2024 ರಲ್ಲಿ ನೀವು ಗಮನಿಸಬೇಕಿರುವ ವೆಲ್ ನೆಸ್ ಟ್ರೆಂಡ್ ಗಳಿವು..

ಸ್ವಾಸ್ಥ್ಯ (Wellness) ಟ್ರೆಂಡ್ ಈಗ ಎಲ್ಲೆಡೆ ವಿಸ್ತರಿಸುತ್ತಿದ್ದು ದೈಹಿಕ, ಮಾನಸಿಕ, ಭಾವನಾತ್ಮಕ ಸ್ವಾಸ್ಥ್ಯದ ಸಮಗ್ರ ಆರೋಗ್ಯವನ್ನು ಒಳಗೊಂಡ ಯೋಗಕ್ಷೇಮದ ಬಗ್ಗೆ ಅರಿವು ಹೆಚ್ಚಿಸುತ್ತಿರುವುದನ್ನು ಸೂಚಿಸುತ್ತದೆ. ಸ್ವಾಸ್ಥ್ಯ (Wellness) ಟ್ರೆಂಡ್ ಈಗ ಎಲ್ಲೆಡೆ ವಿಸ್ತರಿಸುತ್ತಿದ್ದು ದೈಹಿಕ, ಮಾನಸಿಕ, ಭಾವನಾತ್ಮಕ ಸ್ವಾಸ್ಥ್ಯದ ಸಮಗ್ರ ಆರೋಗ್ಯವನ್ನು ಒಳಗೊಂಡ ಯೋಗಕ್ಷೇಮದ ಬಗ್ಗೆ ಅರಿವು ಹೆಚ್ಚಿಸುತ್ತಿರುವುದನ್ನು ಸೂಚಿಸುತ್ತದೆ.
ನಾವು ನಿರಂತರ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದೇವೆ. ಈ ಹಂತದಲ್ಲಿ ಹಲವಾರು ಪ್ರಮುಖ ಟ್ರೆಂಡ್ ಗಳು ಕಾಣಸಿಗುತ್ತಿದ್ದು, ವ್ಯಕ್ತಿಗಳು ತಮ್ಮ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತಿರುವ ವಿಧಾನವನ್ನು ರೂಪಿಸುತ್ತಿವೆ.
ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಟ್ರೆಂಡ್ ಗಳು ಇಂತಿವೆ...
1. ವ್ಯಕ್ತಿಗೆ ಅನುಗುಣವಾದ ಪೋಷಣೆ: ಜನರು ತಮ್ಮ ವಿಶಿಷ್ಟ ಅಗತ್ಯತೆಗಳಿಗೆ ತಕ್ಕಂತೆ ಆಹಾರ ಸೇವಿಸುವುದರಿಂದ, ವ್ಯಕ್ತಿಗೆ ಅನುಗುಣವಾದ ಪೋಷಣೆ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ.
ಜೆನೆಟಿಕ್ ಟೆಸ್ಟಿಂಗ್ ಮತ್ತು ಡೇಟಾ ಅನಾಲಿಟಿಕ್ಸ್ ಕ್ಷೇತ್ರದಲ್ಲಿನ ಪ್ರಗತಿ ವ್ಯಕ್ತಿಗಳು ತಮ್ಮ ದೇಹಕ್ಕೆ ನಿರ್ದಿಷ್ಟ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಸುಧಾರಿತ ಶಕ್ತಿ, ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯಕ್ಕಾಗಿ ಆಹಾರದ ಆಯ್ಕೆಗಳನ್ನು ಉತ್ತಮಗೊಳಿಸುತ್ತದೆ. ವ್ಯಕ್ತಿಯ ಅವಶ್ಯಕತೆಗಳಿಗೆ ತಕ್ಕಂತೆ ತಯಾರು ಮಾಡಿದ ಊಟದ ಯೋಜನೆಗಳು ಮತ್ತು ಡಿಎನ್‌ಎ-ಆಧಾರಿತ ಪೌಷ್ಟಿಕಾಂಶದ ಸಲಹೆಗಳು ಇಂದು ಸುಲಭ ಸಾಧ್ಯವಾಗಿದೆ.
ಇದನ್ನೂ ಓದಿ: ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ನೋಡುತ್ತೀರಾ? ಈ ಲೇಖನವನ್ನೊಮ್ಮೆ ಓದಿ...
2. ಮಾನಸಿಕ ಆರೋಗ್ಯ ಟೆಕ್: ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಸಂಯೋಜನೆ ಆವೇಗ ಪಡೆದುಕೊಂಡಿದೆ. ಆಪ್ಸ್ ಮತ್ತು ಹಲವು ಜಾಲತಾಣಗಳು ವರ್ಚ್ಯುಯಲ್ ಥೆರೆಪಿಗಳನ್ನು ಒದಗಿಸುತ್ತಿವೆ. ಒತ್ತಡ ಮತ್ತು ಮಾನಸಿಕ ಯೋಗಕ್ಷೇಮವನ್ನು ನಿರ್ವಹಿಸಲು ಮೂಡ್ ಟ್ರ್ಯಾಕಿಂಗ್ ಅನಿವಾರ್ಯ ಸಾಧನವಾಗಿದೆ. ತಕ್ಷಣದ ನೆರವು ಹಾಗೂ ಒಳನೋಟಗಳನ್ನು ನೀಡುವ ಮೂಲಕ ಕೃತಕ ಬುದ್ಧಿಮತ್ತೆ, ವ್ಯಕ್ತಿಗೆ ಅನುಗುಣವಾದ ಮಾನಸಿಕ ಆರೋಗ್ಯ ಪರಿಹಾರಗಳನ್ನು ಕಂಡುಕೊಳ್ಳುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ,
3. ಸುಸ್ಥಿರ ಸ್ವಾಸ್ಥ್ಯ ಅಭ್ಯಾಸಗಳು: ಸುಸ್ಥಿರತೆ ಕ್ಷೇಮದ ಆಚೆಗೂ ವಿಸ್ತರಿಸಿ, ವೈಯಕ್ತಿಕ ಆರೋಗ್ಯ, ಪರಿಸರ ಮತ್ತು ಸಾಮಾಜಿಕ ಪರಿಣಾಮಗಳಿಗೂ ಪ್ರಮುಖ ಅಂಶವಾಗಿದ್ದು, ಆರೋಗ್ಯ ಪರಿಸರ ಸ್ನೇಹಿ ಉತ್ಪನ್ನಗಳು, ಸುಸ್ಥಿರ ಜೀವನ ಪದ್ಧತಿಗಳು ಪ್ರಾಮುಖ್ಯತೆಯನ್ನು ಪಡೆಯುತ್ತವೆ.
4. ಸಮಗ್ರ ಆರೋಗ್ಯ ವಿಧಾನಗಳು: ಸಾಂಪ್ರದಾಯಿಕ ಮತ್ತು ಪರ್ಯಾಯ ಚಿಕಿತ್ಸೆಗಳ ಸಂಯೋಜನೆ ಚಾಲ್ತಿಯಲ್ಲಿರುವ ಮತ್ತೊಂದು ಟ್ರೆಂಡ್. ಸಾಂಪ್ರದಾಯಿಕ ಔಷಧವನ್ನು ಅಕ್ಯುಪಂಕ್ಚರ್, ಗಿಡಮೂಲಿಕೆ ಪರಿಹಾರಗಳು ಮತ್ತು ಸಾವಧಾನತೆ-ಆಧಾರಿತ ಅಭ್ಯಾಸಗಳೊಂದಿಗೆ ಸಂಯೋಜಿಸಿ, ವ್ಯಕ್ತಿಗಳು ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಸಂಯೋಜಿತ ಮಾದರಿಯು ಆರೋಗ್ಯ ಸಮಸ್ಯೆಗಳ ರೋಗಲಕ್ಷಣಗಳು ಮತ್ತು ಆಧಾರವಾಗಿರುವ ಕಾರಣಗಳನ್ನು ಪರಿಹರಿಸುವ ಗುರಿ ಹೊಂದಿದೆ.
5. ಡಿಜಿಟಲ್ ಡಿಟಾಕ್ಸ್ ಮತ್ತು ತಂತ್ರಜ್ಞಾನದ ಜಾಗರೂಕ ಬಳಕೆ: ದೈನಂದಿನ ಜೀವನದಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುವುದನ್ನು ಮುಂದುವರೆಸುತ್ತಿದೆ. ಡಿಜಿಟಲ್ ಡಿಟಾಕ್ಸ್ ಮತ್ತು ತಂತ್ರಜ್ಞಾನವನ್ನು ಜಾಗರೂಕವಾಗಿ ಬಳಕೆ ಮಾಡುವ ಅಗತ್ಯತೆಯ ಅರಿವು ಹೆಚ್ಚುತ್ತಿದೆ. ಗ್ಯಾಡ್ಜೆಟ್ ಬಳಕೆಯ ಸಮಯದ ಮಿತಿಗಳನ್ನು ಅಳವಡಿಸಿಕೊಳ್ಳುವುದು, ಟೆಕ್-ಮುಕ್ತ ವಿರಾಮಗಳು, ಮತ್ತು ಡಿಜಿಟಲ್ ಯೋಗಕ್ಷೇಮವನ್ನು ಪೋಷಿಸುವಂತಹ ಅಭ್ಯಾಸಗಳು ಡಿಜಿಟಲ್ (ವರ್ಚ್ಯುಯಲ್) ಪ್ರಪಂಚ ಮತ್ತು ನಿಜ-ಜೀವನದ ಅನುಭವಗಳ ನಡುವೆ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.
