ದಿಲ್ಲಿ ಗಲಭೆ ಕೇಸ್‌, ಕೊನೆಗೂ 3 ವಿದ್ಯಾರ್ಥಿ ಕಾರ್ಯಕರ್ತರ ಬಿಡುಗಡೆ

ಜೆಎನ್‌ಯು ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್‌ ಹಾಗೂ ಆಸಿಫ್‌ ಇಕ್ಬಾಲ್‌ ಅವರಿಗೆ ಜೂ. 15ರಂದು ದಿಲ್ಲಿ ಹೈಕೋರ್ಟ್‌ ಜಾಮೀನು ನೀಡಿತ್ತು. ಇದೀಗ ಅವರು ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ದಿಲ್ಲಿ ಗಲಭೆ ಕೇಸ್‌, ಕೊನೆಗೂ 3 ವಿದ್ಯಾರ್ಥಿ ಕಾರ್ಯಕರ್ತರ ಬಿಡುಗಡೆ
Linkup
ಹೊಸದಿಲ್ಲಿ: ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ವಿದ್ಯಾರ್ಥಿ ಕಾರ್ಯಕರ್ತರು ಎರಡು ದಿನಗಳ ವಿಳಂಬದ ಬಳಿಕ ಗುರುವಾರ ಬಿಡುಗಡೆಗೊಂಡಿದ್ದಾರೆ. ಹೈಕೋರ್ಟ್‌ ನೀಡಿದರೂ ಮೀನಮೇಷ ಎಣಿಸಿದ ಪೊಲೀಸರಿಗೆ ದಿಲ್ಲಿ ಸೆಷನ್ಸ್‌ ಕೋರ್ಟ್‌ ತರಾಟೆಗೆ ತೆಗೆದುಕೊಂಡ ಬಳಿಕ 50 ತಾಸು ವಿಳಂಬ ಮಾಡಿ, ಕೊನೆಗೂ ತಿಹಾರ ಜೈಲಿನಿಂದ ಆರೋಪಿಗಳನ್ನು ಬಿಡುಗಡೆಗೊಳಿಸಲಾಗಿದೆ. ಆ ಮೂಲಕ ದಾಖಲೆ ಪರಿಶೀಲನೆ ಕಾರಣದಿಂದ ವಿಳಂಬ ಧೋರಣೆ ಅನುಸರಿಸಿದ್ದ ದಿಲ್ಲಿ ಪೊಲೀಸರಿಗೆ ಮುಖಭಂಗವಾಗಿದೆ. ಜೆಎನ್‌ಯು ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳಾದ ದೇವಾಂಗನಾ ಕಲಿತಾ, ನತಾಶಾ ನರ್ವಾಲ್‌ ಹಾಗೂ ಆಸಿಫ್‌ ಇಕ್ಬಾಲ್‌ ಅವರಿಗೆ ಜೂನ್‌ 15ರಂದು ದಿಲ್ಲಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಆದರೆ, ಆರೋಪಿಗಳ ವಿಳಾಸ ಹಾಗೂ ಸಾಕ್ಷಿ ಕುರಿತ ಪರಿಶೀಲನೆಗಾಗಿ ಹೆಚ್ಚಿನ ಸಮಯ ಬೇಕು ಎಂದು ದಿಲ್ಲಿ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ, ಪೊಲೀಸರ ಅರ್ಜಿ ತಿರಸ್ಕರಿಸಿದ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ರವಿಂದರ್‌ ಬೇಡಿ, "ಪರಿಶೀಲನೆ ಹೆಸರಿನಲ್ಲಿ ಆರೋಪಿಗಳನ್ನು ಜೈಲಿನಲ್ಲಿ ಇಡುವುದು ಸಮಂಜಸ ಕಾರಣವಲ್ಲ. ಗುರುವಾರ ಸಂಜೆ 5ರೊಳಗೆ ಆರೋಪಿಗಳ ವಿಳಾಸ, ಸಾಕ್ಷಿ ಪರಿಶೀಲನೆ ನಡೆಸಿ, ಸಂಜೆ 5ರೊಳಗೆ ವರದಿ ಸಲ್ಲಿಸಬೇಕು. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು,'' ಎಂದು ತಿಹಾರ್‌ ಜೈಲಿನ ಅಧೀಕ್ಷಕರಿಗೆ ವಾರಂಟ್‌ ಜಾರಿ ಮಾಡಿದ್ದರು. ಕಳೆದ ವರ್ಷದ ಮೇನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ದಿಲ್ಲಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ವೇಳೆ 53 ಜನ ಮೃತಪಟ್ಟರೆ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಹಿಂಸಾಚಾರಕ್ಕೆ ಪಿತೂರಿ ನಡೆಸಲಾಗಿದೆ ಎಂದು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಮೂವರನ್ನೂ ಬಂಧಿಸಲಾಗಿತ್ತು. ಮೂವರು ವಿದ್ಯಾರ್ಥಿ ಕಾರ್ಯಕರ್ತರಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಚಾರಣೆ ನಡೆಸಲಿದೆ.