ಕೋವಿಡ್ ಲಸಿಕೆ ಪಡೆದ ನಟಿ ನಯನತಾರಾ ಹಾಗೂ ಬಾಯ್‌ಫ್ರೆಂಡ್ ವಿಘ್ನೇಶ್

ಚೆನ್ನೈನ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್‌ಅನ್ನು ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಸ್ವೀಕರಿಸಿದ್ದಾರೆ.

ಕೋವಿಡ್ ಲಸಿಕೆ ಪಡೆದ ನಟಿ ನಯನತಾರಾ ಹಾಗೂ ಬಾಯ್‌ಫ್ರೆಂಡ್ ವಿಘ್ನೇಶ್
Linkup
ಕಾಲಿವುಡ್‌ನ ಲವ್ ಬರ್ಡ್ಸ್ ಹಾಗೂ ಕೋವಿಡ್ ಲಸಿಕೆ ಪಡೆದಿದ್ದಾರೆ. ಚೆನ್ನೈನ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್‌ಅನ್ನು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸ್ವೀಕರಿಸಿದ್ದಾರೆ. ಕೋವಿಡ್ ಲಸಿಕೆಯನ್ನು ಪಡೆದಿರುವ ಬಗ್ಗೆ ನಿರ್ದೇಶಕ ವಿಘ್ನೇಶ್ ಶಿವನ್ ಇನ್ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ. ಲಸಿಕೆ ಪಡೆದ ನಯನತಾರಾ ಹಾಗೂ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡು, ''ಪ್ಲೀಸ್ ಪ್ಲೀಸ್ ಲಸಿಕೆ ಹಾಕಿಸಿಕೊಳ್ಳಿ'' ಎಂದು ಎಲ್ಲರಲ್ಲೂ ಮನವಿ ಮಾಡಿದ್ದಾರೆ. ಕಾಲಿವುಡ್ ತಾರೆಯರಾದ ರಜಿನಿಕಾಂತ್, ರಾಧಿಕಾ ಶರತ್‌ಕುಮಾರ್, ಸಿಮ್ರನ್, ಕಮಲ್ ಹಾಸನ್, ಹ್ಯಾರಿಸ್ ಜಯರಾಜ್, ಸುಹಾಸಿನಿ ಮಣಿರತ್ನಂ ಮುಂತಾದವರು ಕೂಡ ಇತ್ತೀಚೆಗಷ್ಟೇ ಪಡೆದಿದ್ದರು. ಇನ್ನು, ಸಿನಿಮಾ ವಿಷಯಕ್ಕೆ ಬರುವುದಾದರೆ ನಟಿ ನಯನತಾರಾ ಸದ್ಯ 'ಅಣ್ಣಾತ್ತೆ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆಗೆ 'ಅಣ್ಣಾತ್ತೆ' ಚಿತ್ರದಲ್ಲಿ ನಯನತಾರಾ ಅಭಿನಯಿಸುತ್ತಿದ್ದಾರೆ. ಜೊತೆಗೆ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿರುವ 'ಕಾತು ವಾಕುಳ ರೆಂಡು ಕಾದಲ್' ಚಿತ್ರದಲ್ಲೂ ನಯನತಾರಾ ನಟಿಸುತ್ತಿದ್ದಾರೆ. ಅಂದ್ಹಾಗೆ, ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ನೃತ್ಯ ಸಂಯೋಜಕ, ನಿರ್ದೇಶಕ ಪ್ರಭುದೇವರಿಂದ ದೂರಾದ ಬಳಿಕ ನಟಿ ನಯನತಾರಾ ಪ್ರೀತಿಯ ಸುಳಿಯಲ್ಲಿ ಸಿಲುಕಿದ್ದು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ. 'ನಾನುಮ್ ರೌಡಿಧಾನ್' ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮಧ್ಯೆ ಪ್ರೀತಿ ಮೊಳಕೆಯೊಡೆದಿತ್ತು. ಸದ್ಯದಲ್ಲೇ ನಯನತಾರಾ-ವಿಘ್ನೇಶ್ ಶಿವನ್ ಮದುವೆಯಾಗುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. (ಚಿತ್ರಕೃಪೆ: ವಿಘ್ನೇಶ್ ಶಿವನ್ ಇನ್ಸ್ಟಾಗ್ರಾಮ್ ಪ್ರೊಫೈಲ್)