ರಾಜ್ಯ ಜನರ ಹಸಿವು ನೀಗಿಸಿದ್ದು ಬಿಜೆಪಿ ಸರ್ಕಾರ, ವಚನ ಭ್ರಷ್ಟ ಬುರುಡೆರಾಮಯ್ಯ: ಬಿಜೆಪಿ

ಪಡಿತರ ಫಲಾನುಭವಿಗಳಿಗೆ ಅಕ್ಕಿಯೂ ಕೊಡಲಿಲ್ಲ, ಖಾತೆಗೆ ಹಣವನ್ನೂ ಹಾಕಲಿಲ್ಲ ವಚನ ಭ್ರಷ್ಟ ಬುರುಡೆರಾಮಯ್ಯ, ರಾಜ್ಯ ಜನರ ಹಸಿವು ನೀಗಿಸಿದ್ದು ಬಿಜೆಪಿ ಸರ್ಕಾರ ಎಂದು ಬಿಜೆಪಿ ಭಾನುವಾರ ಹೇಳಿದೆ. ಬೆಂಗಳೂರು: ಪಡಿತರ ಫಲಾನುಭವಿಗಳಿಗೆ ಅಕ್ಕಿಯೂ ಕೊಡಲಿಲ್ಲ, ಖಾತೆಗೆ ಹಣವನ್ನೂ ಹಾಕಲಿಲ್ಲ ವಚನ ಭ್ರಷ್ಟ ಬುರುಡೆರಾಮಯ್ಯ, ರಾಜ್ಯ ಜನರ ಹಸಿವು ನೀಗಿಸಿದ್ದು ಬಿಜೆಪಿ ಸರ್ಕಾರ ಎಂದು ಬಿಜೆಪಿ ಭಾನುವಾರ ಹೇಳಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಬೊಗಳೆ ಬಿಟ್ಟಿದ್ದ ಮಜಾವಾದಿ ಸಿದ್ದರಾಮಯ್ಯ ಸಾಹೇಬರು, ಮುಖ್ಯಮಂತ್ರಿ ಆಗುತ್ತಿದ್ದಂತೆ ನಾನು ಹೇಳಿದ್ದು ಅಕ್ಕಿ ಅಲ್ಲ ಆಹಾರ ಧಾನ್ಯ ಎಂದು ಉಲ್ಟಾ ಹೊಡೆದು ಉಲ್ಟಾರಾಮಯ್ಯ ಎನಿಸಿಕೊಂಡರು. ಪಡಿತರ ಫಲಾನುಭವಿಗಳಿಗೆ ಅಕ್ಕಿಯೂ ಕೊಡಲಿಲ್ಲ, ಖಾತೆಗೆ ಹಣವನ್ನೂ ಹಾಕಲಿಲ್ಲ ವಚನ ಭ್ರಷ್ಟ ಬುರುಡೆರಾಮಯ್ಯ. ನುಡಿದು ನಡೆದು ನುಡಿಯದೆ ನಡೆದು ಜನರ ನೆರವಿಗೆ ನಿಲ್ಲುವುದೇ ಪ್ರಧಾನಿ ಮೋದಿ ಅವರಿಗೆ ಇರುವ ಬದ್ಧತೆ. ಬುಲೆಟ್‌ ರೈಸ್‌, ರಾರೈಸ್ ಗುಣಮಟ್ಟದ ಭಾರತ್‌ ರೈಸ್‌ ಅನ್ನು ಕೋಟ್ಯಂತರ ಭಾರತೀಯರ ಕೈಗೆ ಎಟುಕುವ ಬೆಲೆ ರೂ.29 ಕ್ಕೆ ನೀಡುತ್ತಿದ್ದಾರೆ. ಕರ್ನಾಟಕದ ಜನರ ಹಸಿವನ್ನು ನೀಗಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದೆ. ಮತ್ತೊಂದು ಪೋಸ್ಟ್ ನಲ್ಲಿ ಶೇ.40 ಕಮಿಷನ್ ಆರೋಪ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ಗುತ್ತಿಗೆ ಅಕ್ರಮಗಳ ತನಿಖಾ ಆಯೋಗದಿಂದ ಕನ್ನಡಿಗರ ತೆರಿಗೆ ಹಣ ಪೋಲು. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್, ಗುತ್ತಿಗೆ ಅಕ್ರಮಗಳ ತನಿಖೆಗೆಂದು ತನ್ನ ವಂಧಿಮಾಗದರನ್ನು ಮುಖ್ಯಸ್ಥರನ್ನಾಗಿಸಿ ಆಯೋಗವನ್ನೂ ಸಹ ರಚಿಸಿತ್ತು, ಆದರೆ, ಆ ಆಯೋಗ ಇದೂವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಅಸಲಿಗೆ ತನಿಖೆ ನಡೆಸಲು ಕಾಂಗ್ರೆಸ್ ಬಳಿ ಯಾವ ಆಧಾರವೂ ಇಲ್ಲ, ತನ್ನ ಸುಳ್ಳಿನ ಕೋಟೆ ಬಟಾಬಯಲಾಗುವುದೆಂಬ ಕಾರಣಕ್ಕೆ ಕಾಂಗ್ರೆಸ್, ತನಿಖಾ ಆಯೋಗಕ್ಕೆ ಒಂದು ಸಭೆಯನ್ನು ಸಹ ನಡೆಸಲು ಬಿಡದೆ, ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಸಿದ್ದರಾಮಯ್ಯ ಅವರೇ, ನಿಮ್ಮ ಬಳಿ ತಾಕತ್ತು, ದಮ್ಮು ಇದ್ದರೆ ನೀವೇ ಸೃಷ್ಟಿಸಿರುವ ಆಯೋಗದಿಂದ ಒಂದಾದರೂ ತನಿಖೆ ಮಾಡಿಸಿ ಎಂದು ಸವಾಲು ಹಾಕಿದೆ. ಮತ್ತೊಂದು ಪೋಸ್ಟ್ ನಲ್ಲಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ವಿರುದ್ಧ ವಾಗ್ದಾಳಿ ನಡೆಸಿದೆ. ತುಕ್ಡೇ ತುಕ್ಡೇ ಗ್ಯಾಂಗ್‌ ಒಟ್ಟುಗೂಡಿಸಲು ಮಾಡಿದ ಭಾರತ್‌ ತೋಡೋ ಯಾತ್ರೆ ವಿಫಲವಾಯಿತು. ಪ್ರಧಾನಿ ಮೋದಿಯವರನ್ನು ಎದುರಿಸಲು ಮಾಡಿಕೊಂಡ ಇಂಡಿಯಾ ಮೈತ್ರಿಕೂಟ ಒಡೆದು ಹೋಯಿತು. ಮಮತಾ ಬ್ಯಾನರ್ಜಿ ಓಡಿ ಹೋದರು, ಅರವಿಂದ ಕೇಜ್ರಿವಾಲಾ ಓಡಿ ಹೋದರು, ನಿತೀಶ್‌ ಕುಮಾರ್‌ ಹೊರ ಹೋದರು, ಸ್ಟಾಲಿನ್‌ ಓಡಲು ಸನ್ನದ್ಧರಾಗಿರುವರು, ರಾಹುಲ್‌ ಗಾಂಧಿ ಓಡುತ್ತಲೇ ಇರುವರು, ಭಾರತವನ್ನು ಒಡೆಯಲು ಕಾಂಗ್ರೆಸ್ ಕೈಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ INDI ಮೈತ್ರಿ ಎಂದು ಹೆಸರಿಟ್ಟುಕೊಂಡು ಆ ಹೆಸರನ್ನಾದರೂ ಛಿದ್ರಗೊಳಿಸಿ ತೃಪ್ತರಾದರು. ಯುವರಾಜನ ಕೈ ಹಿಡಿದು ಓಡಿದ ಕಾಂಗ್ರೆಸ್ಸಿಗರು ಸುಸ್ತಾದರು ಎಂದು ವ್ಯಂಗ್ಯವಾಡಿದರು.

ರಾಜ್ಯ ಜನರ ಹಸಿವು ನೀಗಿಸಿದ್ದು ಬಿಜೆಪಿ ಸರ್ಕಾರ, ವಚನ ಭ್ರಷ್ಟ ಬುರುಡೆರಾಮಯ್ಯ: ಬಿಜೆಪಿ
Linkup
ಪಡಿತರ ಫಲಾನುಭವಿಗಳಿಗೆ ಅಕ್ಕಿಯೂ ಕೊಡಲಿಲ್ಲ, ಖಾತೆಗೆ ಹಣವನ್ನೂ ಹಾಕಲಿಲ್ಲ ವಚನ ಭ್ರಷ್ಟ ಬುರುಡೆರಾಮಯ್ಯ, ರಾಜ್ಯ ಜನರ ಹಸಿವು ನೀಗಿಸಿದ್ದು ಬಿಜೆಪಿ ಸರ್ಕಾರ ಎಂದು ಬಿಜೆಪಿ ಭಾನುವಾರ ಹೇಳಿದೆ. ಬೆಂಗಳೂರು: ಪಡಿತರ ಫಲಾನುಭವಿಗಳಿಗೆ ಅಕ್ಕಿಯೂ ಕೊಡಲಿಲ್ಲ, ಖಾತೆಗೆ ಹಣವನ್ನೂ ಹಾಕಲಿಲ್ಲ ವಚನ ಭ್ರಷ್ಟ ಬುರುಡೆರಾಮಯ್ಯ, ರಾಜ್ಯ ಜನರ ಹಸಿವು ನೀಗಿಸಿದ್ದು ಬಿಜೆಪಿ ಸರ್ಕಾರ ಎಂದು ಬಿಜೆಪಿ ಭಾನುವಾರ ಹೇಳಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಬೊಗಳೆ ಬಿಟ್ಟಿದ್ದ ಮಜಾವಾದಿ ಸಿದ್ದರಾಮಯ್ಯ ಸಾಹೇಬರು, ಮುಖ್ಯಮಂತ್ರಿ ಆಗುತ್ತಿದ್ದಂತೆ ನಾನು ಹೇಳಿದ್ದು ಅಕ್ಕಿ ಅಲ್ಲ ಆಹಾರ ಧಾನ್ಯ ಎಂದು ಉಲ್ಟಾ ಹೊಡೆದು ಉಲ್ಟಾರಾಮಯ್ಯ ಎನಿಸಿಕೊಂಡರು. ಪಡಿತರ ಫಲಾನುಭವಿಗಳಿಗೆ ಅಕ್ಕಿಯೂ ಕೊಡಲಿಲ್ಲ, ಖಾತೆಗೆ ಹಣವನ್ನೂ ಹಾಕಲಿಲ್ಲ ವಚನ ಭ್ರಷ್ಟ ಬುರುಡೆರಾಮಯ್ಯ. ನುಡಿದು ನಡೆದು ನುಡಿಯದೆ ನಡೆದು ಜನರ ನೆರವಿಗೆ ನಿಲ್ಲುವುದೇ ಪ್ರಧಾನಿ ಮೋದಿ ಅವರಿಗೆ ಇರುವ ಬದ್ಧತೆ. ಬುಲೆಟ್‌ ರೈಸ್‌, ರಾರೈಸ್ ಗುಣಮಟ್ಟದ ಭಾರತ್‌ ರೈಸ್‌ ಅನ್ನು ಕೋಟ್ಯಂತರ ಭಾರತೀಯರ ಕೈಗೆ ಎಟುಕುವ ಬೆಲೆ ರೂ.29 ಕ್ಕೆ ನೀಡುತ್ತಿದ್ದಾರೆ. ಕರ್ನಾಟಕದ ಜನರ ಹಸಿವನ್ನು ನೀಗಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದೆ. ಮತ್ತೊಂದು ಪೋಸ್ಟ್ ನಲ್ಲಿ ಶೇ.40 ಕಮಿಷನ್ ಆರೋಪ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ಗುತ್ತಿಗೆ ಅಕ್ರಮಗಳ ತನಿಖಾ ಆಯೋಗದಿಂದ ಕನ್ನಡಿಗರ ತೆರಿಗೆ ಹಣ ಪೋಲು. