
ನೈಟ್ ಕರ್ಫ್ಯೂ ಅನ್ನೋದು ಎಷ್ಟರ ಮಟ್ಟಿಗೆ ಜೀವ ಹಿಂಡುತ್ತಿದೆ ಅನ್ನೋದಕ್ಕೆ ಹಲವು ಸಾಕ್ಷ್ಯಗಳು ಸಿಗುತ್ತಿವೆ. ಅದರಲ್ಲೂ ಬೆಂಗಳೂರಿನ ಜನರಿಗೆ ಅನ್ನೋದು ಜೀವ ಹಿಂಡುತ್ತಿದೆ.
ರಾತ್ರಿ 10 ಗಂಟೆಯ ಬಳಿಕ ನೈಟ್ ಕರ್ಫ್ಯೂ ಜಾರಿ ಮಾಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಆದ್ರೆ, ಜನರಿಗೆ ಮಾತ್ರ ರಾತ್ರಿ 8ರಿಂದಲೇ ನೈಟ್ ಕರ್ಫ್ಯೂ ಬಿಸಿ ತಟ್ಟೋಕೆ ಶುರುವಾಗುತ್ತೆ..! ಅದೂ ಕೂಡಾ ಹಾಗೂ ಆಟೋ ಹೆಸರಿನಲ್ಲಿ…!
ಹೌದು.. ರಾತ್ರಿ 8 ರಿಂದಲೇ ಆಟೋ ಹಾಗೂ ಕ್ಯಾಬ್‌ಗಳು ಪ್ರಯಾಣಿಕರಿಗೆ ಕರ್ಫ್ಯೂ ಬಿಸಿ ಮುಟ್ಟಿಸುತ್ತಿವೆ..! ರಾತ್ರಿ 10ರ ಒಳಗೆ ಮನೆ ಸೇರಬೇಕು, ಹೀಗಾಗಿ, 9ಕ್ಕೆ ಆಟೋ ಅಥವಾ ಕ್ಯಾಬ್ ಬುಕ್ ಮಾಡಿದರೆ ಸಾಕು ಎಂಬ ನಿಮ್ಮ ಲೆಕ್ಕಾಚಾರವನ್ನು ಚಾಲಕರು ಬುಡಮೇಲು ಮಾಡುತ್ತಾರೆ..!
ಕ್ಯಾಬ್‌ಗಳು ತಂತಾನೇ ರೈಡ್ ಕ್ಯಾನ್ಸಲ್ ಮಾಡಿಕೊಳ್ಳುತ್ತವೆ. ಆಟೋ ಚಾಲಕರು ಕೇಳುವ ದುಪ್ಪಟ್ಟು ದರಕ್ಕೆ ನೀವು ಸುಸ್ತಾಗಿ ಹೋಗುತ್ತೀರಾ..! ಇನ್ನು ರಾತ್ರಿ 10 ಗಂಟೆ ಆದ್ರೆ ಸಾಕು ಪೊಲೀಸರ ಕಾಟ ಶುರುವಾಗುತ್ತೆ..!
ರಾತ್ರಿ 10 ಗಂಟೆ ಒಳಗೆ ಮನೆ ಸೇರಬೇಕು ಎಂದಾದರೆ ಖಾಸಗಿ ವಾಹನ ಇರಲೇ ಬೇಕು ಎಂಬ ಅನಿವಾರ್ಯತೆ ಸೃಷ್ಟಿಯಾಗಿದೆ. ನೈಟ್ ಕರ್ಫ್ಯೂ ಲಾಭ ಪಡೆಯುತ್ತಿರುವ ಕ್ಯಾಬ್ ಹಾಗೂ ಆಟೋ ಚಾಲಕರು ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಕ್ಯಾಬ್‌ಗಳು ತಾವೇ ತಾವಾಗಿ ರೈಡ್‌ಗಳನ್ನು ಕ್ಯಾನ್ಸಲ್ ಮಾಡಿಕೊಂಡು ಸತಾಯಿಸಿದರೆ, ಆಟೋ ಚಾಲಕರು ಕೇಳುವ ದರವನ್ನು ಭರಿಸಲಾಗದೆ ಜನರು ಕಂಗೆಟ್ಟು ಹೋಗಿದ್ದಾರೆ.
ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರು ಸುಲಿಗೆ ಮಾಡುವ ಬಗ್ಗೆ ನಮ್ಮ ಗಮನಕ್ಕೆ ತನ್ನಿ, ನಾವು ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರೇನೋ ಭರವಸೆ ನೀಡುತ್ತಾರೆ. ಆದ್ರೆ, ಜನರು ಮಾತ್ರ ಮನೆ ಸೇರಬೇಕೋ ಅಥವಾ ದೂರು ನೀಡುತ್ತಾ ಸಂಕಷ್ಟಕ್ಕೆ ಸಿಲುಕಬೇಕೋ ಎಂಬ ಗೊಂದಲದಲ್ಲೇ ಪರದಾಡುವಂತಾಗಿದೆ.
ಇನ್ನು ಕರ್ಫ್ಯೂ ಉಲ್ಲಂಘಿಸುವ ವಾಹನಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವ ಭರಾಟೆ ಕೂಡಾ ಮುಂದುವರೆದಿದೆ. ದ್ವಿಚಕ್ರ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುವ ಭಯದಿಂದಾಗಿ ಕ್ಯಾಬ್ ಹಾಗೂ ಆಟೋ ಚಾಲಕರೂ ಕೂಡಾ ಯಾವುದೇ ರಿಸ್ಕ್ ತೆಗೆದುಕೊಳ್ಳಲು ರೆಡಿ ಇಲ್ಲ. ಹೀಗಾಗಿ, ಮನೆ ಸೇರುವ ಧಾವಂತದಲ್ಲಿ ಇರುವವರಿಗೆ ದೇವರೇ ಗತಿ ಎಂಬಂತಾಗಿದೆ.