ಬೆಂಗಳೂರಿನಲ್ಲಿ ಈ ವರ್ಷ ದಾಖಲೆಯ 1480 ಮಿ.ಮೀ ಮಳೆ; ವಾಯುಭಾರ ಕುಸಿತಕ್ಕೆ ಪರಿಸರ ಮಾಲಿನ್ಯ ಕಾರಣ!

ಪ್ರಸಕ್ತ ವರ್ಷ ರಾಜಧಾನಿಯಲ್ಲಿ ನ.1ರಿಂದ 20ರ ಅವಧಿಯಲ್ಲಿ ವಾಡಿಕೆಯ ಮಳೆ ಪ್ರಮಾಣ 40 ಮಿ.ಮೀ, ಆದರೆ ಸುರಿದಿರುವ ಮಳೆ 193 ಮಿ.ಮೀ., ವಾಡಿಕೆಗಿಂತ 153 ಮಿ.ಮೀ ಅಧಿಕ ಮಳೆಯಾಗಿದೆ. ಇದು ಕಳೆದ ಆರು ವರ್ಷಗಳ ನವೆಂಬರ್‌ ತಿಂಗಳಿನಲ್ಲಿ ಸುರಿದ ಅಧಿಕ ಮಳೆಯಾಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಈ ಅವಧಿಯಲ್ಲಿ 75 ಮಿ.ಮೀ ಮಳೆಯಾಗಿತ್ತು.

ಬೆಂಗಳೂರಿನಲ್ಲಿ ಈ ವರ್ಷ ದಾಖಲೆಯ 1480 ಮಿ.ಮೀ ಮಳೆ; ವಾಯುಭಾರ ಕುಸಿತಕ್ಕೆ ಪರಿಸರ ಮಾಲಿನ್ಯ ಕಾರಣ!
Linkup
ಮಹಾಬಲೇಶ್ವರ ಕಲ್ಕಣಿ ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ಇದುವರೆಗೂ 1480 ಮಿ.ಮೀ ಮಳೆಯಾಗಿದ್ದು, ಕಳೆದ ಮೂರು ವರ್ಷಗಳಿಂದೀಚೆಗೆ ಸುರಿದ ಇದಾಗಿದೆ. 2017 ರಲ್ಲಿ ರಾಜಧಾನಿಯಲ್ಲಿ 1696 ಮಿ.ಮೀ ಮಳೆಯಾಗಿತ್ತು. ಆ ನಂತರದ ವರ್ಷದಲ್ಲಿ ಮಳೆಯ ಪ್ರಮಾಣ ತಗ್ಗಿತ್ತು. 2018ರಲ್ಲಿ 764 ಮಿ.ಮೀ, 2019ರಲ್ಲಿ 831 ಮಿ.ಮೀ ಹಾಗೂ 2020ರಲ್ಲಿ 1082 ಮಿ.ಮೀ ಮಳೆಯಾಗಿದೆ. 2005ರಲ್ಲಿ ನಗರದಲ್ಲಿ 1606 ಮಿ.ಮೀ ಮಳೆಯಾಗಿದ್ದು 1900 ನಂತರ ಸುರಿದ ಹೆಚ್ಚಿನ ಮಳೆ ಎನ್ನುವ ದಾಖಲೆಯ ಕಡತ ಸೇರಿತ್ತು. ಅಧಿಕ ಮಳೆ ಏಕೆ ? ಬಂಗಾಳ ಕೊಲ್ಲಿಯಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಅಧಿಕ ಮಳೆಯಾಗುತ್ತಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು. ಮಳೆಯ ವೈಪರೀತ್ಯಕ್ಕೆ ಪ್ರಮುಖ ಕಾರಣ ಮತ್ತು ಜಾಗತಿ ತಾಪಮಾನದ ಹೆಚ್ಚಳ ಎನ್ನುತ್ತಾರೆ ತಜ್ಞರು. ನಗರದ ಮಳೆ ಲಾಭಕ್ಕಿಂತ ನಷ್ಟವೇ ಹೆಚ್ಚು ನಗರದಲ್ಲಿ ಸುರಿಯುತ್ತಿರುವ ಮಳೆ ಕುಡಿಯುವ ನೀರಿನ ಅಭಾವವನ್ನು ಕಡಿಮೆ ಮಾಡುವುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಅಧಿಕ ಮಳೆ ನಗರಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಉಂಟು ಮಾಡುತ್ತಿದೆ. ನೂರಾರು ಮನೆಗಳು ಮಳೆಯಿಂದ ನೆಲಕ್ಕುರುಳಿದರೆ, ಸಾವಿರಾರು ಮರಗಳು, ವಿದ್ಯುತ್‌ ಕಂಬಗಳು, ವಾಹನಗಳು ಮಳೆಗೆ ಹಾನಿಗೀಡಾಗಿವೆ. ವ್ಯಾಪಾರ ವಹಿವಾಟು ಕೂಡ ಕಡಿಮೆಯಾಗಿದೆ. ವಿಶೇಷವಾಗಿ ಬೀದಿಬದಿಯ ವ್ಯಾಪಾರಿಗಳ ಬದುಕು ಬೀದಿಗೆ ಬಂದಿದೆ. ರಸ್ತೆ, ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳು ಮಳೆಯಿಂದ ನನೆಗುದಿಗೆ ಬಿದ್ದಿವೆ. ಡೆಂಗೆ, ಚಿಕೂನ್‌ಗೂನ್ಯ ರೋಗಗಳ ಜತೆ ಸಾಂಕ್ರಾಮಿಕ ರೋಗಗಳು ಇದರಿಂದ ಅಧಿಕವಾಗುವ ಸಾಧ್ಯತೆ ಇದೆ. ನವೆಂಬರ್‌ನಲ್ಲಿ ವಿಪರೀತ ಮಳೆ ಪ್ರಸಕ್ತ ವರ್ಷ ರಾಜಧಾನಿಯಲ್ಲಿ ನ.1ರಿಂದ 20ರ ಅವಧಿಯಲ್ಲಿ ವಾಡಿಕೆಯ ಮಳೆ ಪ್ರಮಾಣ 40 ಮಿ.ಮೀ, ಆದರೆ ಸುರಿದಿರುವ ಮಳೆ 193 ಮಿ.ಮೀ., ವಾಡಿಕೆಗಿಂತ 153 ಮಿ.ಮೀ ಅಧಿಕ ಮಳೆಯಾಗಿದೆ. ಇದು ಕಳೆದ ಆರು ವರ್ಷಗಳ ನವೆಂಬರ್‌ ತಿಂಗಳಿನಲ್ಲಿ ಸುರಿದ ಅಧಿಕ ಮಳೆಯಾಗಿದೆ. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಈ ಅವಧಿಯಲ್ಲಿ 75 ಮಿ.ಮೀ ಮಳೆಯಾಗಿತ್ತು. ಈಶಾನ್ಯ ಮಾನ್ಸೂನ್‌ (ಹಿಂಗಾರು ಮಾರುತ) ನ.20ರವರೆಗೆ ವಾಡಿಕೆಯ ಪ್ರಕಾರ ನಗರಕ್ಕೆ 195 ಮಿ.ಮೀ ಮಳೆ ಸುರಿಸುತ್ತಿದ್ದವು. ಆದರೆ ಈ ವರ್ಷ 447 ಮಿ.ಮೀ ಮಳೆ ಸುರಿಸಿವೆ. ನಗರದಲ್ಲಿ ಕೆಲವು ವರ್ಷಗಳಿಂದ ನವೆಂಬರ್‌ ತಿಂಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. 2015ರ ನವೆಂಬರ್‌ನಲ್ಲಿ 296.4 ಮಿ.ಮೀ ಮಳೆಯಾಗಿದೆ. 2013ರಲ್ಲಿ143.7 ಮಿ.ಮೀ, 2012 ರಲ್ಲಿ125.0 ಮಿ.ಮೀ ಮತ್ತು 2011 ರಲ್ಲಿ49.9 ಮಿ.ಮೀ ಮಳೆ ದಾಖಲಾಗಿದೆ. ವಾಡಿಕೆಯ ಪ್ರಕಾರ ನವೆಂಬರ್‌ ತಿಂಗಳಲ್ಲಿ ಮಳೆಯ ಪ್ರಮಾಣ 52 ಮಿ.ಮೀ.