613 ಅಂಕಗಳ ಏರಿಕೆಯೊಂದಿಗೆ ಮತ್ತೆ 50 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್‌

ಸತತ ಮೂರನೇ ದಿನ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ದಾಖಲಿಸಿದ್ದು, ಬಾಂಬೆ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 613 ಅಂಕಗಳ ಏರಿಕೆಯೊಂದಿಗೆ 50,193ಕ್ಕೆ ತಲುಪಿದೆ.

613 ಅಂಕಗಳ ಏರಿಕೆಯೊಂದಿಗೆ ಮತ್ತೆ 50 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್‌
Linkup
ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗುತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸತತ ಮೂರನೇ ದಿನ ಸೂಚ್ಯಂಕಗಳು ಏರಿಕೆ ದಾಖಲಿಸಿವೆ. ಬಾಂಬೆ ಷೇರು ವಿನಿಮಯ ಮಾರುಕಟ್ಟೆ ಸೂಚ್ಯಂಕ ಮಂಗಳವಾರ 613 ಅಂಕ ಏರಿಕೆ ಕಂಡಿದ್ದು 50,193ಕ್ಕೆ ತಲುಪಿದೆ. ಈ ಮೂಲಕ ಮತ್ತೆ 50,000 ಅಂಕಗಳ ಗಡಿ ದಾಟಿದೆ. ಕೂಡ 185 ಅಂಕ ಅಥವಾ ಶೇ. 1.24ರಷ್ಟು ಏರಿಕೆಯಾಗಿದ್ದು ಮತ್ತೆ 15 ಸಾವಿರ ಅಂಕಗಳ ಗಡಿ ದಾಟಿ 15,108 ಅಂಕಗಳಿಗೆ ತಲುಪಿದೆ. ಬಿಎಸ್‌ಇನಲ್ಲಿ ಮಹೀಂದ್ರಾ ಆಂಡ್‌ ಮಹೀಂದ್ರಾ, ಬಜಾಜ್‌ ಆಟೋ, ಟೈಟಾನ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಪವರ್‌ ಗ್ರಿಡ್‌ ಷೇರುಗಳು ಶೇ. 5.91ರಷ್ಟು ಏರಿಕೆ ಕಂಡವು. ಸೂಚ್ಯಂಕ ಮೇಲೇರಿದ ಪರಿಣಾಮ ಹೂಡಿಕೆದಾರರ ಹೂಡಿಕೆ ಮೌಲ್ಯ 2.8 ಲಕ್ಷ ಕೋಟಿ ಹೆಚ್ಚಾಗಿದ್ದು, ಬಿಎಸ್‌ಇನಲ್ಲಿರುವ ಕಂಪನಿಗಳ ಮಾರುಕಟ್ಟೆ ಮೌಲ್ಯ 216.44 ಲಕ್ಷ ಕೋಟಿ ರೂ. ತಲುಪಿದೆ. ನಿಫ್ಟಿಯಲ್ಲಿ ಎಫ್‌ಎಂಸಿಜಿ, ಫಾರ್ಮಾ, ಪಿಎಸ್‌ಯು ಬ್ಯಾಂಕ್ ಷೇರುಗಳು ಏರಿಕೆ ದಾಖಲಿಸಿದವು. ಆಟೋ ಮೊಬೈಲ್‌ ಷೇರುಗಳಂತೂ ಶೇ. 3.22ರವರೆಗೆ ಗರಿಷ್ಠ ಏರಿಕೆ ಕಂಡಿತು. ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ದಾಖಲಾಗುತ್ತಿರುವುದರಿಂದ ಹೂಡಿಕೆದಾರರ ಭಾವನೆಗಳು ಧನಾತ್ಮಕವಾಗಿವೆ. ಪರಿಣಾಮ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆಯಾಗುತ್ತಲೇ ಸಾಗಿವೆ. ಸೋಮವಾರದ ವಹಿವಾಟಿನಲ್ಲಿಯೂ ಸೆನ್ಸೆಕ್ಸ್‌ 848 ಅಂಕ ಹಾಗೂ ನಿಫ್ಟಿ 245 ಅಂಕ ಏರಿಕೆ ಕಂಡಿತ್ತು.