Puneeth Rajkumar-Ashwini: ಅಪ್ಪು-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ! ಅಪ್ಪು ಇದ್ದಿದ್ದರೆ...

ಕ್ರೂರ ವಿಧಿ ಅಟ್ಟಹಾಸ ಮೆರೆಯದೆ ಹೋಗಿದ್ದರೆ… ಅದೃಷ್ಟ ಕೈಕೊಡದೇ ಹೋಗಿದ್ದರೆ… ಇಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ತಮ್ಮ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುತ್ತಿದ್ದರು.

Puneeth Rajkumar-Ashwini: ಅಪ್ಪು-ಅಶ್ವಿನಿ ದಾಂಪತ್ಯಕ್ಕೆ 22 ವರ್ಷ! ಅಪ್ಪು ಇದ್ದಿದ್ದರೆ...
Linkup
ಕ್ರೂರ ವಿಧಿ ಅಟ್ಟಹಾಸ ಮೆರೆಯದೆ ಹೋಗಿದ್ದರೆ… ಅದೃಷ್ಟ ಕೈಕೊಡದೇ ಹೋಗಿದ್ದರೆ… ಇಂದು ಪವರ್ ಸ್ಟಾರ್ ಮತ್ತು ಅಶ್ವಿನಿ ತಮ್ಮ 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುತ್ತಿದ್ದರು. ಆದರೆ, ದುರ್ವಿಧಿಯ ಲೆಕ್ಕಾಚಾರವೇ ಬೇರೆ ಆಗಿತ್ತು. ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ಪುನೀತ್ ರಾಜ್‌ಕುಮಾರ್ ದಿಢೀರನೆ ತೆರಳೇಬಿಟ್ಟರು. ಇಂದು ಪುನೀತ್ ರಾಜ್‌ಕುಮಾರ್ - ಅಶ್ವಿನಿಗೆ 22ನೇ ವರ್ಷದ ವಿವಾಹ ವಾರ್ಷಿಕೋತ್ಸವ ಡಿಸೆಂಬರ್ 1, 2021.. ಇಂದು ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 22 ವರ್ಷಗಳು ಉರುಳಿವೆ. ಅನ್ಯೋನ್ಯವಾಗಿ.. ಇತರರಿಗೆ ಮಾದರಿ ದಂಪತಿಯಾಗಿ ಇಷ್ಟು ದಿನ ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಜೀವನ ಸಾಗಿಸಿದ್ದರು. ತಮ್ಮ 22ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲೇ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರು. ತಮ್ಮ ಪ್ರೀತಿಯ ಪತಿ, ಮನದೊಡೆಯ ಪುನೀತ್ ಇಲ್ಲದೆ ಇಂದಿನ ವಿವಾಹ ವಾರ್ಷಿಕೋತ್ಸವದ ಸಂದರ್ಭದಂದು ಪತ್ನಿ ಅಶ್ವಿನಿ ಮಂಕಾಗಿದ್ದಾರೆ. ಪ್ರೀತಿಸಿ, ಮದುವೆಯಾಗಿದ್ದ ಪುನೀತ್ ರಾಜ್‌ಕುಮಾರ್ - ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ರೇವಂತ್‌ರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಅಶ್ವಿನಿರನ್ನ ಪುನೀತ್ ರಾಜ್‌ಕುಮಾರ್ ಮೊದಲು ನೋಡಿದ್ದು ಜಿಮ್‌ನಲ್ಲಿ. ಅಲ್ಲಿಂದ ಪರಿಚಯವಾದ ಇವರಿಬ್ಬರ ಮಧ್ಯೆ ಸ್ನೇಹ ಚಿಗುರಿತು. ಅಶ್ವಿನಿ ಮೇಲೆ ಪುನೀತ್‌ ಹೃದಯದಲ್ಲಿ ಪ್ರೀತಿ ಮೊಳಕೆಯೊಡೆಯಿತು. ಅಶ್ವಿನಿ ಅವರಿಗೆ ಪುನೀತ್ ಅವರೇ ಲವ್ ಪ್ರಪೋಸ್ ಮಾಡಿದರು. ಬಳಿಕ ಕುಟುಂಬಸ್ಥರ ಸಮ್ಮತಿ ಪಡೆದು ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಡಿಸೆಂಬರ್ 1, 1999 ರಂದು ಗುರು-ಹಿರಿಯರ ಸಮ್ಮುಖದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ವೈವಾಹಿಕ ಬದುಕಿಗೆ ನಾಂದಿ ಹಾಡಿದರು. ಪುನೀತ್ ಸಿಂಪ್ಲಿಸಿಟಿ ಇಷ್ಟ! ಅಶ್ವಿನಿ ರೇವಂತ್ ಮೂಲತಃ ಚಿಕ್ಕಮಗಳೂರಿನವರು. ಅಣ್ಣಾವ್ರು ಡಾ.ರಾಜ್‌ಕುಮಾರ್ ಪುತ್ರ ಪುನೀತ್ ರಾಜ್‌ಕುಮಾರ್ ಅವರ ಸಿಂಪ್ಲಿಸಿಟಿ ಗುಣ ಅಶ್ವಿನಿ ರೇವಂತ್‌ಗೆ ತುಂಬಾ ಇಷ್ಟವಾಯ್ತಂತೆ. ‘’ಪುನೀತ್ ಅವರ ಸರಳತೆ ಮತ್ತು ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವದಿಂದ ನಾನು ಅವರನ್ನು ಇಷ್ಟ ಪಟ್ಟಿತ್ತೆ’’ ಎಂದು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಶ್ವಿನಿ - ಪುನೀತ್ ದಂಪತಿಗೆ ಇಬ್ಬರು ಮಕ್ಕಳು ಅಶ್ವಿನಿ ಮತ್ತು ಪುನೀತ್ ರಾಜ್‌ಕುಮಾರ್ ದಂಪತಿಗೆ ದ್ರಿತಿ ಮತ್ತು ವಂದಿತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ದ್ರಿತಿ ನ್ಯೂರ್ಯಾಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೆ, ಕಿರಿಯ ಪುತ್ರಿ ವಂದಿತಾ ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದಾರೆ. ಅಕ್ಟೋಬರ್ 29 ರಂದು ಪುನೀತ್ ನಿಧನ ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಹಠಾತ್ ಸಾವನ್ನಪ್ಪಿದರು. ತೀವ್ರ ಹೃದಯಾಘಾತ ಹಾಗೂ ಹೃದಯಸ್ತಂಭನದಿಂದ ಪುನೀತ್ ರಾಜ್‌ಕುಮಾರ್ ವಿಧಿವಶರಾದರು. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದಿಂದ ಇಡೀ ಕರುನಾಡೇ ಶೋಕಸಾಗರದಲ್ಲಿ ಮುಳುಗಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಭೂಮಿ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ.