಿ ತುಹಿನ್‌ ಕಾಂತ ಪಾಂಡೆ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್‌ ಸೇಥ್‌, ಸಿಇಎ ಕೃಷ್ಣಮೂರ್ತಿ ಸುಬ್ರಮಣಿ-ಯನ್‌ ಇದ್ದಾರೆ. ಓಮಿಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚು-ತ್ತಿದ್ದು, ಇದರಿಂದ ಆರ್ಥಿ ಕತೆಯ ಮೇಲೆ ಆಗಬಲ್ಲಪರಿಣಾಮಗಳ ಬಗ್ಗೆಯೂ ಸರಕಾರ ಬಜೆಟ್‌ನಲ್ಲಿ ಗಮನಿಸಬೇಕಾಗಿದೆ. ಕೋವಿಡ್‌-19 ಬಿಕ್ಕಟ್ಟಿನ ನಡುವೆಯೂ ಸತತ ನಾಲ್ಕು ತ್ರೈಮಾಸಿಕಗಳಿಂದ ಜಿಡಿಪಿ ಬೆಳವಣಿಗೆ ಯಲ್ಲಿ ಚೇತರಿಕೆ ದಾಖಲಾಗಿದೆ. ಕೆಲವೇ ರಾಷ್ಟ್ರಗಳು ಮಾತ್ರ ಈ ಸಾಧನೆ ಮಾಡಿವೆ. ಹೀಗಿದ್ದರೂ ಹಣದುಬ್ಬರ ಮತ್ತು ಇತರ ಸವಾಲುಗಳಿವೆ. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.