"ಇದ್ದವರಿಗೆ ಸಹಾಯ ಮಾಡ್ತೀರಾ, ಮಧ್ಯಮ ವರ್ಗದ ಕಥೆಯೇನು" ಎಂದು ಪವನ್ ಕಲ್ಯಾಣ್ ಪತ್ನಿ ರೇಣು ದೇಸಾಯಿಗೆ ತರಾಟೆ!

ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ 2ನೇ ಮಾಜಿ ಪತ್ನಿ ರೇಣು ದೇಸಾಯಿ ಅವರು ಸಹಾಯ ಮಾಡಲು ಹೋಗಿ ಜನರಿಂದ ಬೈಗುಳ ತಿಂದಿದ್ದಾರೆ. ಅದಕ್ಕೆ ಉತ್ತರ ಕೂಡ ನೀಡಿದ್ದಾರೆ. ಆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

"ಇದ್ದವರಿಗೆ ಸಹಾಯ ಮಾಡ್ತೀರಾ, ಮಧ್ಯಮ ವರ್ಗದ ಕಥೆಯೇನು" ಎಂದು ಪವನ್ ಕಲ್ಯಾಣ್ ಪತ್ನಿ ರೇಣು ದೇಸಾಯಿಗೆ ತರಾಟೆ!
Linkup
ಸಾಕಷ್ಟು ಕಲಾವಿದರು ಕೊರೊನಾ ವೈರಸ್‌ನಿಂದ ಕಷ್ಟಪಡುತ್ತಿರುವವರಿಗೆ ಸಹಾಯ ಮಾಡಿದ್ದಾರೆ, ಮಾಡುತ್ತಿದ್ದಾರೆ ಕೂಡ. ಇನ್ನು ಬೇರೆ ಬೇರೆ ರಾಜ್ಯಗಳಲ್ಲಿ ಸಿಎಂ ಪರಿಹಾರ ನಿಧಿಗೂ ಕೂಡ ಹಣ ನೀಡಲಾಗುತ್ತಿದೆ. ಅಂತೆಯೇ ನಟ ಅವರ ಮಾಜಿ ಎರಡನೇ ಪತ್ನಿ ಸಹಾಯ ಮಾಡುತ್ತಿದ್ದರು. ಅದನ್ನೇ ಪ್ರಶ್ನೆ ಮಾಡಲಾಗಿದೆ. ಮಧ್ಯಮ ವರ್ಗದವರನ್ನು ರೇಣು ದೇಸಾಯಿ ಅವರು ತಿರಸ್ಕಾರ ಮಾಡುತ್ತಿದ್ದಾರೆ ಅಂತ ಕೆಲ ನೆಟ್ಟಿಗರು ದೂರಿದ್ದಾರೆ. ಇರುವ ಜನರಿಗೆ ರೇಣು ಅವರು ಮತ್ತೆ ಸಹಾಯ ಮಾಡುತ್ತಿದ್ದಾರೆ ಎಂದು ಕೂಡ ಹೇಳಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಬಂದ ಕಾಮೆಂಟ್‌ಗಳನ್ನು ರೇಣು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ, ಸ್ಪಷ್ಟನೆ ನೀಡಿದ್ದಾರೆ. ಕಾಮೆಂಟ್‌ಗಳನ್ನು ಶೇರ್ ಮಾಡಿರುವ ರೇಣು ದೇಸಾಯಿ ಅವರು, "ನಾನು ಕಳೆದ 10-12 ದಿನಗಳಿಂದ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೇನೆ, ಅರ್ಥ ಮಾಡಿಕೊಳ್ಳಿ. ನನ್ನನ್ನು ಪ್ರಶ್ನೆ ಮಾಡೋಕೆ ನೀವು ಆಯ್ಕೆ ಮಾಡಿದ ಪ್ರತಿನಿಧಿ ಅಥವಾ ರಾಜಕಾರಣಿ ನಾನಲ್ಲ. ನೀವು ಆಯ್ಕೆ ಮಾಡಿದ ರಾಜಕಾರಣಿಯನ್ನು ಪ್ರಶ್ನೆ ಮಾಡಿ. ಸಹಾಯ ಮಾಡಿ ಅಂತ ಬೇಸರ ಮೂಢಿಸುವ, ನಿಷ್ಠೂರ ಮೆಸೇಜ್‌ಗಳು ಬರುತ್ತಿವೆ. ಇವೆಲ್ಲವೂ ನನಗೆ ಬೇಸರ ತರುತ್ತಿದೆ. ನಾನು ನಿಮ್ಮ ಮೆಸೇಜ್‌ನ್ನು ನೋಡಿದರದಿದ್ದರೆ ಮತ್ತೊಮ್ಮೆ ಮೆಸೇಜ್ ಮಾಡಿ. ನನ್ನ ಇಂಬಾಕ್ಸ್‌ಗಳೆಲ್ಲವೂ ಸಿಕ್ಕಾಪಟ್ಟೆ ಮೆಸೇಜ್‌ಗಳಿಂದ ತುಂಬಿ ಹೋಗಿದೆ" ಎಂದು ಹೇಳಿದ್ದಾರೆ. ರೇಣು ಅವರ ಪೋಸ್ಟ್‌ಗೆ ಅಭಿಮಾನಿಗಳು, ಫಾಲೋವರ್ಸ್ ಅವರು ಬೆಂಬಲ ಸೂಚಿಸಿದ್ದಾರೆ. ಹಾಯ್, ಹೆಲೋ ಮೆಸೇಜ್ ಕಳಿಸಿದ್ರೆ ಬ್ಲಾಕ್ ಮಾಡುವುದಾಗಿ ಕೂಡ ರೇಣು ಕೂಡ ಎಚ್ಚರಿಕೆ ಮಾಡಿದ್ದಾರೆ. ರೇಣು ಹೆಸರಲ್ಲಿ ಟ್ವಿಟ್ಟರ್‌ನಲ್ಲಿ ಫೇಕ್ ಖಾತೆ ತೆರೆಯಲಾಗಿದೆ. ಇನ್ನು ನಾನು ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರ ಇರೋದು ಅಂತ ಕೂಡ ಅವರು ಹೇಳಿದ್ದಾರೆ. ರೇಣು ದೇಸಾಯಿ ಹಾಗೂ ಪವನ್ ಕಲ್ಯಾಣ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.