ಭಾರತೀಯ ವಾಯುಪಡೆಯಿಂದ 'ಸಮರ್' ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದು, ಸಮರ್ ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದು, ಸಮರ್ ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಐಎಎಫ್ ತನ್ನ ಹಳೆಯ ರಷ್ಯಾ ಮೂಲದ ಏರ್-ಟು-ಏರ್ ಕ್ಷಿಪಣಿ ವ್ಯವಸ್ಥೆಯನ್ನು ಬಳಸಿಕೊಂಡು ಭರವಸೆಯ ಪ್ರತೀಕಾರದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು  ಅಭಿವೃದ್ಧಿಪಡಿಸಿದೆ. "ಭಾರತೀಯ ವಾಯುಪಡೆಯು ಇತ್ತೀಚಿಗೆ ಸೂರ್ಯಲಂಕಾ ವಾಯುನೆಲೆಯಲ್ಲಿ ನಡೆದ ಅಸ್ಟ್ರಾಶಕ್ತಿ 2023 ಕಸರತ್ತಿನ ಸಂದರ್ಭದಲ್ಲಿ ಆಂತರಿಕವಾಗಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿದ ಸಮರ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪ್ರಯೋಗ ನಡೆದಿದೆ. ಇದನ್ನು ಭಾರತೀಯ ವಾಯುಪಡೆಯ ನಿರ್ವಹಣಾ ಕಮಾಂಡ್ ಅಢಿಯಲ್ಲಿನ ಘಟಕವು ಅಭಿವೃದ್ಧಿಪಡಿಸಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಭೂಮಿ ವಾತಾವರಣಕ್ಕೆ ಚಂದ್ರಯಾನ-3 ರಾಕೆಟ್ ಅನಿಯಂತ್ರಿತ ಮರು-ಪ್ರವೇಶ: ಇಸ್ರೋ ಈ ವ್ಯವಸ್ಥೆಯು 2 ರಿಂದ 2.5 ಮ್ಯಾಕ್ ವೇಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕ್ಷಿಪಣಿಗಳೊಂದಿಗೆ ವೈಮಾನಿಕ ಬೆದರಿಕೆಗಳನ್ನು ಎದುರಿಸಬಹುದು. ಸಮಾರ್ ವ್ಯವಸ್ಥೆತಯಲ್ಲಿನ ಅವಳಿ ಟವರ್ ಉಡಾವಣಾ ವೇದಿಕೆ ಒಳಗೊಂಡಿದ್ದು, ಬೆದರಿಕೆ ಸನ್ನಿವೇಶ ಅವಲಂಬಿಸಿ, ಸಿಂಗಲ್ ಮತ್ತು ಸಾಲ್ವೋ ಮೋಡ್‌ನಲ್ಲಿ ಎರಡು ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎ.ಪಿ. ಸಿಂಗ್ ಈಗಾಗಲೇ ವೀಕ್ಷಿಸಿದ್ದಾರೆ. 

ಭಾರತೀಯ ವಾಯುಪಡೆಯಿಂದ 'ಸಮರ್' ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ
Linkup
ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದು, ಸಮರ್ ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದು, ಸಮರ್ ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಐಎಎಫ್ ತನ್ನ ಹಳೆಯ ರಷ್ಯಾ ಮೂಲದ ಏರ್-ಟು-ಏರ್ ಕ್ಷಿಪಣಿ ವ್ಯವಸ್ಥೆಯನ್ನು ಬಳಸಿಕೊಂಡು ಭರವಸೆಯ ಪ್ರತೀಕಾರದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು  ಅಭಿವೃದ್ಧಿಪಡಿಸಿದೆ. "ಭಾರತೀಯ ವಾಯುಪಡೆಯು ಇತ್ತೀಚಿಗೆ ಸೂರ್ಯಲಂಕಾ ವಾಯುನೆಲೆಯಲ್ಲಿ ನಡೆದ ಅಸ್ಟ್ರಾಶಕ್ತಿ 2023 ಕಸರತ್ತಿನ ಸಂದರ್ಭದಲ್ಲಿ ಆಂತರಿಕವಾಗಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿದ ಸಮರ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪ್ರಯೋಗ ನಡೆದಿದೆ. ಇದನ್ನು ಭಾರತೀಯ ವಾಯುಪಡೆಯ ನಿರ್ವಹಣಾ ಕಮಾಂಡ್ ಅಢಿಯಲ್ಲಿನ ಘಟಕವು ಅಭಿವೃದ್ಧಿಪಡಿಸಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಭೂಮಿ ವಾತಾವರಣಕ್ಕೆ ಚಂದ್ರಯಾನ-3 ರಾಕೆಟ್ ಅನಿಯಂತ್ರಿತ ಮರು-ಪ್ರವೇಶ: ಇಸ್ರೋ ಈ ವ್ಯವಸ್ಥೆಯು 2 ರಿಂದ 2.5 ಮ್ಯಾಕ್ ವೇಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕ್ಷಿಪಣಿಗಳೊಂದಿಗೆ ವೈಮಾನಿಕ ಬೆದರಿಕೆಗಳನ್ನು ಎದುರಿಸಬಹುದು. ಸಮಾರ್ ವ್ಯವಸ್ಥೆತಯಲ್ಲಿನ ಅವಳಿ ಟವರ್ ಉಡಾವಣಾ ವೇದಿಕೆ ಒಳಗೊಂಡಿದ್ದು, ಬೆದರಿಕೆ ಸನ್ನಿವೇಶ ಅವಲಂಬಿಸಿ, ಸಿಂಗಲ್ ಮತ್ತು ಸಾಲ್ವೋ ಮೋಡ್‌ನಲ್ಲಿ ಎರಡು ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎ.ಪಿ. ಸಿಂಗ್ ಈಗಾಗಲೇ ವೀಕ್ಷಿಸಿದ್ದಾರೆ.  ಭಾರತೀಯ ವಾಯುಪಡೆಯಿಂದ 'ಸಮರ್' ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