ಹೊಸದಿಲ್ಲಿ: ಕ್ರಿಪ್ಟೋಕರೆನ್ಸಿಗಳಿಗೆ ಭೌತಿಕ ಅಸ್ತಿತ್ವವಿಲ್ಲ. ಜತೆಗೆ ಇವುಗಳ ಮೌಲ್ಯದಲ್ಲೂ ಭಾರೀ ಏರಿಳಿತ ಕಾಣುತ್ತಿದೆ. ಈ ಎಲ್ಲ ಲೋಪಗಳ ಹೊರತಾಗಿಯೂ ಕ್ರಿಪ್ಟೋಕರೆನ್ಸಿಗಳು ಸಂಪತ್ತನ್ನು ಸೃಷ್ಟಿಸಲು ಸಹಕಾರಿಯಾಗಬಲ್ಲವು. ಅತಿ ಕಡಿಮೆ ಅವಧಿಯಲ್ಲೇ ಹೆಚ್ಚು ಲಾಭ ಗಳಿಸಬಹುದಾಗಿದೆ. ಹೇಗಂತೀರಾ? ಇಲ್ಲಿದೆ ಸಮಗ್ರ ಮಾಹಿತಿ.
ಕ್ರಿಪ್ಟೋಕರೆನ್ಸಿಗಳಲ್ಲಿ ದೀರ್ಘಾವಧಿಯ ಹೂಡಿಕೆ ಮಾಡಿದರೆ ನಿರೀಕ್ಷಿತ ಲಾಭ ಪಡೆಯಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಅಮೆರಿಕ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳಲ್ಲೂ ಮೇಲೆ ಹೂಡಿಕೆ ಮಾಡುವವರು ಹೆಚ್ಚಿದ್ದಾರೆ. ಅದರಲ್ಲೂ ಅಭಿವೃದ್ದಿಶಿಲ ರಾಷ್ಟ್ರಗಳಲ್ಲೇ ಕ್ರಿಪ್ಟೋ ನಾಣ್ಯಗಳ ಬಳಕೆದಾರರು ಹೆಚ್ಚು. ಚಿಕಾಗೊ ವಿಶ್ವವಿದ್ಯಾಲಯದ NORC ಯ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಕಳೆದ ವರ್ಷದಲ್ಲಿ ಸುಮಾರು 13% ಅಮೆರಿಕನ್ನರು ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಿದ್ದಾರೆ. ಇದೇ ಮಂದಿ ಅದೇ ಸಮಯದಲ್ಲಿ ಷೇರು ಮಾರುಕಟ್ಟೆಯಲ್ಲೂ ಶೇ. 24ರಷ್ಟು ವಹಿವಾಟು ನಡೆಸಿದ್ದಾರೆ.
ಇತ್ತೀಚೆಗೆ ಎಲ್ಲ ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಭಾರೀ ಏರಿಳಿತ ಉಂಟಾಗಿದೆ. ಆದರೆ, ಕಳೆದ ಒಂದು ವರ್ಷದ ಸರಾಸರಿ ಬೆಲೆ ಏರಿಕೆಯನ್ನು ಗಮನಿಸಿದರೆ, ಹಲವು ಪಟ್ಟು ಮೌಲ್ಯ ಹೆಚ್ಚಿಸಿಕೊಂಡಿವೆ. ಕ್ರಿಪ್ಟೋ ಕರೆನ್ಸಿಗಳ ನಾಯಕ ಎನಿಸಿರುವ ಕಳೆದ ಏಪ್ರಿಲ್‌ನಲ್ಲಿ 63 ಸಾವಿರ ಡಾಲರ್ ತಲುಪಿತ್ತು. ಆದರೆ, ಪ್ರಸ್ತುತ 40 ಸಾವಿರ ಡಾಲರ್ ಆಸುಪಾಸಿಗೆ ಕುಸಿದಿದೆ. ಆದರೂ ಕೂಡ ಕಳೆದ ಒಂದು ವರ್ಷದಲ್ಲಿ ಸರಾಸರಿ ಮೌಲ್ಯದಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ.
ಹೊಸ ಹೂಡಿಕೆದಾರರಿಗೆ ಹಲವು ಈ ಕುರಿತು ಅರಿವು ಮೂಡಿಸಲೆಂದೇ ಹಲವು ಆನ್‌ಲೈನ್ ವೇದಿಕೆಗಳಿವೆ. ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿ ಕೂಡ ಡಿಜಿಟಲ್ ಕರೆನ್ಸಿಗಳ ಮೇಲೆ ಹೇಗೆ ಹೂಡಿಕೆ ಮಾಡಬೇಕು ಎಂಬ ಮಾರ್ಗದರ್ಶನ ಲಭ್ಯ. ಈ ಮೂಲಕ ಹೂಡಿಕೆದಾರರು ಯಾವ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಲಾಭದಾಯಕ ಎಂಬುದನ್ನು ತಿಳಿಯಲೇಬೇಕು. ಇದನ್ನು ತಿಳಿಯದೆ ಸಿಕ್ಕಸಿಕ್ಕ ಕ್ರಿಪ್ಟೋ ನಾಣ್ಯಗಳಲ್ಲಿ ಹೂಡಿಕೆ ಮಾಡಿದರೆ ನಷ್ಟ ಅನುಭವಿಸುವ ಸಾಧ್ಯತೆಯೂ ಇರುತ್ತದೆ.
ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಮೊದಲು ನಾವು ನಮ್ಮ ಹಣವನ್ನು ಸರಿಯಾದ ರೀತಿಯಲ್ಲಿ ಯೋಜಿಸಬೇಕಾಗುತ್ತದೆ. ತುರ್ತು ಉಳಿತಾಯದ ಜತೆಗೆ ದೀರ್ಘಾವಧಿಯ ಹೂಡಿಕೆಯೂ ಸಾಧ್ಯವಾಗುವಂತೆ ಹಣ ಹೊಂದಿಸಬೇಕಾಗುತ್ತದೆ.
ಬಹುತೇಕ ಮಾರುಕಟ್ಟೆ ತಜ್ಞರು ಕ್ರಿಪ್ಟೋಕರೆನ್ಸಿಗಳ ಮೌಲ್ಯದಲ್ಲಿ ಆಗುವ ಏರುಪೇರುಗಳಿಂದ ಈಗಲೂ ವಿಚಲಿತರಾಗುತ್ತಿದಾರೆ. ಹೀಗಾಗಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಬೇಕೆಂದರೆ, ತಂತ್ರಜ್ಞಾನದ ಬಗೆಗಿನ ಜ್ಞಾನ ಹೊಂದಿರಬೇಕು. ಕ್ರಿಪ್ಟೋ ಮಾರುಕಟ್ಟೆಯಲ್ಲಿ ಏರಿಳಿತಗಳನ್ನು ಅರಿಯುವಷ್ಟಾದರೂ ಈ ಕ್ಷೇತ್ರದ ಬಗೆಗೆ ಜ್ಞಾನ ಹೊಂದಿರಬೇಕು. ಹೀಗಾದಾದ ಯಾವ ಕ್ರಿಪ್ಟೋ ನಾಣ್ಯ ಉತ್ತಮವಾಗಿದೆ ಎಂದು ಕಂಡುಕೊಳ್ಳಬಹುದು. ಈ ಮೂಲಕ ಹೆಚ್ಚು ಲಾಭ ಗಳಿಸಬಹುದು.
ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೂ, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದಕ್ಕೂ ಹೆಚ್ಚೇನು ವ್ಯತ್ಯಾಸವಿಲ್ಲ. ಕ್ರಿಪ್ಟೋ ವಲಯದಲ್ಲಿಯೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಕೆಲವು ನಿಯಮಗಳು ಅನ್ವಯಿಸುತ್ತವೆ. ಹೂಡಿಕೆ ಮಾಡುವಾಗ ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅಥವಾ ಕ್ರಿಪ್ಟೋ ನಾಣ್ಯಗಳ ಮೌಲ್ಯದಲ್ಲಿ ಭಾರೀ ಕುಸಿತ ಕಂಡಾಗ ಅವುಗಳನ್ನು ಮಾರಲು ಹೋಗಬೇಡಿ.
ಎಷ್ಟು ಪ್ರಮಾಣದಲ್ಲಿ ಹೂಡಿಕೆ ಮಾಡಬಹುದು
ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರವಹಿಸುವುದು ಸೂಕ್ತ. ಏಕೆಂದರೆ ಬಹುತೇಕ ರಾಷ್ಟ್ರಗಳಲ್ಲಿ ಇಂದಿಗೂ ಕ್ರಿಪ್ಟೋ ನಾಣ್ಯಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಅದಕ್ಕಿಂತ ಹೆಚ್ಚಾಗಿ ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಈ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧ ಹೇರಿವೆ. ಈ ಹಿನ್ನೆಲೆಯಲ್ಲಿ ಹೂಡಿಕೆ ಮಾಡುವಾಗ ಸುರಕ್ಷಿತ ಪ್ರಮಾಣದ ಮೊತ್ತವನ್ನು ಹೂಡಿಕೆ ಮಾಡಿ.
ಆಂದರೆ, ನಿಮ್ಮ ದುಡಿಮೆಯ ಅಲ್ಪ ಭಾಗವನ್ನು ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಬಹುದು. ನಿಮ್ಮ ಹಣ ಹೋದರೂ ಕೂಡ ಅದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಮೇಲೆ ಹೆಚ್ಚೇನು ಪರಿಣಾಮ ಬೀರದಂತಿರಲಿ. ಉದಾಹರಣೆಗೆ ನಿಮ್ಮ ಒಟ್ಟು ಆದಾಯದಲ್ಲಿ ಶೇ.5ರಷ್ಟು ಹಣವನ್ನು ಕ್ರಿಪ್ಟೋ ನಾಣ್ಯಗಳಲ್ಲಿ ಹೂಡಿಕೆ ಮಾಡಬಹುದು. ಇದು ಸುರಕ್ಷಿತ ವಿಧಾನವಾಗಿದೆ. ಕೆಲ ಹೂಡಿಕೆದಾರರು ತಮ್ಮ ಆದಾಯದ ಶೇ.5ರಿಂದ 15ರವರೆಗೆ ಕ್ರಿಪ್ಟೋ ನಾಣ್ಯಗಳಲ್ಲಿ ಹೂಡಿಕೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.