'ರಾಜಾ ಸೀಟ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಹಾರೈಸಿದ 'ನವರಸ ನಾಯಕ' ಜಗ್ಗೇಶ್‌

'ನವರಸ ನಾಯಕ' ಜಗ್ಗೇಶ್ ಸದಾ ಹೊಸಬರಿಗೆ ಸಾಥ್ ನೀಡುತ್ತಾರೆ. ಈಚೆಗೆ ಅವರು ಹೊಸದೊಂದು ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿ, ಆ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

'ರಾಜಾ ಸೀಟ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಹಾರೈಸಿದ 'ನವರಸ ನಾಯಕ' ಜಗ್ಗೇಶ್‌
Linkup
ಚೊಚ್ಚಲ ಬಾರಿಗೆ ಶ್ರೀರಾಮ್‌ ಕಥೆ, ಬರೆದು ನಿರ್ಮಾಣ ಮಾಡುತ್ತಿರುವ 'ರಾಜಾ ಸೀಟ್‌' ಸಿನಿಮಾಗೆ ನವರಸ ನಾಯಕ ಜಗ್ಗೇಶ್‌ ಅವರ ಆಶೀರ್ವಾದ ಸಿಕ್ಕಿದೆ. ಚಿತ್ರದ ಫಸ್ಟ್ ಲುಕ್ ಲಾಂಚ್ ಮಾಡಿ, 'ಆತ್ಮೀಯ ಸಹೋದರ ಶ್ರೀರಾಮ್ ಅವರ ಈ ಸಿನಿಮಾ ಯಶಸ್ವಿಯಾಗಿ ಕನ್ನಡಕ್ಕೆ ಒಳ್ಳೆಯ ಚಿತ್ರವಾಗಲಿ...' ಎಂದು ಅವರು ಹಾರೈಸಿದ್ದಾರೆ. ನಟಿ ಮೇಘನಾ ರಾಜ್‌ಗೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ 'ಇರುವುದೆಲ್ಲವ ಬಿಟ್ಟು'. ಈ ಸಿನಿಮಾ ಬಿಡುಗಡೆಯಾದಾಗ ನಿರ್ದೇಶಕ ಅವರ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಇದೇ ಕಾಂತ ಕನ್ನಲಿ ಈಗ 'ರಾಜಾ ಸೀಟ್‌' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಾಜಾ ಸೀಟ್‌ ಎಂದ ಕೂಡಲೇ ನಮಗೆ ಮಡಿಕೇರಿ ಜ್ಞಾಪಕ ಬರುತ್ತದೆ. ಆದರೆ ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. 'ನಾನು ಬೇರೆ ಒಂದು ಪ್ರಾಜೆಕ್ಟ್‌ಗೆ ಸಿದ್ಧತೆ ನಡೆಸಿದ್ದ ಹೊತ್ತಿನಲ್ಲಿ ಶ್ರೀರಾಮ್‌ ಅವರು ಕಥೆ ಹೇಳಿದರು. ಲೈನ್‌ ಬಹಳ ಇಷ್ಟವಾಯಿತು. ವಿಶೇಷ ಎಂದರೆ ಒಟಿಟಿ ಆಡಿಯನ್ಸ್‌ಗೆ ಈ ಸಿನಿಮಾದ ಕಥೆ ಇಷ್ಟವಾಗುತ್ತದೆ ಎನಿಸಿತು. ಸಸ್ಪೆನ್ಸ್‌ ಥ್ರಿಲ್ಲರ್‌ ಮಾದರಿಯ ಕಥೆ. ಹಗರಣಗಳು ಸಹ ನಡೆಯುತ್ತವೆ' ಎಂದು ಹೇಳಿದರು ನಿರ್ದೇಶಕ ಕಾಂತ. 'ಯುವಕರು ಆಸೆ, ದುರಾಸೆಗಳ ನಡುವೆ ಸಿಲುಕಿಕೊಂಡು ಹಗರಣಗಳನ್ನು ಮಾಡಲು ಹೊರಡುತ್ತಾರೆ. ಆಗ ಅದರೊಳಗೆ ಸಿಕ್ಕಿದಾಗ ಬದುಕು ಹೇಗಾಗುತ್ತದೆ ಎಂಬುದನ್ನು ಹೇಳುತ್ತಿದ್ದೇವೆ. ರಾಜಾ ಸೀಟ್‌ ಎಂಬ ಟೈಟಲ್‌ ಕಥೆಗೆ ಬಹಳ ಹೊಂದಿಕೆಯಾಗುತ್ತದೆ. ರಾಜನ ಸೀಟ್‌ಗೆ ಹೋಗಲು ಎಷ್ಟು ಕಷ್ಟವಾಗುತ್ತದೆ, ಅಲ್ಲಿಗೆ ಹೋದ ಮೇಲೆ ಏನಾಗುತ್ತದೆ ಎಂಬುದನ್ನು ಟೈಟಲ್‌ ಸೂಚಿಸುತ್ತದೆ' ಎಂದು ಮಾಹಿತಿ ನೀಡಿದರು ನಿರ್ದೇಶಕರು. ಆರ್ವ ಈ ಸಿನಿಮಾದ ನಾಯಕರಾಗಿ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರಗಳಿಗಾಗಿ ರಘು ಮುಖರ್ಜಿ ಮತ್ತು ಅನು ಪ್ರಭಾಕರ್‌ ಅವರ ಬಳಿ ಮಾತನಾಡುತ್ತಿದ್ದೇವೆ. ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭ ವಾಗಲಿದೆ. ದುಬೈಯಲ್ಲಿಯೂ ಚಿತ್ರೀಕರಣ ನಡೆಯುತ್ತದೆ ಎಂದು ಮಾಹಿತಿ ನೀಡುತ್ತದೆ ಚಿತ್ರತಂಡ. ಮುಂದಿನ ಹಂತದಲ್ಲಿ ಚಿತ್ರದಲ್ಲಿ ಯಾರೆಲ್ಲ ಕೆಲಸ ಮಾಡುತ್ತಿದ್ದಾರೆ, ಯಾವೆಲ್ಲ ಕಲಾವಿದರಿದ್ದಾರೆ ಎಂಬ ಮಾಹಿತಿ ನೀಡಲಿದೆ ಚಿತ್ರತಂಡ.