ಫೋಟೋದಲ್ಲಿ ಇಂಜೆಕ್ಷನ್ ಕಾಣ್ತಿಲ್ಲ! ಲಸಿಕೆ ತೆಗೆದುಕೊಂಡಂತೆ ಖಾಲಿ ಪೋಸ್ ಕೊಟ್ರಾ ನಯನತಾರಾ?

ನಟಿ ನಯನತಾರಾ ಲಸಿಕೆ ಪಡೆದ ಫೋಟೋಗಳು ಯದ್ವಾತದ್ವಾ ಟ್ರೋಲ್ ಆಗಿದೆ. ಅದಕ್ಕೆ ಕಾರಣ ಫೋಟೋದಲ್ಲಿ ನಯನತಾರಾಗೆ ಲಸಿಕೆ ನೀಡುತ್ತಿರುವ ನರ್ಸ್ ಕೈಯಲ್ಲಿ ಇಂಜೆಕ್ಷನ್ ಕಾಣ್ತಿಲ್ಲ! ಹೀಗಾಗಿ, ನಯನತಾರಾ ನಿಜವಾಗಿಯೂ ಕೋವಿಡ್ ಲಸಿಕೆ ಪಡೆದಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಫೋಟೋದಲ್ಲಿ ಇಂಜೆಕ್ಷನ್ ಕಾಣ್ತಿಲ್ಲ! ಲಸಿಕೆ ತೆಗೆದುಕೊಂಡಂತೆ ಖಾಲಿ ಪೋಸ್ ಕೊಟ್ರಾ ನಯನತಾರಾ?
Linkup
ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಕೋವಿಡ್ ಲಸಿಕೆಯನ್ನು ಪಡೆದಿದ್ದರು. ಚೆನ್ನೈನ ಆಸ್ಪತ್ರೆಯಲ್ಲಿ ಭಾವಿ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ನಯನತಾರಾ ಲಸಿಕೆಯ ಮೊದಲ ಡೋಸ್‌ಅನ್ನು ಸ್ವೀಕರಿಸಿದ್ದರು. ಲಸಿಕೆ ಪಡೆದ ನಯನತಾರಾ ಹಾಗೂ ತಮ್ಮ ಫೋಟೋಗಳನ್ನು ವಿಘ್ನೇಶ್ ಶಿವನ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿದ್ದರು. ಜೊತೆಗೆ ''ಪ್ಲೀಸ್ ಪ್ಲೀಸ್ ಲಸಿಕೆ ಹಾಕಿಸಿಕೊಳ್ಳಿ'' ಅಂತ ಜನರಲ್ಲಿ ಮನವಿ ಮಾಡಿದ್ದರು. ಆದ್ರೀಗ, ವಿಘ್ನೇಶ್ ಶಿವನ್ ಹಂಚಿಕೊಂಡಿದ್ದ ನಯನತಾರಾ ಲಸಿಕೆ ಪಡೆದ ಫೋಟೋಗಳು ಯದ್ವಾತದ್ವಾ ಟ್ರೋಲ್ ಆಗಿದೆ. ಅದಕ್ಕೆ ಕಾರಣ ಫೋಟೋದಲ್ಲಿ ನಯನತಾರಾಗೆ ಲಸಿಕೆ ನೀಡುತ್ತಿರುವ ನರ್ಸ್ ಕೈಯಲ್ಲಿ ಇಂಜೆಕ್ಷನ್ ಕಾಣ್ತಿಲ್ಲ! ಹೀಗಾಗಿ, ನಯನತಾರಾ ನಿಜವಾಗಿಯೂ ಪಡೆದಿಲ್ಲ. ಪಡೆದಂತೆ ನಟಿಸಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ವಾದಿಸುತ್ತಿದ್ದಾರೆ. ನಯನತಾರಾ ಫೋಟೋಗಳು ವ್ಯಾಪಕ ಟ್ರೋಲ್ ಆದ ಬೆನ್ನಲ್ಲೇ ನಯನತಾರಾ ತಂಡ ಸ್ಪಷ್ಟನೆ ಕೊಟ್ಟಿದೆ. ನರ್ಸ್ ಕೈಯಲ್ಲಿ ಇಂಜೆಕ್ಷನ್ ಇದೆ. ಕೋವಿಡ್ ಲಸಿಕೆಯನ್ನು ನಯನತಾರಾ ಪಡೆದಿದ್ದಾರೆ ಎಂದು 'ಟೀಮ್ ನಯನತಾರಾ' ಸ್ಪಷ್ಟ ಪಡಿಸಿದೆ. 'ಟೀಮ್ ನಯನತಾರಾ' ಸ್ಪಷ್ಟ ಪಡಿಸಿರುವ ಬಗ್ಗೆ ರಮೇಶ್ ಬಾಲಾ ಕೂಡ ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಕೂಡ ಹಲವರು ಲಸಿಕೆ ಪಡೆದಂತೆ ಫೋಟೋ ಕ್ಲಿಕ್ ಮಾಡಿಕೊಂಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದವು. ಇದೀಗ ಅದೇ ರೀತಿ ನಯನತಾರಾ ಫೋಟೋ ಟ್ರೋಲಿಗರಿಗೆ ಆಹಾರವಾಗಿದೆ.