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಕಾಂಗ್ರೆಸ್, ಗುತ್ತಿಗೆ ಅಕ್ರಮಗಳ ತನಿಖೆಗೆಂದು ತನ್ನ ವಂಧಿಮಾಗದರನ್ನು ಮುಖ್ಯಸ್ಥರನ್ನಾಗಿಸಿ ಆಯೋಗವನ್ನೂ ಸಹ ರಚಿಸಿತ್ತು, ಆದರೆ, ಆ ಆಯೋಗ ಇದೂವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಅಸಲಿಗೆ ತನಿಖೆ ನಡೆಸಲು ಕಾಂಗ್ರೆಸ್ ಬಳಿ ಯಾವ ಆಧಾರವೂ ಇಲ್ಲ, ತನ್ನ ಸುಳ್ಳಿನ ಕೋಟೆ ಬಟಾಬಯಲಾಗುವುದೆಂಬ ಕಾರಣಕ್ಕೆ ಕಾಂಗ್ರೆಸ್, ತನಿಖಾ ಆಯೋಗಕ್ಕೆ ಒಂದು ಸಭೆಯನ್ನು ಸಹ ನಡೆಸಲು ಬಿಡದೆ, ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ. ಸಿದ್ದರಾಮಯ್ಯ ಅವರೇ, ನಿಮ್ಮ ಬಳಿ ತಾಕತ್ತು, ದಮ್ಮು ಇದ್ದರೆ ನೀವೇ ಸೃಷ್ಟಿಸಿರುವ ಆಯೋಗದಿಂದ ಒಂದಾದರೂ ತನಿಖೆ ಮಾಡಿಸಿ ಎಂದು ಸವಾಲು ಹಾಕಿದೆ. ಮತ್ತೊಂದು ಪೋಸ್ಟ್ ನಲ್ಲಿ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ವಿರುದ್ಧ ವಾಗ್ದಾಳಿ ನಡೆಸಿದೆ. ತುಕ್ಡೇ ತುಕ್ಡೇ ಗ್ಯಾಂಗ್‌ ಒಟ್ಟುಗೂಡಿಸಲು ಮಾಡಿದ ಭಾರತ್‌ ತೋಡೋ ಯಾತ್ರೆ ವಿಫಲವಾಯಿತು. ಪ್ರಧಾನಿ ಮೋದಿಯವರನ್ನು ಎದುರಿಸಲು ಮಾಡಿಕೊಂಡ ಇಂಡಿಯಾ ಮೈತ್ರಿಕೂಟ ಒಡೆದು ಹೋಯಿತು. ಮಮತಾ ಬ್ಯಾನರ್ಜಿ ಓಡಿ ಹೋದರು, ಅರವಿಂದ ಕೇಜ್ರಿವಾಲಾ ಓಡಿ ಹೋದರು, ನಿತೀಶ್‌ ಕುಮಾರ್‌ ಹೊರ ಹೋದರು, ಸ್ಟಾಲಿನ್‌ ಓಡಲು ಸನ್ನದ್ಧರಾಗಿರುವರು, ರಾಹುಲ್‌ ಗಾಂಧಿ ಓಡುತ್ತಲೇ ಇರುವರು, ಭಾರತವನ್ನು ಒಡೆಯಲು ಕಾಂಗ್ರೆಸ್ ಕೈಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ INDI ಮೈತ್ರಿ ಎಂದು ಹೆಸರಿಟ್ಟುಕೊಂಡು ಆ ಹೆಸರನ್ನಾದರೂ ಛಿದ್ರಗೊಳಿಸಿ ತೃಪ್ತರಾದರು. ಯುವರಾಜನ ಕೈ ಹಿಡಿದು ಓಡಿದ ಕಾಂಗ್ರೆಸ್ಸಿಗರು ಸುಸ್ತಾದರು ಎಂದು ವ್ಯಂಗ್ಯವಾಡಿದರು. ರಾಜ್ಯ ಜನರ ಹಸಿವು ನೀಗಿಸಿದ್ದು ಬಿಜೆಪಿ ಸರ್ಕಾರ, ವಚನ ಭ್ರಷ್ಟ ಬುರುಡೆರಾಮಯ್ಯ: ಬಿಜೆಪಿ