ಇದನ್ನೂ ಓದಿ: ಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ ಅತಿಮುಖ್ಯ: ಜೀವನಶೈಲಿ ಹೇಗಿರಬೇಕು? ಇಲ್ಲಿದೆ ಮಾಹಿತಿ
6. ಟೆಲಿಹೆಲ್ತ್ ವಿಕಸನ: ಟೆಲಿಹೆಲ್ತ್ ವಿಕಸನಗೊಳ್ಳುತ್ತಲೇ ಇದೆ, ಹೆಚ್ಚು ಸಮಗ್ರ ಮತ್ತು ಸುಲಭ ಆರೋಗ್ಯ ಸೇವೆಗಳನ್ನು ಟೆಲಿ ಹೆಲ್ತ್ ಒದಗಿಸುತ್ತದೆ. ವರ್ಚುವಲ್ ಸಮಾಲೋಚನೆಗಳು, ರಿಮೋಟ್ ಮಾನಿಟರಿಂಗ್ ಮತ್ತು ಡಿಜಿಟಲ್ ಆರೋಗ್ಯ ತಾಣಗಳು ವ್ಯಕ್ತಿಗಳಿಗೆ ಪರಿಣಿತ ವೈದ್ಯಕೀಯ ಸೇವೆಗಳನ್ನು ಪಡೆಯಲು ಹೆಚ್ಚು ಆಯ್ಕೆಗಳನ್ನು ಒದಗಿಸುತ್ತವೆ, ಮುನ್ನೆಚ್ಚರಿಕೆ ದೃಷ್ಟಿಯಿಂದ ಆರೋಗ್ಯ ನಿರ್ವಹಣೆಯನ್ನು ಉತ್ತೇಜಿಸುತ್ತವೆ.
7. ಸಮುದಾಯ ಯೋಗಕ್ಷೇಮ ಉಪಕ್ರಮಗಳು: ಯೋಗಕ್ಷೇಮವು ವೈಯಕ್ತಿಕ ಅಭ್ಯಾಸಗಳನ್ನು ಮೀರಿ ಸಮುದಾಯ-ಕೇಂದ್ರಿತ ಉಪಕ್ರಮಗಳಿಗೆ ವಿಸ್ತರಿಸುತ್ತದೆ. ಸಮುದಾಯ ಉದ್ಯಾನಗಳು, ಫಿಟ್‌ನೆಸ್ ಚಟುವಟಿಕೆಗಳು ಮತ್ತು ಮಾನಸಿಕ ಆರೋಗ್ಯ ಜಾಗೃತಿ ಅಭಿಯಾನಗಳಂತಹ ನೆರವು ಲಭ್ಯವಿರುವ ಪರಿಸರವನ್ನು ರಚಿಸಲು ಸಾಮೂಹಿಕ ಪ್ರಯತ್ನಗಳು ಒಟ್ಟಾರೆ ಆರೋಗ್ಯಕ್ಕೆ ಜವಾಬ್ದಾರಿ ಪ್ರಜ್ಞೆಗೆ ಕೊಡುಗೆ ನೀಡುತ್ತವೆ.
8. ಸ್ಲೀಪ್ ಆಪ್ಟಿಮೈಸೇಶನ್: ನಿದ್ರೆಯ ಗುಣಮಟ್ಟ ಯೋಗಕ್ಷೇಮದ ಮೂಲಾಧಾರ. ನಿದ್ರೆಯ ಅವಧಿಯ ಕುರಿತು ಸಾಂಪ್ರದಾಯಿಕ ಪದ್ಧತಿಗಳಿಂದ ಗಮನ ಹರಿಸುವುದನ್ನು ಮೀರಿ, ನಿದ್ರೆಯ ಗುಣಮಟ್ಟವನ್ನು ಅತ್ಯುತ್ತಮವಾಗಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಲಗುವ ಸಮಯವನ್ನು ನಿಗದಿಗೊಳಿಸುವುದು ಮತ್ತು ವ್ಯಕ್ತಿಗತ ನಿದ್ದೆಯ ಟ್ರ್ಯಾಕಿಂಗ್ ಮತ್ತು ಸುಧಾರಣೆ ತಂತ್ರಗಳಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವುದನ್ನು ಒಳಗೊಂಡಿರುತ್ತದೆ.
ಡಾ ನಿತಿ ಕೃಷ್ಣ ರೈಝಾದ
(ಲೇಖಕರು ಹಿರಿಯ ನಿರ್ದೇಶಕರು, ಫೋರ್ಟಿಸ್ ಗ್ರೂಪ್ ಆಫ್ ಹಾಸ್ಪಿಟಲ್ಸ್, ರಿಚ್ಮಂಡ್ ರೋಡ್ ನ ವೈದ್ಯಕೀಯ ಆಂಕೊಲಾಜಿಸ್ಟ್ ಮತ್ತು ಹೆಮಾಟೊ-ಆಂಕೊಲಾಜಿಸ್ಟ್,)

ಇದನ್ನೂ ಓದಿ:ಮಕ್ಕಳ ಬೆಳವಣಿಗೆಗೆ ಆಹಾರ ಕ್ರಮ ಅತಿಮುಖ್ಯ: ಜೀವನಶೈಲಿ ಹೇಗಿರಬೇಕು? ಇಲ್ಲಿದೆ ಮಾಹಿತಿ