ಬೇಸಿಗೆ ಮಳೆಗೆ ತಂಪಾಯ್ತು ಇಳೆ.. ರಾಜಧಾನಿ ಬೆಂಗಳೂರು ಈಗ ಕೂಲ್‌ ಕೂಲ್..!

ಧಾರಾಕಾರ ಮಳೆ ಜೊತೆಯಲ್ಲೇ ಬೆಂಗಳೂರು ನಗರದಲ್ಲಿ ಈ ವಾರವಿಡೀ ಮೋಡ ಕವಿದ ವಾತಾವರಣ ಕೂಡಾ ಮುಂದುವರೆಯಲಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲೂ ಬೇಸಿಗೆ ಮಳೆ ತಂಪೆರೆಯಲಿದೆ.

ಬೇಸಿಗೆ ಮಳೆಗೆ ತಂಪಾಯ್ತು ಇಳೆ.. ರಾಜಧಾನಿ ಬೆಂಗಳೂರು ಈಗ ಕೂಲ್‌ ಕೂಲ್..!
Linkup
: ಬಿಸಿಲ ಬೇಗೆಯಿಂದ ಬಳಲಿದ್ದ ರಾಜಧಾನಿ ಜನರಿಗೆ ವರುಣ ದೇವ ಗುಡ್ ನ್ಯೂಸ್ ಕೊಟ್ಟಿದ್ಧಾರೆ. ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದೆ. ನಗರದಲ್ಲಿ ಮಂಗಳವಾರದಿಂದಲೇ ಮೋಡ ಕವಿದ ವಾತಾವರಣವಿತ್ತು. ಬುಧವಾರವೂ ಮೋಡ ಕವಿದ ವಾತಾವರಣ ಮುಂದುವರೆದಿತ್ತು. ಯಾವುದೇ ಕ್ಷಣದಲ್ಲೂ ಮಳೆಯಾಗುವ ಸಾಧ್ಯತೆ ಇತ್ತು. ಜನರ ಈ ನಿರೀಕ್ಷೆ ಹುಸಿಯಾಗಲಿಲ್ಲ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಗಳೂರಿನ ಹಲವೆಡೆ ಸುರಿಯಿತು. ಬೇಸಿಗೆಯಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ಕೊಂಚ ರಿಲ್ಯಾಕ್ಸ್‌ ಉಂಟು ಮಾಡಿತು. ಬೆಂಗಳೂರು ನಗರದಲ್ಲಿ ಬುಧವಾರ ಮಾತ್ರವಲ್ಲ, ಗುರುವಾರ ಹಾಗೂ ಶುಕ್ರವಾರವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆ ಜೊತೆಯಲ್ಲೇ ಬೆಂಗಳೂರು ನಗರದಲ್ಲಿ ಈ ವಾರವಿಡೀ ಮೋಡ ಕವಿದ ವಾತಾವರಣ ಕೂಡಾ ಮುಂದುವರೆಯಲಿದೆ. ಬೆಂಗಳೂರು ಮಾತ್ರವಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ತಂಪೆರೆಯಲಿದೆ. ಕರಾವಳಿ ಜಿಲ್ಲೆಗಳು, ಬೀದರ್, ಗುಲ್ಬರ್ಗ, ಯಾದಗಿರಿ, ಶಿವಮೊಗ್ಗ ಹಾಗೂ ಕೊಡಗು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಮಳೆಯ ಸಿಂಚನ ಆಗಲಿದೆ.