ಬೆಂಗಳೂರಿನಲ್ಲಿ ಖಾಕಿ ಫಿಟ್‌ನೆಸ್..! 10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ 400 ಪೊಲೀಸ್ ಸಿಬ್ಬಂದಿ..!

'ಸಿಗರೇಟ್‌, ಆಲ್ಕೋಹಾಲ್‌ನಂತಹ ಚಟದ ಸಮಸ್ಯೆಯಿಂದ ಸಾಕಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಇಂತಹ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇವೆ. ಬಹಳಷ್ಟು ಮಂದಿ ಸುಧಾರಣೆ ಕಂಡಿದ್ದಾರೆ' - ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌

ಬೆಂಗಳೂರಿನಲ್ಲಿ ಖಾಕಿ ಫಿಟ್‌ನೆಸ್..! 10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ 400 ಪೊಲೀಸ್ ಸಿಬ್ಬಂದಿ..!
Linkup
: ಕೆಎಸ್‌ಆರ್‌ಪಿಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 400ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ 10 ಕೆಜಿಗಿಂತ ಹೆಚ್ಚು ಇಳಿಸಿದ್ದು, 100ಕ್ಕೂ ಅಧಿಕ ಸಿಬ್ಬಂದಿ ಡಿಅಡಿಕ್ಷನ್‌ ಸೆಂಟರ್‌ಗೆ ಸೇರಿ ಸಂಪೂರ್ಣವಾಗಿ ಮದ್ಯ ತ್ಯಜಿಸಿದ್ದಾರೆ ಎಂದು ಕೆಎಸ್‌ಆರ್‌ಪಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ತಿಳಿಸಿದರು. ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಶುಕ್ರವಾರ ನಡೆದ ಪೊಲೀಸ್‌ ಸೇವಾ ಕವಾಯತಿನಲ್ಲಿ ಭಾಗಿಯಾಗಿ 10 ಕೆಜಿಗಿಂತ ಹೆಚ್ಚು ತೂಕ ಇಳಿಸಿದ 22 ಪೊಲೀಸ್‌ ಸಿಬ್ಬಂದಿಗೆ ಪ್ರಶಂಸಾ ಪತ್ರ ವಿತರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸರ ನಿಗಾ ಕವಾಯತು ನಡೆಸಿದ್ದೇವೆ. ಸಿಗರೇಟ್‌, ಆಲ್ಕೋಹಾಲ್‌ನಂತಹ ಚಟದ ಸಮಸ್ಯೆಯಿಂದ ಸಾಕಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಇಂತಹ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇವೆ. ಬಹಳಷ್ಟು ಮಂದಿ ಸುಧಾರಣೆ ಕಂಡಿದ್ದಾರೆ. ಸಿಬ್ಬಂದಿಯ ಕುಂದು-ಕೊರತೆಗಳನ್ನು ಪರಿಶೀಲಿಸಲಾಗಿದೆ ಅಲೋಕ್‌ ಕುಮಾರ್ ವಿವರಿಸಿದರು. ಏನಿದು ಹೆಲ್ತ್ ಮಾನಿಟರಿಂಗ್‌ ಸಿಸ್ಟಂ? ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿ ಆರೋಗ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಅಲೋಕ್‌ ಕುಮಾರ್‌ ಅವರು ಹೆಲ್ತ್ ಮಾನಿಟರಿಂಗ್‌ ಸಿಸ್ಟಂ ಹಾಗೂ ವೇಯ್ಟ್ ಮಾನಿಟರಿಂಗ್‌ ಸಿಸ್ಟಂ ಅನ್ನು ಜಾರಿಗೆ ತಂದಿದ್ದರು. ಈ ಯೋಜನೆ ಪ್ರಕಾರ ಫಿಟ್ನೆಸ್‌ ಇಲ್ಲದ ಸಿಬ್ಬಂದಿಯನ್ನು ಮೂರು ಪ್ರತ್ಯೇಕ ತಂಡಗಳಾಗಿ ವಿಂಗಡಿಸಿ ಅವರಿಗೆ ಪುಡ್‌ ಚಾರ್ಟ್‌ ನೀಡಿ ಫಿಟ್‌ ಮಾಡಲಾಗುತ್ತದೆ. ಎ ಗುಂಪಿನಲ್ಲಿ ಆರೋಗ್ಯ ಸಮಸ್ಯೆ ಇಲ್ಲದೆ ಇರುವವರು, ಬಿ ಗುಂಪಿನಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆ ಇರುವವರು ಹಾಗೂ ಅಡಿಕ್ಷನ್‌ ಆಗಿರುವವರನ್ನು ಸಿ ಗುಂಪಿಗೆ ಸೇರಿಸಲಾಗುತ್ತದೆ. ಸಿಬ್ಬಂದಿಯ ಎತ್ತರಕ್ಕೆ ತಕ್ಕಂತೆ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡಲಾಗುತ್ತದೆ. ಬಳಿಕ ಸೇವಾ ಕವಾಯತು ನಡೆಸಿ ತೂಕ ಇಳಿಸಿದ ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಲಾಗುತ್ತದೆ.