ದಿವಾಳಿತನ ಅರ್ಜಿ: ಲಂಡನ್‌ ಹೈಕೋರ್ಟ್‌ನಲ್ಲಿ ವಿಜಯ್‌ ಮಲ್ಯಗೆ ಭಾರಿ ಹಿನ್ನಡೆ

ಲಂಡನ್‌ ಹೈಕೋರ್ಟ್‌ ಬ್ಯಾಂಕ್‌ಗಳ ಪರ ಆದೇಶ ನೀಡುವುದರೊಂದಿಗೆ ವಿಜಯ ಮಲ್ಯ ಬಾಕಿ ಇರಿಸಿಕೊಂಡಿರುವ ಸಾಲವನ್ನು ಮರು ವಸೂಲಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಮತ್ತೊಂದು ಹೆಜ್ಜೆ ಸಮೀಪಿಸಿದೆ.

ದಿವಾಳಿತನ ಅರ್ಜಿ: ಲಂಡನ್‌ ಹೈಕೋರ್ಟ್‌ನಲ್ಲಿ ವಿಜಯ್‌ ಮಲ್ಯಗೆ ಭಾರಿ ಹಿನ್ನಡೆ
Linkup
ಲಂಡನ್‌: ಉದ್ಯಮಿ ವಿಜಯ ಮಲ್ಯ ಬಾಕಿ ಇರಿಸಿಕೊಂಡಿರುವ ಸಾಲವನ್ನು ಮರು ವಸೂಲಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ಮತ್ತೊಂದು ಹೆಜ್ಜೆ ಸಮೀಪಿಸಿದ್ದು, ಲಂಡನ್‌ , ಬ್ಯಾಂಕ್‌ಗಳ ಪರ ಆದೇಶ ಹೊರಡಿಸಿದೆ. ಮಲ್ಯ ಅವರು ಸುಸ್ತಿ ಸಾಲಗಾರರಾಗಿರುವುದರಿಂದ, ಭಾರತದಲ್ಲಿ ಅವರು ಹೊಂದಿರುವ ಆಸ್ತಿಗಳ ಮೇಲಿನ ಭದ್ರತೆಯನ್ನು ರದ್ದುಪಡಿಸಿ ಪ್ರಕ್ರಿಯೆ ಕೈಗೊಳ್ಳಲು ಅವಕಾಶ ನೀಡಬೇಕು. ಸಾಲ ಮರು ವಸೂಲಾತಿಗೆ ಸಹಕರಿಸಬೇಕು ಎಂದು ಬ್ಯಾಂಕ್‌ಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದವು. ಬ್ಯಾಂಕ್‌ಗಳು ದಿವಾಳಿ ಘೋಷಣೆ ಪ್ರಕ್ರಿಯೆ ಕೈಗೊಳ್ಳುವುದನ್ನು ಪ್ರಶ್ನಿಸಿ, ಅವರು ಲಂಡನ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಅಂತಿಮ ವಿಚಾರಣೆಯನ್ನು ಜುಲೈ 26ಕ್ಕೆ ಹೈಕೋರ್ಟ್‌ ನಿಗದಿಪಡಿಸಿದೆ. ದಿವಾಳಿ ಆದೇಶ ಪ್ರಕಟವಾದ ನಂತರ ಬ್ಯಾಂಕ್‌ಗಳು ಸಾಲದ ಭದ್ರತೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವ ಹಕ್ಕನ್ನು ಹೊಂದಿವೆ ಎಂದು ನ್ಯಾಯಾಧೀಶರು ತಿಳಿಸಿದರು. '' ಮಲ್ಯ ಅವರು ಇನ್ನು ಗಡಿಪಾರು ಆಗಲೇಬೇಕು. ಅವರು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಕಳೆದ ವರ್ಷ ಮೇನಲ್ಲಿ ಅನುಮತಿಯನ್ನೂ ನಿರಾಕರಿಸಲಾಗಿದೆ," ಎಂದು ಬ್ಯಾಂಕ್‌ಗಳ ಪರ ವಕೀಲರು ಹೇಳಿದ್ದಾರೆ.